ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಬಿಜೆಪಿ ಮುಖಂಡರು ಭೇಟಿ ಮಾಡಿದ್ದಾರೆ. ಚುನಾವಣೆ ಮೈತ್ರಿ ಸಂಬಂಧ ಭೇಟಿ ಮಾಡಿದ್ದಾರೆ.
ಮೈಸೂರು (ಫೆ.24): ನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ನಾಯಕರು ಭೇಟಿಯಾದರು.
ನಗರದ ಹೊರ ವಲಯದಲ್ಲಿನ ಸೈಲೆಂಟ್ ಶೋರ್ಸ್ ರೆಸಾರ್ಟ್‌ನಲ್ಲಿ ಭೇಟಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಸ್.ಎ. ರಾಮದಾಸ್ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಗೌಪ್ಯವಾಗಿ ಮಾತುಕತೆ ನಡೆಸಿದರು.
'ಎರಡು ವರ್ಷ GT ದೇವೇಗೌಡ ಜೆಡಿಎಸ್‌ನಲ್ಲಿ ಇರುತ್ತಾರೆ' ...
ಇದಲ್ಲದೆ ಶಾಸಕ ತನ್ವೀರ್‌ಸೇಠ್ ಕೂಡ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಆಗಮಿಸಿದ್ದರು. ಆದರೆ ಸಭೆ ಮುಗಿದ ಬಳಿಕ ಮಾತನಾಡುವುದಾಗಿ ಹೇಳಿದರು.
