ತುಮಕೂರು (ನ.26): ನಾನು ಯಾವದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ  ಹೋಗುವುದಿಲ್ಲ. ಆದರೆ ಬಿಜೆಪಿಯಿಂದ ನಿರಂತರ ಆಹ್ವಾನವಿದೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ. 

ಬಿಜೆಪಿ ಮುಖಂಡರ ಜೊತೆಗಿನ  ಭೇಟಿ ಸಂಬಂಧ ಪ್ರತಿಕ್ರಿಯಿಸಿದ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗಿದ್ದೆ ಎಂದು ಹೇಳಿದರು. 

ನಾನು ಭೇಟಿ ಮಾಡಲು ತೆರಳಿದ ಮುಖಂಡರು ಸಿಗದ ಕಾರಣ ಅಲ್ಲಿಯೇ ಪಕ್ಕದಲ್ಲಿದ್ದ ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದೆ ಎಂದರು. 

ಜೈಲಿಗೆ ಹೋದ ನಾಯಕನ ಉಚ್ಛಾಟನೆಗೆ ಡಿಕೆಶಿ ಹಿಂದೇಟು : ಅಖಂಡ ಮಾತಿಗೆ ಡೋಂಟ್ ಕೇರ್ ...

ಜಾರಕಿಹೊಳಿ ಮನೆಗೆ ಹೋಗಿ ಎಸ್‌ ಟಿ ಸಮುದಾಯಕ್ಕೆ ಶೆ.3 ರಿಂದ ಶೇ.7.5 ರಷ್ಟು ಮೀಸಲಾತಿ  ಹೆಚ್ಚಿಸುವ  ಬಗ್ಗೆ ಚರ್ಚಿಸಿದೆ. ಈ ವೇಳೆ ರಮೇಶ್ ಜಾರಕಿಹೊಳಿ ಮನೆಗೆ ರಾಜೂಗೌಡ, ಪ್ರತಾಪ್ ಗೌಡ, ಸಿ ಪಿ ಯೋಗೇಶ್ವರ್ ಇದ್ದರು ಎಂದು ಅವರು ತಿಳಿಸಿದರು.