Asianet Suvarna News Asianet Suvarna News

'ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು'

ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಬಿರುಸುಗೊಂಡ ರಾಜಕೀಯದ ಬೆನ್ನಲ್ಲೇ ಪಕ್ಷಾಂತರ ಪರ್ವವೂ ನಡೆದಿದೆ. 

BJP Leaders Join Congress in Chamarajanagar snr
Author
Bengaluru, First Published Oct 30, 2020, 3:37 PM IST

ಗುಂಡ್ಲುಪೇಟೆ (ಅ.30): ತಾಲೂಕಿನ ಭೀಮನ ಬಿಡು ಗ್ರಾಮದ ಬಿಜೆಪಿ ಮುಖಂಡ ಮಹೇಶ್ ಮತ್ತು ಅವರ ಬೆಂಬಲಿಗರು  ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ  ಸರಳ ಸಬೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್‌ ಎಂ ಗಣೇಶ ಪ್ರಸಾದ್ ನಾಯಕತ್ವ ಒಪ್ಪಿ ಬಿಜೆಪಿ  ಮುಖಂಡ ಮಹೇಶ್ ತಮ್ಮ ಬೆಂಬೆಲಿಗರೊಂದಿಗೆ ಕಾಂಗ್ರೆಸ್ ಸೇರಿದರು. 

ಪಕ್ಷ ಸೇರ್ಪಡೆಗೊಂಡ ಬಿಜೆಪಿ ಮುಖಂಡರಾದ ಮಹೇಶ್ ನಂಜುಂಡಸ್ವಾಮಿ ಸ್ವಾಮಿ, ಪುಟ್ಟ ಬಸವಶೆಟ್ಟಿ, ಕಿಟ್ಟಿ, ಬಚ್ಚನ್ಗೆ ಕಾಂಗ್ರೆಸ್ ಪಕ್ಷದ ಶಲ್ಯ ಹಾಕಿ ಬರಮಾಡಿಕೊಂಡರು. 

'ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ್ಮೇಲೆ ನಾನು ಹೋಗದಿದ್ರೆ ತಪ್ಪಾಗುತ್ತೆ'

ಈ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್‌ ಎಂ ಗಣೇಶ ಪ್ರಸಾದ್ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ನಿಜ. ಆದರೆ ಪಕ್ಷ ಸುಭದ್ರವಾಗಿದೆ ಎಂದರು. 

 ಪಕ್ಷ  ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೀರಾ. ಪಕ್ಷದ ಸಂಘಟನೆಗೆ ಮುಂದಿನ ಚುನಾವಣೆಯಲ್ಲಿ ನಿಷ್ಟರಾಗಿ ದುಡಿಯಿರಿ ನಿಮ್ಮ ಜೊತೆ ಸದಾ ನಾನಿರುತ್ತೇನೆ ಎಂದರು. ಈ ಸಮಯದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಶೆಟ್ಟಿ, ಮುಖಂಡರಾದ ಬಿ ಜಿ ಶಿವಕುಮಾರ್, ಭಂಗಿ ಸ್ವಾಮಿ, ಮಂಜು ಸೇರಿದಂತೆ ಗ್ರಾಮದ ಉಪ್ಪಾರ ಜನಾಂಗದ ಮುಖಂಡರು ಇದ್ದರು. 

Follow Us:
Download App:
  • android
  • ios