ಎಲ್ಲರ ಬೆಳವಣಿಗೆಗೆ ಶ್ರಮಿಸುತ್ತಿದೆ ಬಿಜೆಪಿ: ಮಂಜುನಾಥ್
ಬಿಜೆಪಿಯು ಜನಪರ-ಬಡವರ ಪರ ಪಕ್ಷವಾಗಿದ್ದು, ಎಲ್ಲರ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ. ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುತ್ತಾ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ಬಿಜೆಪಿ ಕೇಂದ್ರ, ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು.
ತುಮಕೂರು (ಡಿ 31): ಬಿಜೆಪಿಯು ಜನಪರ-ಬಡವರ ಪರ ಪಕ್ಷವಾಗಿದ್ದು, ಎಲ್ಲರ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ. ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುತ್ತಾ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ಬಿಜೆಪಿ ಕೇಂದ್ರ, ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು.
ಜಿಲ್ಲೆಯ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ನಡೆದ ಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಎಸ್.ಟಿ. ಮೋರ್ಚಾದ ಪ್ರಮುಖ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಯಾರಾಗಬೇಕೆಂದು ಕಿತ್ತಾಟ ಆರಂಭಗೊಂಡಿದೆ. ಜನತಾದಳವು ಯಾರಿಗೂ ಬಹುಮತ ಬರಬಾರದು ಎಂದು ಒಡಾಡುತ್ತಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವಿರುದ್ಧ ಬಿ.ಕೆ.ಮಂಜುನಾಥ್ ಹರಿಹಾಯ್ದರು.
ಪರಿಶಿಷ್ಟವರ್ಗದ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೀಡಿರುವ ಅನುದಾನಗಳು, ಮೀಸಲಾತಿ ಪ್ರಮಾಣ ಹೆಚ್ಚಳ ಮತ್ತು ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯಲು ಅನುಕೂಲವಾಗುವಂತೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂದು ಬಿ.ಕೆ. ಮಂಜುನಾಥ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರವಿ ಪಾವಗಡ, ಬಿಜೆಪಿ ವ್ಯಕ್ತಿಗಳ ನಿರ್ಮಾಣ ಮಾಡಿ, ದೇಶ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದೆ. ಪಕ್ಷವು ತನ್ನದೇ ಆದ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಕಾರ್ಯಕರ್ತರ ಆಧಾರಿತ ಪಕ್ಷವಾಗಿ, ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಾರ್ಯಕರ್ತರಿಗೆ ಪ್ರಶಿಕ್ಷಣದ ಮೂಲಕ ಕ್ರೀಯಾಶೀಲರಾಗಿ ಇರುವಂತೆ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಎಸ್.ಟಿ. ಮೋರ್ಚಾ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷ ಎ.ವಿಜಯಕುಮಾರ್, ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷ ಬ್ಯಾಡನೂರು ಶಿವು, ತುಮಕೂರು ಜಿಲ್ಲಾ ವಕ್ತಾರ ಹಾಗೂ ಎಸ್.ಟಿ. ಮೋರ್ಚಾ ಪ್ರಭಾರಿ ಕೆ.ಪಿ.ಮಹೇಶ ಉಪಸ್ಥಿತರಿದ್ದರು.
ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಬಿಜೆಪಿ ಎಸ್.ಟಿ.ಮೋರ್ಚಾ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಕಾರ್ಯಕಾರಿಣಿ ನಿರ್ದೇಶಕ ತೊ.ಸಿ.ಕೃಷ್ಣಮೂರ್ತಿ ಆಗಮಿಸಿದ್ದರು.
ಸಭೆಯಲ್ಲಿ ಪ್ರಶಿಕ್ಷಣ ವರ್ಗದ ಜಿಲ್ಲಾ ಸಂಚಾಲಕ ಸಾಗರ್ ದಯಾನಂದ್ ಪ್ರಶಿಕ್ಷಣ ವರ್ಗದ ಅವಲೋಕನ ಮಾಡಿದರು. ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುಡ್ಡದ ರಂಗಪ್ಪ ಸ್ವಾಗತಿಸಿದರೆ, ತುಮಕೂರು ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನಕಾರ್ಯದರ್ಶಿ ಯು.ಆರ್. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ತುಮಕೂರು ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನಕಾರ್ಯದರ್ಶಿ ಸೀತಾರಾಮು ವಂದಿಸಿದರು. ಜನಗಣಮನ ರಾಷ್ಟ್ರಗೀತೆಯನ್ನು ಹಾಡಿ, ಸಮಾರೋಪ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪರಿಶಿಷ್ಟಪಂಗಡಕ್ಕೆ ಸಾಮಾಜಿಕ ನ್ಯಾಯ ರೀತ್ಯ ಶೇಕಡ 3 ರಿಂದ 7ರಷ್ಟುಮೀಸಲಾತಿ ಪ್ರಮಾಣವನ್ನು ಶೇಕಡ 4ರಷ್ಟುಹೆಚ್ಚಿಸಿದೆ. ಇದರಿಂದ ಪರಿಶಿಷ್ಟವರ್ಗಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಸಾಕಷ್ಟುಅನುಕೂಲವಾಗಿದೆ. ಶಿಸ್ತುಬದ್ಧ ನಡವಳಿಕೆ, ಹಿರಿಯ ಮಾರ್ಗದರ್ಶನದಂತೆ ಪಕ್ಷವು ಮುನ್ನಡೆಯುತ್ತಿದೆ.
- ಬಿ.ಕೆ. ಮಂಜುನಾಥ್ ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ
- ಎಲ್ಲರ ಬೆಳವಣಿಗೆಗೆ ಶ್ರಮಿಸುತ್ತಿದೆ ಬಿಜೆಪಿ: ಮಂಜುನಾಥ್
- ಸಿದ್ದರಬೆಟ್ಟದಲ್ಲಿ ಎಸ್ಟಿಮೋರ್ಚಾದ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗ
- ಕೈ, ತೆನೆ ವಿರುದ್ಧ ಹರಿಹಾಯ್ದ ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ
- ಬಿಜೆಪಿ ವ್ಯಕ್ತಿಗಳ ನಿರ್ಮಾಣ ಮಾಡಿ, ದೇಶ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದೆ
- ಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಎಸ್.ಟಿ. ಮೋರ್ಚಾದ ಪ್ರಮುಖ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗದ ಸಮಾರೋಪ
- ಪಕ್ಷವು ತನ್ನದೇ ಆದ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ
- , ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಾರ್ಯಕರ್ತರಿಗೆ ಪ್ರಶಿಕ್ಷಣದ ಮೂಲಕ ಕ್ರೀಯಾಶೀಲರಾಗಿ ಇರುವಂತೆ ಮಾಡುತ್ತಿದೆ