ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಸಹೋದರ ನಿಧನ ನಳಿನ್ ಕುಮಾರ್ ಕಟೀಲ್ ಸಹೋದರ ನವೀನ್ ಕುಮಾರ್ ನಿಧನ ಅನಾರೋಗ್ಯದಿಂದ ಮೃತರಾದ ನವೀನ್ ಕುಮಾರ್ ಕಟೀಲ್

ಪುತ್ತೂರು (ಜೂ.29): ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಸಹೋದರ, ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನವೀನ್‌ ಕುಮಾರ್‌(57) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ನಿಧನರಾದರು.

ಕೆಲ ದಿನಗಳಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ನಿಧರಾದರು.

ಕೋವಿಡ್ ಸೋಂಕಿತ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಶಾಸಕ ಸಂಜೀವ ಮಠಂದೂರು .

 ಇವರು ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 

Scroll to load tweet…

ಅವರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್‌ ಕುಮಾರ್‌ ಕಟೀಲ್, ಸಹೋದರಿ ನಂದಿನಿ ಅವರನ್ನು ಅಗಲಿದ್ದಾರೆ.