ಯುವ ಕಾಂಗ್ರೆಸ್‌ನಲ್ಲಿ ಉಂಟಾದ ಗದ್ದಲ| ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ| ಎಸ್‌ಸಿ ಸಮುದಾಯದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಬೆದರಿಕೆ ಹಾಕಿದ ಮೊಹಮ್ಮದ್ ನಲಪಾಡ್| ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಭವ್ಯಾ|
ಬೆಂಗಳೂರು(ಏ.23): ರಾಜ್ಯ ಕಾಂಗ್ರೆಸ್‌ನಲ್ಲಿ ಮಹಿಳೆಯರು ಅದರಲ್ಲಿಯೂ ಮುಖ್ಯವಾಗಿ ಪರಿಶಿಷ್ಟ ಪಂಗಡವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಆರೋಪಿಸಿದ್ದಾರೆ.
ಯುವ ಕಾಂಗ್ರೆಸ್‌ನಲ್ಲಿ ಗದ್ದಲ ಉಂಟಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೋವಿಡ್ ವಾರ್ ರೂಂ ಸ್ಥಾಪನೆ ವಿರೋಧಿಸಿ ಎಸ್‌ಸಿ ಸಮುದಾಯದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಅವರಿಗೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಬೆದರಿಕೆ ಹಾಕಿದ್ದಾರೆ.
ಚುನಾವಣೆ: ಕಾಂಗ್ರೆಸ್ ಪಕ್ಷದಲ್ಲಿ ಮೂಡಿದ ಒಡಕು
ರಕ್ಷಣೆ ಕೋರಿ ಭವ್ಯಾ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಇಂತಹ ಪ್ರಕರಣ ಕಾಂಗ್ರೆಸ್‌ನಲ್ಲಿನ ಮುಸುಕಿನ ಗುದ್ದಾಟಕ್ಕೆ ಹಿಡಿದ ಕೈಗನ್ನಡಿ. ಈ ಮೂಲಕ ಕಾಂಗ್ರೆಸ್‌ನಲ್ಲಿ ಬೀದಿ ಜಗಳ ಹೊರಕ್ಕೆ ಬಿದ್ದಿದೆ. ಕೂಡಲೇ ಪೊಲೀಸರು ಭವ್ಯಾ ಅವರಿಗೆ ರಕ್ಷಣೆ ನೀಡಿ, ನಲಪಾಡ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
