Asianet Suvarna News Asianet Suvarna News

Chikkaballapur: ನೇಕಾರರ ಶ್ರೇಯೋಭಿವೃದ್ಧಿಗೆ ಬಿಜೆಪಿ ಬದ್ಧ: ಸಚಿವ ಸುಧಾಕರ್‌

ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕು ನಡೆಸುವ ನೇಕಾರರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಮುಂದೆಯು ನೇಕಾರರ ಶ್ರಯೋಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

BJP is Committed to the Career Development of Weavers Says Minister Dr K Sudhakar gvd
Author
First Published Feb 27, 2023, 12:47 PM IST

ಚಿಕ್ಕಬಳ್ಳಾಪುರ (ಫೆ.27): ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕು ನಡೆಸುವ ನೇಕಾರರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಮುಂದೆಯು ನೇಕಾರರ ಶ್ರಯೋಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ನಗರದ ಹೊರ ವಲಯದ ಮುಸ್ಟೂರಿನ ದೇವಾಂಗ ಬೀದಿಯಲ್ಲಿ ಭಾನುವಾರ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಚೌಡೇಶ್ವರಿ ಅಮ್ಮನವರ ಮೊದಲ ವರ್ಷದ ನೂತನ ರಥೋತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದು ಬಳಿಕ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ನೇಕಾರರು ಶಿಕ್ಷಣಕ್ಕೆ ಒತ್ತು ನೀಡಲಿ: ಕ್ಷೇತ್ರದಲ್ಲಿ ನೇಕಾರರ ಏಳಿಗೆಗೆ ನಾನು ಶಕ್ತಿಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಮುದಾಯ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು, ಸಮುದಾಯದ ಹಿರಿಯರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ಕೊಡಬೇಕೆಂದ ಅವರು, ನೇಕಾರರ ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷರಾದ ರವೀಂದ್ರ ಬಿ.ಕಲ್ಬರುಗಿ ಮಾತನಾಡಿ, ಸರ್ಕಾರಗಳು ಹಿಂದುಳಿದ ಸಮಾಜಗಳ ಅಭಿವೃದ್ದಿಗೆ ಜಾತಿಗೊಂದು ಅಭಿವೃದ್ದಿ ಮಂಡಳಿ ಮಾಡಿದೆ. ಆದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನೇಕಾರ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿ ಮಾಡಬೇಕೆಂದು ಆಗ್ರಹಿಸಿದರು.

ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್‌ ಪ್ರಶ್ನೆ

ಸಮುದಾಯ ಸಂಘಟತವಾಗಬೇಕು: ನೇಕಾರರಿಗೆ ಸರ್ಕಾರ ಕೊಡುವ ಪ್ರೋತ್ಸಾಹ ಹೆಚ್ಚಾಗಬೇಕಿದೆ. ಸಮುದಾಯಕ್ಕೆ ಸೌಲಭ್ಯಗಳ ಕೊರತೆ ಇದೆ ಎಂದ ಅವರು, ಸಮುದಾಯ ಸಂಘಟನೆ ಆಗಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಸಂಘ ರಾಜ್ಯಾದ್ಯಂತ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ದೇವಾಂಗ ಜದ್ಗುರುಗಳಾದ ದಯಾನಂದ ಪೂರಿ ಮಹಾ ಸ್ವಾಮೀಗಳು, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್‌, ರಾಜ್ಯ ಉಪಾಧ್ಯಕ್ಷ ಸತೀಶ್‌, ರಾಜ್ಯ ಕಾರ್ಯದರ್ಶಿ ಮೋಹನ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಹೆಚ್‌.ಕೆ.ಲಕ್ಷ್ಮೇಪತಿ, ಜಿಲ್ಲಾ ಕಾರ್ಯದರ್ಶಿ ಕೆ.ಕುಶಕುಮಾರ್‌, ಚೌಡೇಶ್ವರಿ ದೇವಾಲಯದ ಅಧ್ಯಕ್ಷ ನಂಜಪ್ಪ, ಕಾರ್ಯದರ್ಶಿ ಎಂ.ಎಸ್‌.ವೆಂಕಟೇಶ್‌, ಖಜಾಂಚಿ ಎಂ.ಎಸ್‌.ಪುರುಷೋತ್ತಮ್‌, ಮುಖಂಡರಾದ ನಾರಾಯಣಪ್ಪ, ಶಿವಕುಮಾರ್‌, ಸರಸ್ವತಮ್ಮ ಸೇರಿದಂತೆ ಮತ್ತಿತರರು ಇದ್ದರು.

ಆ್ಯಪ್‌ ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘ (ರಿ) ಅವರು ಸಿದ್ದಪಡಿಸಿರುವ ನೇಕಾರರ ಉದ್ಯೋಗ ಮಾಹಿತಿ ಆ್ಯಪ್‌ನ್ನು ಇದೇ ವೇಳೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಲೋಕಾರ್ಪಣೆಗೊಳಿಸಿದರು.

6.5 ಕೋಟಿ ಜನರ ಆರೋಗ್ಯ ಹೊಣೆ ನನ್ನ ಪುಣ್ಯ: ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ಸುಧಾರಣೆ ಮಾಡುವ, ಯೋಗಕ್ಷೇಮ ನೋಡಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು. 15ನೇ ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನರ ಧ್ವನಿಯಾಗಿ, ಆಶೋತ್ತರಗಳಿಗೆ ಸ್ಪಂದಿಸುವ ಶಕ್ತಿಯಾಗಿ ಜನರು ಶಾಸಕರನ್ನು ಶಕ್ತಿಸೌಧಕ್ಕೆ ಚುನಾಯಿಸಿ ಕಳುಹಿಸುತ್ತಾರೆ. ಆರೂವರೆ ಕೋಟಿ ಜನರಲ್ಲಿ 224 ಜನ ಮಾತ್ರ ಆಯ್ಕೆಯಾಗುವುದು. ಅದರಲ್ಲೂ ಸಹ ಸಚಿವರಾದರೆ ಒಂದೊಂದು ಇಲಾಖೆಗೆ ಒಬ್ಬರು. ಇಂತಹದ್ದರಲ್ಲಿ ಆರೂವರೆ ಕೋಟಿ ಜನರ ಆರೋಗ್ಯವನ್ನು ಸುಧಾರಣೆ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಸುಕೃತ ಎಂದು ತಿಳಿಸಿದರು.

ಸಚಿವ ಸುಧಾಕರ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಆಗುತ್ತಾ?: ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ನಿಗೂಢ

14 ಮತ್ತು 15ನೇ ವಿಧಾನಸಭೆ ಅಧಿವೇಶನದ 10 ವರ್ಷಗಳಲ್ಲಿ ಮೂರು ಬಾರಿ ಆಯ್ಕೆಯಾಗಲು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಈ ಸದನದ ಮೂಲಕ ಕೋಟಿ ನಮನಗಳನ್ನು ಅರ್ಪಿಸುತ್ತೇನೆ. 15ನೇ ವಿಧಾನಸಭೆ ರಾಜಕೀಯ ಕ್ಷೇತ್ರದಲ್ಲಿ ವಿಶೇಷವಾದ ಕಾಲಘಟ್ಟವಾಗಿದೆ. ಚುನಾವಣೆಗೆ ಮುಂಚೆ ಮೂರೂ ಪಕ್ಷಗಳೂ ತಮ್ಮ-ತಮ್ಮ ಪ್ರಣಾಳಿಕೆ ಮುಂದಿಟ್ಟುಕೊಂಡು ಆಯ್ಕೆ ಬಯಸಿದೆವು. ಆದರೆ ರಾಜ್ಯದ ಜನತೆ 2018ರಲ್ಲಿ ಯಾರಿಗೂ ಬಹುಮತ ನೀಡಲಿಲ್ಲ ಎಂದು ವಿವರಿಸಿದರು.

Latest Videos
Follow Us:
Download App:
  • android
  • ios