Karnataka politics : ಡಿಕೆ ಬ್ರದರ್ಸ್‌ ವಿರುದ್ಧ ಭುಗಿಲೆದ್ದ ಆಕ್ರೋಶ

  •  ಡಿಕೆ ಬ್ರದರ್ಸ್‌ ವಿರುದ್ಧ  ಆಕ್ರೋಶ
  •  ಸಂಸದ ಡಿ.ಕೆ.ಸುರೇಶ್‌ ಗೂಂಡಾ ವರ್ತನೆ  ಸಂಸ್ಕೃತಿ ತೋರಿಸುತ್ತದೆ: ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಟೀಕೆ
     
BJP  Leaders Slams DK  Brothers  For Ramanagara incident snr

 ಚಿಕ್ಕಬಳ್ಳಾಪುರ (.05): ರಾಮನಗರದಲ್ಲಿ (ramanagar) ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್‌ (DK Suresh)  ಎಂಎಲ್‌ಸಿ ರವಿ (MLC Ravi)  ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ (BJP) ಪಕ್ಷದ ಕಾರ್ಯಕರ್ತರು ಡಿಕೆ ಸಹೋದರರ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ನಗರದ ಬಿಬಿ ರಸ್ತೆಯ ಬಲಮುರಿ ವೃತ್ತದಲ್ಲಿ ಡಿಕೆ ಸಹೋದರರ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ (BJP) ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ಕೂಡಲೇ ಡಿ.ಕೆ.ಸುರೇಶ್‌ ಹಾಗೂ ಎಂಎಲ್‌ಸಿ ರವಿರನ್ನು ಸಂಸದ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಘೋಷಣೆಗಳನ್ನು ಕೂಗಿದರು.

ಕೆಂಪೇಗೌಡ, ಅಂಬೇಡ್ಕರ್‌ಗೆ ಮಾಡಿದ ಅಪಮಾನ

ಸಿಎಂ ಪಾಲ್ಗೊಂಡಿದ್ದ (CM ) ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್‌ ತಾವೊಬ್ಬ ಸಂಸದರು ಎಂಬುದನ್ನು ಮರೆದು ಗೂಂಡಾ ರೀತಿ ವರ್ತಿಸಿ ಅವರ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ. ಸಿಎಂ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆ ಅವರಿಗೆ ಇಲ್ಲ. ಇದು ಡಿ.ಕೆ.ಸಹೋದರರು ನಾಡಿನ ಮುಖ್ಯಮಂತ್ರಿಗೆ ಮಾಡಿದ ಅವಮಾನ ಅಲ್ಲ. ಬದಲಾಗಿ ಕೆಂಪೇಗೌಡ ಹಾಗೂ ಅಂಬೇಡ್ಕರ್‌ (ambedkar) ಪ್ರತಿಮೆ ಆನಾವರಣ ಕಾರ್ಯಕ್ರಮಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಕಾರ್ಯಕರ್ತರು ಟೀಕಿಸಿದರು.

ಸಂಸದರಾಗಿ ಡಿ.ಕೆ.ಸುರೇಶ್‌, ತಮ್ಮ ಕ್ಷೇತ್ರದ ಅಭಿವೃದ್ದಿಗೆ ಮನವಿ ಮಾಡಲು ಎಲ್ಲಾ ರೀತಿಯ ಅವಕಾಶಗಳು ಇದ್ದವು. ಆದರೆ ಹತಾಶೆಯಿಂದ ಬಿಜೆಪಿ (BJP) ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ವೇದಿಕೆಗೆ ಅಗೌರವ ತೋರಿದ್ದಾರೆ. ಒಬ್ಬ ಸಂಸದರಾಗಿ ಇರಲು ಡಿ.ಕೆ.ಸುರೇಶ್‌ ಅವರಿಗೆ ನೈತಿಕತೆ ಇಲ್ಲ. ರಾಮನಗರದಲ್ಲಿ ಬರೀ ಗೂಂಡಾ ಸಂಸ್ಕೃತಿ ಮೂಲಕ ಬೆಳೆಯುತ್ತಿರುವ ಇವರು ಅಭಿವೃದ್ದಿಗೆ ಶೂನ್ಯವಾಗಿದೆ. ಇಂತಹವರಿಗೆ ಅಲ್ಲಿನ ಜನತೆ ತಕ್ಕಪಾಠ ಕಲಿಸಲಿದ್ದಾರೆ. ಡಿ.ಕೆ.ಸುರೇಶ್‌ (DK Suresh) ಒಬ್ಬ ವಿಕೃತ ಮನಸ್ಸಿನ ವ್ಯಕ್ತಿ, ಅವರು ವೇದಿಕೆಯಲ್ಲಿ ತೋರಿದ ದರ್ಪ, ದೌರ್ಜನ್ಯ ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆಯೆಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಳುವನಹಳ್ಳಿ ಲೋಕೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ರೈತ ಮೋಚಾ ಜಿಲ್ಲಾಧ್ಯಕ್ಷ ರಾಜಶೇಖರ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್‌ ಕುಮಾರ್‌, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲೀಲಾವತಿ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್‌, ಪದಾಧಿಕಾರಿಗಳಾದ ದೇವಸ್ಥಾನಹಳ್ಳಿ ರಾಮಣ್ಣ, ಲಕ್ಷ್ಮೇನಾರಾಯಣಗುಪ್ತ, ಕೋಟಗಲ್‌ ಪ್ರದೀಪ್‌, ಚಿಂತಾಮಣಿ ದೇವರಾಜ್‌, ಲಕ್ಷ್ಮೇಪತಿ, ಸಿ.ಬಿ.ಕಿರಣ್‌, ಶಿಡ್ಲಘಟ್ಟನಂದೀಶ್‌ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಜಟಾಪಟಿ : 

ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ಆಡಿದ ‘ಗಂಡಸ್ತನ’ ಕುರಿತ ಉದ್ಧಟತನದ ಮಾತು ಹಾಗೂ ಅದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರ ಕ್ರಮದಿಂದಾಗಿ ಅವರ ಹಾಗೂ ಅವರ ಪಕ್ಷದ ಸಂಸ್ಕೃತಿ ಅನಾವರಣಗೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಮನಗರದಲ್ಲಿ ನಡೆದ ಘಟನೆಯ ಸಂಬಂಧ ಸಂಸದ ಡಿ.ಕೆ.ಸುರೇಶ್‌(DK Suresh) ವಿರುದ್ಧ ಬಿಜೆಪಿಯವರು(BJP) ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶದಲ್ಲಿ ಪ್ರತಿಭಟನೆ ಮಾಡಲಿ. ಸಚಿವ ಅಶ್ವತ್ಥನಾರಾಯಣ ಅವರ ಉದ್ಧಟತನದ ಮಾತುಗಳನ್ನು ಜನರು ನೋಡಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ತಮ್ಮ ಸಚಿವರು ಆಡಿರುವ ನುಡಿಮುತ್ತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಸಚಿವ ಆರ್‌.ಅಶೋಕ್‌(R Ashok) ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ. ಅವರ ಸಂಸ್ಕೃತಿಯ(Culture) ದರ್ಶನ ಎಲ್ಲರಿಗೂ ಆಗಿದೆ ಎಂದರು.

Karnataka Politics: ರಾಮನಗರ ಜಗಳ, ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

ಗಂಡಸ್ತನ ಬಗ್ಗೆ ಚರ್ಚೆಗೆ ಬರುವೆ, ಸಮಯ ತಿಳಿಸಿ

‘ಗಂಡಸ್ತನ’ ಕುರಿತು ಚರ್ಚೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡುವಂತೆ ಸಚಿವ ಅಶ್ವತ್ಥನಾರಾಯಣ ಅವರಿಗೆ ಹೇಳಿದ್ದೆ. ಈ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಪಲಾಯನ ಮಾಡುವವನಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥನಾರಾಯಣ ಅವರಿಗೆ ನೀವು ಮಾತನಾಡುತ್ತಿರುವುದು ಸರಿಯಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಕಾರ್ಯಕ್ರಮದಲ್ಲಿ ಹೇಳಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಅವರೂ ಭಾಷಣದಲ್ಲಿ ರಾಜಕೀಯ ಬೆರೆಸಬೇಡಿ ಎಂದರು. ಆದರೂ, ಅವರು ‘ಗಂಡಸ್ತನ’ ಪದ ಬಳಸಿ ಉದ್ಧಟತನ ತೋರಿದ್ದಾರೆ. ನಾನಿಲ್ಲಿ ನೆಪಮಾತ್ರ, ಇದು ನನಗೆ ಹಾಕಿದ ಸವಾಲಲ್ಲ. ಇಡೀ ರಾಮನಗರದ(Ramanagara) ಜನತೆಗೆ ಹಾಕಿದ ಸವಾಲು. ಜಿಲ್ಲೆಯ ಜನರ ಸ್ವಾಭಿಮಾನವನ್ನು ಅಶ್ವತ್ಥನಾರಾಯಣ ಕೆಣಕಿದ್ದಾರೆ. ಇಡೀ ಕರ್ನಾಟಕದ(Karnataka) ಯುವಕರಿಗೆ ಅವಮಾನ ಮಾಡಿದ್ದಾರೆ. ಗಂಡಸ್ತನದ ಬಗ್ಗೆ ಚರ್ಚೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡಲು ಹೇಳಿದ್ದೇನೆ. ನನ್ನ ಈ ಹೇಳಿಕೆಯಿಂದ ಪಲಾಯನ ಮಾಡುವುದಿಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios