ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ ಎಂದ  ಸಚಿವ ಮುನಿರತ್ನ  ನಾನು ಕಾಂಗ್ರೆಸ್‌ನಿಂದ ಬಂದವನು. ನಾನು ಅಲ್ಲಿ ಈ ರೀತಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ನೋಡಿರಲಿಲ್ಲ ಎಂದ ಮುನಿರತ್ನ

 ಬೆಂಗಳೂರು (ಸೆ.23):  ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

ಬುಧವಾರ ಸಂಜೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ (ಒಬಿಸಿ) ಆಯೋಜಿಸಿದ್ದ ಸಮುದಾಯದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಚಿವ ಮುನಿರತ್ನ ಜೊತೆ ಬಿಗ್ ಬಾಸ್ ವಿನ್ನರ್ ಶಶಿ ಪೋಟೋ ವೈರಲ್!

ನಾನು ಕಾಂಗ್ರೆಸ್‌ನಿಂದ ಬಂದವನು. ನಾನು ಅಲ್ಲಿ ಈ ರೀತಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ನೋಡಿರಲಿಲ್ಲ. ಬೇರೆ ವರ್ಗಗಳ ಕಾರ್ಯಕ್ರಮ ಇರುತ್ತಿತ್ತು. ನಮಗೂ ಒಂದು ಕುರ್ಚಿ ಹಾಕುತ್ತಿದ್ದರು. ಕುಳಿತು ಎದ್ದು ಬರುತ್ತಿದ್ದೆವು ಅಷ್ಟೇ. ಈ ರೀತಿ ಕಾರ್ಯಕ್ರಮ ಕಾಣುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬಿಜೆಪಿಗೆ ಬಂದಿರುವುದಕ್ಕೆ ಖುಷಿ ಇದೆ. ದೊಡ್ಡ ಕುಟುಂಬಕ್ಕೆ ಬಂದಿದ್ದೇವೆ. ಬಿಜೆಪಿ ಸೇರಿ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಬೇರೆ ಪಕ್ಷಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದೆ. ನನ್ನನ್ನು ಶಾಸಕನಾಗಿ ಮಾಡಿ ವಿಳಂಬವಾದರೂ ಸಚಿವನಾಗಿ ಮಾಡಿದ್ದು ಬಿಜೆಪಿ. ಈ ರೀತಿಯ ವಾತಾವರಣ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬಿಜೆಪಿ ಒಂದು ಜಾತಿಯಿಂದ ಕಟ್ಟಿದ ಪಕ್ಷ ಅಲ್ಲ. ಹಿಂದುತ್ವದ ಆಧಾರದ ಮೇಲೆ ಕಟ್ಟಿದ ಪಕ್ಷ ಎಂದು ಪ್ರಶಂಸೆ ವ್ಯಕ್ತಪಡಿಸಿದರು.