ಸಿದ್ದು ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ವಿಷಾದದ ಸಂಗತಿ: ಲಿಂಬಾವಳಿ
ಮಳೆಯಾಗದೆ ಮೆಕ್ಕೆ ಜೋಳ ಸರಿಯಾಗಿ ಕಾಳು ಕಟ್ಟದೆ ಸಂಪೂರ್ಣ ಒಣಗಿದೆ. ಜೋಳ ದನ-ಕರುಗಳಿಗೂ ಸಹಿತ ತಿನ್ನಲು ಬರದಂತಾಗಿದೆ. ಇಂತಹ ಪರಸ್ಥಿತಿಯಲ್ಲೂ ಇದುವರೆಗೆ ಸರ್ಕಾರ ಮತ್ತು ಅಧಿಕಾರಿಗಳು ಬೆಳೆಗಳ ಹಾನಿಯ ಸರ್ವೇ ಮಾಡದಿರುವುದು ಖಂಡನೀಯ: ಮಾಜಿ ಸಚಿವ ಅರವಿಂದ ಲಿಂಬಾವಳಿ
ಸವದತ್ತಿ(ನ.21): ರಾಜ್ಯದಲ್ಲಿರುವ ತೀವ್ರ ಬರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ವಿಷಾದದ ಸಂಗತಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ತಾಲೂಕಿನ ಶಿರಸಂಗಿ ಭಾಗದಲ್ಲಿ ರೈತ ಮತ್ಯುಂಜಯ ಹಿರೇಮಠರ ಜಮೀನಿನಲ್ಲಿ ಮೆಕ್ಕೆಜೋಳದ ಬೆಳೆ ಹಾನಿಯ ಪರಿಶೀಲನೆ ಬಳಿಕ ಅವರು ಮಾತನಾಡಿ, ಮಳೆಯಾಗದೆ ಮೆಕ್ಕೆ ಜೋಳ ಸರಿಯಾಗಿ ಕಾಳು ಕಟ್ಟದೆ ಸಂಪೂರ್ಣ ಒಣಗಿದೆ. ಜೋಳ ದನ-ಕರುಗಳಿಗೂ ಸಹಿತ ತಿನ್ನಲು ಬರದಂತಾಗಿದೆ. ಇಂತಹ ಪರಸ್ಥಿತಿಯಲ್ಲೂ ಇದುವರೆಗೆ ಸರ್ಕಾರ ಮತ್ತು ಅಧಿಕಾರಿಗಳು ಬೆಳೆಗಳ ಹಾನಿಯ ಸರ್ವೇ ಮಾಡದಿರುವುದು ಖಂಡನೀಯ. ಬರ ನಿರ್ವಹಣೆಯ ಕುರಿತು ಸರ್ಕಾರದ ನಿಷ್ಕಾಳಜಿ ತೋರುತ್ತಿದೆ. ಸರ್ಕಾರವು ಬರ ಪರಿಸ್ಥಿತಿ ನಿಭಾಯಿಸುವುದನ್ನು ಬಿಟ್ಟು ಒಳ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯ ಹಲವು ಹಾಲಿ ಸಂಸದರಿಗೆ ಸಿಗಲ್ವಾ ಟಿಕೆಟ್ ? ಹೊಸ ಆಕಾಂಕ್ಷಿಗಳಲ್ಲಿ ಹೆಚ್ಚಿದೆ ನಿರೀಕ್ಷೆ !
ಪದೇ ಪದೆ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ಸಿಗರು ಆರೋಪಿಸುತ್ತಿರುವುದು ಸರಿಯಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎನ್‌ಡಿಆರ್‌ಎಫ್‌ದಲ್ಲಿ ಪ್ರವಾಹ ಮತ್ತು ಬರ ಪರಸ್ಥಿತಿಯ ಸಂದರ್ಭದಲ್ಲಿ ಸಾಕಷ್ಟು ಹಣ ಬಿಡುಗಡೆಯಾಗಿದ್ದು, ಅದರ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಈ ಹಿಂದಿನ ಸರ್ಕಾರಗಳು ತಾವು ಏನು ಮಾಡಿವೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರವು 216 ಬರಪೀಡಿತ ತಾಲೂಕುಗಳೆಂದು ಘೋಷಿಸಿ ₹300 ಕೋಟಿ ಮೀಸಲಿಟ್ಟಿದೆ. ಆದರೆ, ಇಲ್ಲಿನ ಬೆಳೆ ಹಾನಿ ಗಮನಿಸಿದರೆ ಸರ್ಕಾರ ಕೊಡುವ ಹಣ ಯಾತಕ್ಕೂ ಸಾಲದು. ಬರಪೀಡಿತ ತಾಲೂಕುಗಳಿಗೆ ತಲಾ ₹1 ಕೋಟಿ ಸಹಿತ ದೊರಕದ ಸ್ಥಿತಿ ಇದೆ. ದನ-ಕರುಗಳಿಗೆ ಮೇವು ಮತ್ತು ನೀರು ಸಿಗದಂತ ಬರ ಎದುರಾಗಿದ್ದು, ರೈತರ ಪರಸ್ಥಿತಿ ಚಿಂತಾಜನಕವಾಗಿದೆ. ರೈತರು ಬರದ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ರಾಜ್ಯ ಸರ್ಕಾರವು ಬರ ನಿರ್ವಹಣೆ ಕುರಿತು ಸೂಕ್ತಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ದೂರಿದರು.
ಮೋದಿ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ: ಲಿಂಬಾವಳಿ ಆಕ್ರೋಶ
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ರೈತರ ತೊಂದರೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡುತ್ತಿದೆ. ಸದ್ಯ ರಾಜ್ಯದಲ್ಲಿ ಆವರಿಸಿದ ಬರದಿಂದ ತತ್ತರಿಸಿದ ರೈತರಿಗೆ ಕೇಂದ್ರದ ಎನ್‌ಡಿಅರ್‌ಎಫ್‌ನಲ್ಲಿ ರಾಜ್ಯದ ರೈತರಿಗೆ ಸೂಕ್ತ ಅನುಕೂಲತೆ ಕಲ್ಪಿಸಲಾಗುತ್ತಿದೆ ಎಂದರು.
ಶಾಸಕ ಅಭಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಿ.ಪ ಸದಸ್ಯ ಹನುಮಂತ ನಿರಾಣಿ, ಸುಭಾಸಗೌಡ ಪಾಟೀಲ, ಜಗದೀಶ ಕೌಜಗೇರಿ ನೇತತ್ವದ ತಂಡವು ಬರ ಅಧ್ಯಯನ ಮಾಡಿತು. ಶಿರಸಂಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಪ್ಪ ಕಪಲ್ಲನ್ನವರ, ರೈತ ಸಂಭಾಜಿ ಶಿಂಧೆ, ಬಸವರಾಜ ಪೂಜಾರ, ನಾಗರಾಜ ತುರುಮುರಿ, ಫಕ್ಕೀರಪ್ಪ ಉಗರಾಪುರ, ಕಾಂತೇಶ ಪಟ್ಟೇದ ಇತರರು ಇದ್ದರು.