ಬಂಗಾರಪೇಟೆ (ನ.02): ರಾಜ್ಯದಲ್ಲಿ ಬಿಜೆಪಿ ಸರ್ಕಾರದ  ಆಡಳಿತವನ್ನು ವಿರೋಧಿಸಿ ಪಕ್ಷ ತೊರೆದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಸಮ್ಮುಖದಲ್ಲಿ ಪಲವತಿಮ್ಮನಹಳ್ಳಿ ಬಡಾವಣೆಯ ಬಿಜೆಪಿ  ಮುಖಂಡ ರಮೇಶ್ ಬಾಬು ಕೈ ಸೇರಿದರು.

 ಅವರನ್ನು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. 

ಶಾಸಕ ಜಿಟಿಡಿ ಬೆಂಬಲಿಗರಿಗೆ ಒಲಿದ ಅದೃಷ್ಟ

ಈಗಾಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವವು ಜೋರಾಗಿದೆ. ನವೆಂಬರ್  3 ರಂದು ಉಪ ಚುನಾವಣೆ ನಡೆಯಲಿದ್ದು  ಇದೇ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ- ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗುವ ಮುಖಂಡರ ಸಂಖ್ಯೆಯು ಹೆಚ್ಚಾಗುತ್ತಿದೆ. ರಾಜಕೀಯ ರಣಾಂಗಣ ಬಿರುಸಾಗುತ್ತಲೇ ಇದೆ.