ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪತ್ನಿ ಸೇರಿ ಹಲವರ ವಿಚಾರಣೆ

ಬಿಜೆಪಿ ಮುಖಂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೇರಿ ಹಲವು ಮುಖಂಡರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ತನಿಖೆ ತ್ವರಿತಗತಿಯಲ್ಲಿ ಸಾಗಿದೆ. 

BJP Leader Murder Case CBI Enquirer Wife Mallamma snr

ಧಾರವಾಡ (ಸೆ.18):  ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಬಿಐ ಅಧಿಕಾರಿಗಳ ತಂಡವು ಎರಡು ದಿನಗಳಿಂದ ಧಾರವಾಡದಲ್ಲಿಯೇ ಠಿಕಾಣಿ ಹೂಡಿದ್ದು ಗುರುವಾರರಂದು ಯೋಗೀಶ್‌ ಗೌಡರ ಪತ್ನಿ ಮಲ್ಲಮ್ಮ ಸೇರಿ ಹಲವು ಕಾಂಗ್ರೆಸ್‌ ಮುಖಂಡರ ವಿಚಾರಣೆ ನಡೆಸಿತು.

ಕೊಲೆಯಾದ ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ಹಾಗೂ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಲು ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್‌ ಮುಖಂಡರಾದ ನಾಗರಾಜ ಗೌರಿ, ಹೋಟೆಲ್‌ ಸಂಘದ ಅಧ್ಯಕ್ಷ , ಪ್ರಕರಣದ ರಾಜಿ ಮಾಡಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಮಹೇಶ ಶೆಟ್ಟಿಅವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಯಿತು.

ಕೋವಿಡ್ ವಿರುದ್ಧದ ಸಮರದಲ್ಲಿ ಕೊರೋನಾಗೆ ಆಂಬ್ಯುಲೆನ್ಸ್‌ ಚಾಲಕ ಬಲಿ: ಶ್ರೀರಾಮುಲು ಸಂತಾಪ ...

ಈ ಮಧ್ಯೆ ಮಲ್ಲಮ್ಮ ಸಹೋದರಿ ಸುಮಾ ಮತ್ತು ಯೋಗೀಶಗೌಡರ ಸಹೋದರ ಗುರುನಾಥ ಗೌಡ ಸಹ ಉಪ ನಗರ ಠಾಣೆಗೆ ಆಗಮಿಸಿ ಸಿಬಿಐ ಅಧಿಕಾರಿಗಳ ವಿಚಾರಣೆಗೆ ಒಳಪಟ್ಟರು. ಯೋಗೀಶಗೌಡ ಅವರ ಕೊಲೆಯಾದ ಆರಂಭದಲ್ಲಿ ಈ ಕೊಲೆಯಲ್ಲಿ ರಾಜಕೀಯ ವೈಷಮ್ಯ ಇದೆ ಸಿಬಿಐ ತನಿಖೆ ಆಗಬೇಕೆಂದು ಹೇಳಿಕೆ ನೀಡಿದ್ದ ಮಲ್ಲಮ್ಮ ನಂತರದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿ ತನ್ನ ಹೇಳಿಕೆಯನ್ನು ಬದಲಿಸಿದ್ದರು. ಆಗ ಮಲ್ಲಮ್ಮ ಅವರ ಸಹೋದರಿ ಸುಮಾ ಸೇರಿದಂತೆ ತವರು ಮನೆಯವರು ಮಲ್ಲಮ್ಮನ ವಿರುದ್ಧ ತಿರುಗಿ ಬಿದ್ದಿದ್ದರು. ಈ ಹಿನ್ನೆಲೆ ಇದೀಗ ಸಿಬಿಐ ಅಧಿಕಾರಿಗಳು ಸುಮಾ ಅವರನ್ನು ಕರೆಸಿ ವಿಚಾರಣೆ ಮಾಡಿದ್ದು ಮಹತ್ವದ ಬೆಳವಣಿಗೆ ಹೌದು.

Latest Videos
Follow Us:
Download App:
  • android
  • ios