ಚುನಾವಣಾ ಸೋಲು ಮರೆಯಲು ಕಾಂಗ್ರೆಸ್‌ನಿಂದ ಈ ಕೆಲಸ
ಕಾಂಗ್ರೆಸ್ ಚುನಾವಣೆಯಲ್ಲಿ ಸೋತ ವಿಚಾರವನ್ನು ಮರೆಯುವ ಸಲುವಾಗಿ ಈ ಕೆಲಸ ಮಾಡಿದೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.
ಕೋಲಾರ (ಡಿ.09): ದೇಶಾದ್ಯಂತ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತ್ತಿದ್ದು, ಅದರ ನೋವು ಮರೆಯಲು ಬಾಡಿಗೆದಾರರಿಂದ ಬಂದ್ ಮಾಡಿಸುತ್ತಿದೆ ಎಂದು ಸಂಸದ ಎಸದ.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆದಾಯವನ್ನು ದ್ವಿಗುಣಗೊಳಿಸಲು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್ ಈ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ರೈತರನ್ನು ಎತ್ತಿಕಟ್ಟಲು ಕಾಂಗ್ರೆಸ್ ಯತ್ನ
ದೇಶಾದ್ಯಂತ ವಿರೋಧ ಪಕ್ಷಗಳು ಚುನಾವಣೆಗಳಲ್ಲಿ ಸೋತಿದ್ದು, ಹತಾಶೆಯಿಂದ ರೈತರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನವಾಗುತ್ತಿದೆ. ಕೇಂದ್ರಸರ್ಕಾರ ಇಲ್ಲಿಯವರೆಗೂ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ಗೊಳಿಸದೆ ಇರುವುದು ಕಮ್ಯುನಿಸ್ಟರ ರಾಜಕೀಯ ಕುತಂತ್ರಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಬೆಂಗಳೂರಿನಲ್ಲಿ ಇಂದೂ ಪ್ರತಿಭಟನೆ: ಕರವೇ ಕಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ ..
ಕಳೆದ 2011ರ ಯುಪಿಎ ಸರ್ಕಾರದ ಆಡಳಿತದಲ್ಲಿ ಸಚಿವರಾಗಿದ್ದ ಶರದ್ ಪವಾರ್ ಅವರು ಇದೆ ಎಪಿಎಂಸಿ ಕಾಯ್ದೆಯ ಮಾದರಿಯ ಪ್ರಸ್ತಾವವನ್ನು ಮುಂದಿಟ್ಟಿದ್ದರು, ಕಾಂಗ್ರೆಸ್ ಪಕ್ಷದ 2000 14 ಮತ್ತು 2019ರ ಪ್ರಣಾಳಿಕೆಯಲ್ಲಿ ಇದೇ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು, ಕೇಂದ್ರ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಯನ್ನು, ಜಾರಿಗೊಳಿಸಿದ್ದರು, ವಿರೋಧಪಕ್ಷಗಳು ಇದೇನು ವಿರೋಧಿಸಲು ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡಲು ಮುಂದಾಗಿರುವುದು ಶೋಚನೀಯ ಸಂಗತಿ ಎಂದು ಬೇಸರ ಪಡಿಸಿದರು.
ರೈತರ ಹಿತದೃಷ್ಟಿಯಿಂದ ಕಾಯ್ದೆ ಜಾರಿ
ರೈತರ ಹಿತದೃಷ್ಟಿಯಿಂದ 2019ರ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯಲ್ಲಿ ಈ ವಿಚಾರ ಚರ್ಚಿಸಲಾಗಿದ್ದು, ಸಮಿತಿಯ ಸಲಹೆಗಳನ್ನೊಳಗೊಂಡ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ, ಈ ಕಾಯ್ದೆಯಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತಾಧಿಕಾರದ ಸಮಿತಿಯನ್ನು ರಚಿಸಲಾಗಿದ್ದ, ಈ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಹಾಗೂ ಅಮರೇಂದ್ರ ಸಿಂಗ್ ಅವರು ಸದಸ್ಯರಾಗಿದ್ದು ಸಮಿತಿಯ ಸಲಹೆಯಂತೆ 2020ರ ಸೆಪ್ಟೆಂಬರ್‌ನಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ, ಮಾಜಿ ಅಧ್ಯಕ್ಷ ಕೆಂಬೋಡಿ ನಾರಾಯಣ ಸ್ವಾಮಿ, ಮುಖಂಡ ರಾಜೇಶ್ ಸಿಂಗ್, ವಾಸು, ತಿಮ್ಮರಾಯಪ್ಪ ಹಾಜರಿದ್ದರು,