ವಿಜಯಪುರ,(ಜ.9): ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಸ್ಮಾಸುರ ಎಂದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಇಂದು (ಬುಧವಾರ) BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಾಂಗ್ರೆಸ್ ತಲೆ ಮೇಲೆ ಕೈ ಇಟ್ಟಿರುವ JDS ವರಿಷ್ಠ ದೇವೇಗೌಡರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂಬಲೇಬಾರದು. ದೇವೇಗೌಡರಿಗೆ ರಾತ್ರಿ ವೇಳೆ ನಾಯಕರನ್ನು ಭೇಟಿಯಾಗುವ ಚಾಳಿ ಇದೆ ಎಂದು ಕಿಡಿಕಾರಿದರು.

ದೇವೇಗೌಡ ಆಟ ಬಲ್ಲವರು ಎಂದ ಬಸನಗೌಡಪಾಟೀಲ್ ಯತ್ನಾಳ್, ಇವರ ಆಟದ ಬಗ್ಗೆ ಬಿಜೆಪಿ ನಾಯಕರು ಎಚ್ಚರವಹಿಸಬೇಕು.

ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿ ಜೆಡಿಎಸ್ ನವರ ಕಾಲಿಗೆ ಬೀಳುತ್ತಿದ್ದಾರೆ ಎಂದು ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.