Asianet Suvarna News Asianet Suvarna News

‘ಬಂದ ನಾಯಕರಿಗೆ ಸ್ಥಾನ ಕೊಡದ ಜೆಡಿಎಸ್ ಜನರಿಗೆ ಏನು ಕೊಡುತ್ತೆ’?

ಜೆಡಿಎಸ್ ವಿರುದ್ಧ ಪ್ರತಾಪ್ ಸಿಂಹ ಮತ್ತೆ ವ್ಯಂಗ್ಯವಾಡಿದ್ದಾರೆ. ಈ ಬಾರಿ ಕಜೆಡಿಎಸ್ ನಾಯಕರನ್ನು ಗುರಿಯಾಗಿರಿಸಿಕೊಂಡೇ ಮಾತನಾಡಿದ್ದಾರೆ.

BJP Leader Mysuru MP Pratap Simha Slams JDS
Author
Bengaluru, First Published Oct 14, 2018, 7:28 PM IST
  • Facebook
  • Twitter
  • Whatsapp

ಮಂಡ್ಯ[ಅ.14] ಜೆಡಿಎಸ್ ಪಕ್ಷವನ್ನು ನಂಬಿದ ಜನರಿಗೆ ಒಳ್ಳೆಯದಾದ ಉದಾಹರಣೆ ಇಲ್ಲ. ಅಂತಹದರಲ್ಲಿ ಸ್ಥಾನಮಾನ ನಂಬಿ ಬಂದ ನಾಯಕರಿಗೆ ಒಳ್ಳೆಯದಾಗುತ್ತಾ ಎಂದು ಲಕ್ಷ್ಮೀ ಅಶ್ವಿನ್‍ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡುತ್ತಲೆ ಟಾಂಗ್ ನೀಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ ಸಿದ್ದರಾಮಯ್ಯ ಅವರು ಬಿಜೆಪಿ ಸೇರಿ ಕೆಲವೇ ದಿನವಾಗಿರಬಹುದು. ಆದರೆ ಅವರು ವಿದ್ಯಾರ್ಥಿ ದೆಸೆಯಲ್ಲಿ ಎಬಿವಿಪಿಯ ಒಬ್ಬ ಸಕ್ರಿಯ ಕಾರ್ಯಕರ್ತರಾಗಿ ಕೆಲಸವನ್ನು ಮಾಡುತ್ತಿದ್ದರು. ಅವರ ತಂದೆ ಅವರು ಕೂಡ 1994 ರಲ್ಲಿ ಇದೇ ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಹಾಗಾಗಿ ಅವರು ನಮಗೆ ಹೊಸಬರಲ್ಲ ಎಂದು ಸಮರ್ಥಿಸಿಕೊಂಡರು.

ಇನ್ನೇನು 10 ಲೈನ್ ರಸ್ತೆಯಾಗಿದೆ. ವಾಜಪೇಯಿ ಸರ್ಕಾರದಲ್ಲಿ ಡಬ್ಲಿಂಗ್ ಆಗಿತ್ತು. ಪದವಿ ವಿದ್ಯಾರ್ಥಿಗಳಿಗೆ ಮಂಡ್ಯದಲ್ಲಿ ಪಾಸ್ ಪೋರ್ಟ್ ಕೇಂದ್ರ ತೆರೆಯೋ ಮೂಲಕ ಅವರಿಗೆ ಎಲ್ಲಾ ಸೌಲಭ್ಯ ನೀಡ್ತೀವಿ. ಯಡಿಯೂರಪ್ಪ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ನಾಯಕರು ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios