ಮೈಸೂರು (ಫೆ.14):  ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿಯವರೇ ಮೇಯರ್‌ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಮೈಸೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ವಿಚಾರವು ಈಗಾಗಲೇ ರಾಜ್ಯ ಮಟ್ಟದ ನಾಯಕರ ಜೊತೆ ಮಾತುಕತೆ ಆಗಿದೆ.

ಬಿಬಿಎಂಪಿ ಚುನಾವಣೆಯತ್ತ ಕಾಂಗ್ರೆಸ್‌ ಚಿತ್ತ ..

 ಆದರೆ, ಸ್ಥಳೀಯ ಮಟ್ಟದ ನಾಯಕರ ಜೊತೆ ಇನ್ನೂ ಚರ್ಚೆ ಮಾಡಿಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆದುಕೊಳ್ಳಬೇಕಿದೆ ಎಂದರು.

ಈಗ ತಾನೆ ಮೇಯರ್‌ ಮತ್ತು ಉಪ ಮೇಯರ್‌ ಮೀಸಲಾತಿ ಘೋಷಣೆ ಆಗಿದೆ. ಈ ಬಾರಿ ಬಿಜೆಪಿಯವರೇ ಮೇಯರ್‌ ಮಾಡಬೇಕೆಂಬ ವಿಶ್ವಾಸವಿದೆ. ಈ ವಿಚಾರವನ್ನು ಪಕ್ಷದ ನಾಯಕರು, ಮುಖ್ಯಮಂತ್ರಿಯೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.