ಬಳ್ಳಾರಿ (ಸೆ. 26):  ನಮ್ಮ ಸರ್ಕಾರ ರೈತರಿಗೆ ಮೊದಲ ಆದ್ಯತೆ ನೀಡಿದೆ. ಬಡ ಕುಟುಂಬಗಳಿಗೆ 5 ಲಕ್ಷದವರೆಗಿನ ಆರೋಗ್ಯ ವಿಮೆ ನೀಡಿದೆ. ಪ್ರತಿ ಹಳ್ಳಿಗೆ ವಿದ್ಯುತ್ ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಸಂಸ್ಕರಣ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹೇಳಿದ್ದಾರೆ. 

ದೇಶದ ಮಹನೀಯರು ಕಂಡ ಭವಿಷ್ಯ ಭಾರತದ ಕನಸು ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಾರಗೊಂಡಿದೆ. ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಮೋದಿಯವರನ್ನು ಕಳ್ಳ ಎಂದಿದ್ದಾರೆ. 2014 ರವರೆಗೆ ದೇಶದಬ್ಯಾಂಕುಗಳನ್ನು ಲೂಟಿ ಮಾಡಲು ಬಿಟ್ಟಿದ್ದು ಕಾಂಗ್ರೆಸ್ ಎಂದು ಸಾಧ್ವಿ ನಿರಂಜನ್ ಹೇಳಿದ್ದಾರೆ. 

ಮತ್ತೊಮ್ಮೆ ಕೇಂದ್ರದಲ್ಲಿ ನಾವೇ ಅಧಿಕಾರ ಹಿಡಿಯಲಿದ್ದೇವೆ. ನಾವು ಎಲ್ಲರ ಜೊತೆಗೆ ಇದ್ದೇವೆ. ಕೇವಲ ಅಲ್ಪಸಂಖ್ಯಾತರ ಜೊತೆ ಮಾತ್ರ ಅಲ್ಲ. ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಗೆ ನ್ಯಾಯ ಕೊಟ್ಟವರು ನಾವು. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದೊಂದೇ ಅಭಿವೃದ್ಧಿ ವಿಚಾರ ಎಂದು ಹೇಳಿದ್ದಾರೆ.