Suresh Kumar Simplicity : ಸ್ನೇಹಿತರೊಂದಿಗೆ ಬಿಎಂಟಿಸಿ ಏರಿದ ಸುರೇಶ್ ಕುಮಾರ್

* ಬಿಎಂಟಿಸಿಯಲ್ಲಿ  ಪ್ರಯಾಣಿಸಿದ ಸುರೇಶ್ ಕುಮಾರ್
* ಸುರೇಶ್ ಕುಮಾರ್ ಸರಳತೆಗೆ ಮೆಚ್ಚುಗೆ
* ಸೋಶಿಯಲ್ ಮೀಡಿಯಾದಲ್ಲೂ ಸದಾ ಆಕ್ಟೀವ್

BJP Leaders S Suresh kumar travels in bmtc bus Bengaluru mah

ಬೆಂಗಳೂರು (ಜ. 01) ಬಿಜೆಪಿ ನಾಯಕ, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಸದಾ ಸರಳತೆಗೆ ಹೆಸರುವಾಸಿ.  ಈ ಬಾರಿ ಅವರು ಜನರ ಮುಂದೆ ಬಂದ ರೀತಿ ಮತ್ತಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಬೆಂಗಳೂರಿನ (Bengaluru) ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ (BMTC) ಬಸ್ ಮೂಲಕ ಸಂಚರಿಸಿದ್ದಾರೆ. ನಿರ್ವಾಹಕನ ಜತೆ, ನಾಗರಿಕರ ಜತೆ ತಮ್ಮ ಎಂದಿನ ಸರಳ ಭಾಷೆಯಲ್ಲಿ ಮಾತನಾಡಿದ್ದಾರೆ. ಜನರು ಸಹ ಸುರೇಶ್ ಕುಮಾರ್ ಅವರನ್ನು ಅಷ್ಟೇ ಆಪ್ತತೆಯಿಂದ ಬರಮಾಡಿಕೊಂಡಿದ್ದಾರೆ.

ಡಿಸೆಂಬರ್ 31  ರ ಮುಂಜಾನೆ  ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ನಡೆದುಕೊಂಡು ಬಂದಿದ್ದಾರೆ.  ಅಲ್ಲಿಂದ ಸ್ನೇಹಿತರೊಂದಿಗೆ ಬಿಎಂಟಿಸಿ ಬಸ್  ಏರಿದ ಸುರೇಶ್ ಕುಮಾರ್ ತಾವರೆಕೆರೆಯವರೆಗೂ ಬಸ್‍ನಲ್ಲಯೇ ಸಂಚರಿಸಿ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ ಅಂಗರಕ್ಷಕರು ಜತೆಯಲ್ಲಿ ಇರಲಿಲ್ಲ. ಟಿಕೆಟ್ ಪಡೆದುಕೊಂಡು ಸಂಚರಿಸಿದ್ದು ನಾಗರಿಕರು ಸರಳತೆಯನ್ನು  ಕೊಂಡಾಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಆಕ್ಟೀವ್ ಆಗಿರುವ ಸುರೇಶ್ ಕುಮಾರ್ ಸಣ್ಣ ಸಣ್ಣ ವಿಚಾರಗಳನ್ನು  ಹಂಚಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ ಸಂದರ್ಭ ಶಿಕ್ಷಣ ಸಚಿವರಾಗಿದ್ದರು.  ಬದಲಾದ ರಾಜಕಾರಣದ ವಾತಾವರಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿತ್ತು. ಕೊರೋನಾ ಸವಾಲಿನ ನಡುವೆಯೂ ಕಳೆದ ವರ್ಷ ಎಸ್‌ಎಸ್‌ಎಲ್ ಸಿ ಪರೀಕ್ಷೆ ಯಶಸ್ಸಿನ ಹಿಂದೆ ಸುರೇಶ್ ಕುಮಾರ್ ಶ್ರಮವಿತ್ತು.

ಹಂಸಲೇಖ ಪತ್ನಿಗೆ ಅಭಿನಂದನೆ ಹೇಳಿದ ಸುರೇಶ್ ಕುಮಾರ್

ಶಾಂತಾರಾಮ್ ಬೇಸರ:  ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ(Shantharam Siddi) ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿರುವ ಫೋಟೊ ಒಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿತ್ತು. ಆದರೆ ಈ ವಿಚಾರಕ್ಕೆ ಶಾಸಕರೇ ಬೇಸರ ವ್ಯಕ್ತಪಡಿಸಿದ್ದರು.

ಶಾಂತಾರಾಮ ಸಿದ್ದಿ  ರಾಣೇಬೆನ್ನೂರಿನ ಬಸ್ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದ ಪೋಟೋ ವೈರಲ್ ಆಗಿತ್ತು.. ಅವರ ಈ ಸರಳತೆಗೆ ಮೆಚ್ಚುಗೆ ಸೂಚಿಸಿ ಹಲವು ಮಂದಿ ಫೋಟೊ ಹಂಚಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯರ ಸರಳತೆ, ಜೀವನಶೈಲಿಯ ಬಗ್ಗೆ ಹೊಗಳಿಕೆಯ ನುಡಿಗಳನ್ನು ಬರೆದಿದ್ದರು.

ಈ ಫೋಟೊ ವೈರಲ್ ಆಗಿರುವುದರ ಬಗ್ಗೆ ಇದೀಗ ಸ್ವತಃ ಶಾಂತರಾಮ ಸಿದ್ದಿ ಪ್ರತಿಕ್ರಿಯಿಸಿದ್ದು, ಫೋಟೊ ವೈರಲ್ ಆಗಿರುವುದು ಸರಿ ಕಂಡಿಲ್ಲ, ಇದರಿಂದ ಬೇಸರವಾಗಿದೆ ಎಂದಿದ್ದರು.

ಕಳೆದ ಎರಡು ದಿನಗಳಿಂದ ರಾಣೆಬೆನ್ನೂರಿನ ಬಸ್ ಸ್ಟಾಂಡ್​ನಲ್ಲಿ ಬಸ್​ಗೆ ಕಾಯುತ್ತಿರುವ ಫೋಟೊ ಹಾಕಿ ಹೊಗಳಿಕೆ ಮಾತು ಬರೆದಿದ್ದೀರಿ. ನನಗೆ ಅದು ಅಷ್ಟೊಂದು ಖುಷಿ ಕೊಟ್ಟಿಲ್ಲ. ಸಂಘದ ಸ್ವಯಂ ಸೇವಕರಿಗೆ ಈ ಥರದ್ದು ಹೊಸದಲ್ಲ. ಮೊದಲು ಹೀಗೆ ಓಡಾಡುತ್ತಿದ್ದೆ. ಈಗಲೂ ಓಡಾಡ್ತಿದ್ದೇನೆ. ಮುಂದೆ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮುಗಿದ ಮೇಲೆ ಮತ್ತೆ ಹೀಗೆ ಓಡಾಡಲೇಬೇಕು ಎಂದು ಶಾಂತರಾಮ ಸಿದ್ದಿ ಹೇಳಿದ್ದರು, 

 

Latest Videos
Follow Us:
Download App:
  • android
  • ios