ರಾಜ್ಯ ರಾಜಕೀಯ ದಿನದಿನವೂ ಹೊಸ ಬೆಳವಣಿಗೆ ಬಿಜೆಪಿಯಲ್ಲಿ ತಾರಕಕ್ಕೇರಿದ ಮುಖ್ಯಮಂತ್ರಿ ಬದಲಾವಣೆ ವಿಚಾರ ಈ ಎಲ್ಲದರ ನಡುವೆ ಇಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಗುಂಡ್ಲುಪೇಟೆ (ಜು.22): ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಬಿಜೆಪಿಯ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಮುಖಂಡ ಎಚ್‌ ಎಂ ಗಣೇಶ್ ಪ್ರಸಾದ್, ಚಾಮುಲ್ ಅಧ್ಯಕ್ಷ ನಂಜುಂಡ ಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. 

ಗ್ರಾಮದ ಬಿಜೆಪಿ ಮುಖಂಡರಾದ ಚಂದ್ರು ಶಿವಮೂರ್ತಿ ಎಂ.ಸಿ ಸ್ವಾಮಿ , ಮಾಣಿಕ್ಯ, ಬಸವರಾಜು, ಬಿ. ಮಹೇಶ್, ರಾಜಪ್ಪ ಮತ್ತವರ ಬೆಂಬಲಿಗರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದರು.

ನಿರಂತರ ಕಮಲ ಪಾಳಯ ಸಂಪರ್ಕ : ಕೊಳ್ಳೇಗಾಲ ಶಾಸಕ ಶೀಘ್ರ ಬಿಜೆಪಿ ಸೇರ್ಪಡೆ?

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಮುಖಂಡರನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಪಕ್ಷದ ಶಲ್ಯ ಹಾಕುವ ಮೂಲಕ ಬರಮಾಡಿಕೊಂಡರು.

ಈ ಸಮಯದಲ್ಲಿ ಹಲವು ಮುಖಂಡರು, ಕೈ ನಾಯರು ಸ್ಥಳದಲ್ಲಿ ಹಾಜರಿದ್ದರು.