ಗಡಿ ಸಂಘರ್ಷ: 'ಶಾಂತಿಗೆ ಭಂಗವಾದ್ರೆ ಸುಮ್ಮನಿರುವ ಪ್ರಧಾನಿ ನಮ್ಮವರಲ್ಲ'

ಶೇ. 70ರಷ್ಟು ಯುವಜನಾಂಗವನ್ನು ನಮ್ಮ ದೇಶ ಹೊಂದಿದೆ| ನಮ್ಮ ದೇಶದ ಆಡಳಿತ ವಿಶ್ವಕ್ಕೆ ಮಾದರಿ| ಹಲವು ರಾಷ್ಟ್ರಗಳು ನಮ್ಮ ದೇಶದೊಂದಿಗೆ ಉತ್ತಮ ಸ್ನೇಹ ಸಹಕಾರ ಹೊಂದಿವೆ| ಹುತಾತ್ಮ ಯೋಧರ ಧೈರ್ಯ ಮತ್ತು ದಿಟ್ಟತನವನ್ನು ಸ್ಮರಿಸಿದ ರವಿ ಕರಿಗಾರ|

BJP Leader Ravi Karigar Talks Over PM Narendra Modi

ಡಂಬಳ(ಜೂ.21): ನಮ್ಮ ದೇಶ ಶಾಂತಿ ಬಯಸುತ್ತದೆ. ಆದರೆ ಶಾಂತಿಗೆ ಭಂಗ ತರಲು ಪ್ರಯತ್ನಿಸಿದರೆ ನಮ್ಮ ಪ್ರಧಾನಿ ಸುಮ್ಮನೆ ಕೂರುವುದಿಲ್ಲ ಎಂದು ಬಿಜೆಪಿ ಡಂಬಳ ಮಂಡಳದ ಅಧ್ಯಕ್ಷ ರವಿ ಕರಿಗಾರ ಹೇಳಿದ್ದಾರೆ. 

ಅವರು ಡಂಬಳ ಹೋಬಳಿ ಹೈತಾಪೂರ ಗ್ರಾಮದಲ್ಲಿ ಬಿಜಿಪಿ ಡಂಬಳ ಮಂಡಳದಿಂದ ಗಾಲ್ವನ್‌ ಕಣಿವೆ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಮತ್ತು ಮಾಸ್ಕ್‌ ಡೇ ಆಚರಣೆಯಲ್ಲಿ ಮಾತನಾಡಿದರು. ದೇಶದ ಶೇ. 70ರಷ್ಟು ಯುವಜನಾಂಗವನ್ನು ನಮ್ಮ ದೇಶ ಹೊಂದಿದೆ. ನಮ್ಮ ದೇಶದ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ. ಹಲವು ರಾಷ್ಟ್ರಗಳು ನಮ್ಮ ದೇಶದೊಂದಿಗೆ ಉತ್ತಮ ಸ್ನೇಹ ಸಹಕಾರ ಹೊಂದಿವೆ. ಹುತಾತ್ಮ ಯೋಧರ ಧೈರ್ಯ ಮತ್ತು ದಿಟ್ಟತನವನ್ನು ಸ್ಮರಿಸಿದರು.

ಗದಗ: ಸೂರ್ಯಗ್ರಹಣ ಸಮಯದಲ್ಲೂ ತ್ರಿಕೂಟೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶ

ಯುವ ಮುಖಂಡ ಅಂದಪ್ಪ ಹಾರೂಗೇರಿ ಮಾತನಾಡಿ, ಕೋವಿಡ್‌- 19 ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಮುಖ ಗವಸು ಪ್ರಮುಖ ಪಾತ್ರವಹಿಸಲಿದೆ. ಪ್ರತಿಯೊಬ್ಬರೂ ಮುಖ ಗವಸು ಹಾಕಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ ಬೂದಿಹಾಳ, ಶರಣಪ್ಪ ಶಿರುಂದ, ಬಸವರಾಜ ಸಂಗನಾಳ, ಮಹಾಂತಯ್ಯ ಇಟಗಿಮಠ, ಪ್ರಭು ಚನ್ನಳ್ಳಿ, ರವಿ ಚಾಕಲಬ್ಬಿ, ಪ್ರಭು ಕೊರ್ಲಹಳ್ಳಿ, ಸೋಮು ಹಳ್ಳಿಕೇರಿ, ಹನಮಂತ ಪೂಜಾರ, ಶೇಖಪ್ಪ ಯಾವಗಲ್ಲ, ಲಕ್ಷ್ಮಣ ತಳವಾರ, ಹನಮಂತಪ್ಪ ಪೂಜಾರ, ನಾಗರಾಜ ಗ್ವಾಡಿ, ಪ್ರಭು ಕೋರ್ಲಹಳ್ಳಿ ಸೇರಿದಂತೆ ಮುಂತಾದವರು ಇದ್ದರು.
 

Latest Videos
Follow Us:
Download App:
  • android
  • ios