Asianet Suvarna News Asianet Suvarna News

Karnataka Politics : ಬಿಜೆಪಿಗೆ ಎಸ್‌ಎಂ ಕೃಷ್ಣ ಆಶೀರ್ವಾದ

ರಾಜಕೀಯ ನಿವೃತ್ತಿ ನಂತರವೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಆಶೀರ್ವಾದ ಇರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು

  BJP has the blessings of SM Krishna CT Ravi  snr
Author
First Published Jan 8, 2023, 11:25 AM IST

  ಮದ್ದೂರು (ಜ. 08):  ರಾಜಕೀಯ ನಿವೃತ್ತಿ ನಂತರವೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಆಶೀರ್ವಾದ ಇರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್‌.ಪಿ.ಸ್ವಾಮಿ ಹಾಗೂ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಸಿಎಂ ಎಸ್‌.ಎಂ.ಕೃಷ್ಣರ ವಯಸ್ಸು ಮತ್ತು ಆರೋಗ್ಯದ ಕಾರಣದಿಂದಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದಿದ್ದಾರೆ. ರಾಷ್ಟ್ರ ಹಿತದ ರಾಜಕಾರಣವನ್ನು ಬಿಟ್ಟು ಅವರು ರಾಜಕಾರಣ ಮಾಡುವುದಿಲ್ಲ. ಆಗಾಗಿ ರಾಷ್ಟ್ರದ ಹಿತವನ್ನು ಕಾಯುತ್ತಿರುವ ಬಿಜೆಪಿ ಪಕ್ಷಕ್ಕೆ ಅವರ ಆಶೀರ್ವಾದ, ಬೆಂಬಲ ಸದಾ ಕಾಲ ಇರುತ್ತದೆ ಎಂದರು.

ಕೆಎಂಎಫ್‌- ಅಮುಲ್ ವಿಲೀನಗೊಳಿಸುವ ಪೀಠಿಕೆ ಹಾಕಿರುವ ಅಮಿತ್‌ ಶಾ ಹೇಳಿಕೆಯನ್ನು ವಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ನಂದಿನಿ ಹಾಗೂ ಅಮುಲ್… ಅನ್ನು ವಿಲೀನಗೊಳಿಸುವ ಪ್ರಸ್ತಾಪ ಇಲ್ಲ. ಬದಲಾಗಿ ಎರಡು ರಾಜ್ಯಗಳ ಮುಂದುವರೆದ ಒಕ್ಕೂಟಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣ ಆಗಬೇಕಿದೆ. ಅಮುಲ್ - ನಂದಿನಿ ನಮ್ಮ ದೇಶದ ಎರಡು ಸಂಸ್ಥೆಗಳು ಪರಸ್ಪರ ಸಹಕಾರದಿಂದ ಬೇರೆ ದೇಶಗಳ ವಿರುದ್ಧ ಸ್ಪರ್ಧೆ ಮಾಡಲಿ ಎಂಬ ಬಯಕೆಯನ್ನು ಶಾ ವ್ಯಕ್ತಪಡಿಸಿದ್ದಾರೆ ಎಂದರು.

ಅಮುಲ್‌ ಮಳಿಗೆಗಳಲ್ಲಿ ನಮ್ಮ ವಸ್ತುಗಳ ಮಾರಾಟ. ನಂದಿನಿ ಮಳಿಗೆಗಳಲ್ಲಿ ಅವರ ವಸ್ತುಗಳ ಮಾರಾಟ ಮಾಡುವ ಮೂಲಕ ಒಂದೇ ಖರ್ಚಿನಲ್ಲಿ ಎರಡು ಸಂಸ್ಥೆಗಳು ಬೆಳೆಯುತ್ತವೆ ಎಂಬ ಸಲಹೆ ನೀಡಿದ್ದಾರೆ ಎಂದು ಪರೋಕ್ಷವಾಗಿ ಅಮಿತ್‌ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಬಿಜೆಪಿ ಮುಖಂಡ ಎಸ್‌.ಪಿ.ಸ್ವಾಮಿ, ಜಿಪಂ ಮಾಜಿ ಸದಸ್ಯ ಸಾದೊಳಲು ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಚಿಕಮರಿಯಪ್ಪ, ಮನು, ಶಿವದಾಸ್‌ ಸತೀಶ್‌, ಜಗನ್ನಾಥ್‌, ಮಹೇಶ್‌, ವೀರಭದ್ರಸ್ವಾಮಿ, ನಗರಕೆರೆ ಪ್ರಸನ್ನ, ಮಧು, ಅಭಿ, ಶಿವು, ಸುಧಾಕರ್‌, ದ್ಯಾವಯ್ಯ ಸೇರಿದಂತೆ ಮತ್ತಿತರರು ಇದ್ದರು.

ನನ್ನ ಜೀವನೋತ್ಸಾಹ ಕುಂದಿಲ್ಲ

 ಮಂಡ್ಯ (ಡಿ. 19):  ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯಿಂದ 91ರ ಇಳಿ ವಯಸ್ಸಿನಲ್ಲೂ ನನ್ನ ಜೀವನೋತ್ಸಾಹ ಕುಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ಕರ್ನಾಟಕ ಸಂಘ ಮತ್ತು ಸಂಕಥನ ಮಂಡ್ಯ ವತಿಯಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜಗದೀಶ್‌ ಕೊಪ್ಪ ಅವರ ದಕ್ಷಿಣದ ಗಾಂಧಿ ಕೆ. ಕಾಮರಾಜ್‌ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕೆಲವರು ನರೇಂದ್ರ ಮೋದಿ (Narendra Modi)  ಅವರನ್ನು ಹಿಂದೆ - ಮುಂದಿಲ್ಲದವರು ಎಂದು ಅತ್ಯಂತ ಲಘುವಾಗಿ ಟೀಕಿಸುತ್ತಾರೆ. ಆದರೆ, ರಾಷ್ಟ್ರ ನಾಯಕರನ್ನು ಸೃಷ್ಟಿಸಬಲ್ಲಂತಹ ಶಕ್ತಿ ಹೊಂದಿದ್ದ ಕೆ.ಕಾಮರಾಜ್‌  ನಾಡಾರ್‌ ಅವರೂ ಕೂಡ ಆ ಜನ್ಮ ಬ್ರಹ್ಮಚಾರಿಯಾಗಿದ್ದರು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

1967ರಲ್ಲಿ ನಾನು ಹಾಗೂ ಎಚ್‌. ಕೆ. ವೀರಣ್ಣ ಗೌಡರು ಅಂದಿನ ಚುನಾವಣೆಯಲ್ಲಿ (Election)  ಸೋಲನುಭವಿಸಿದ್ದೆವು. ಆಗ ಆಕಾಶವಾಣಿ ವಾರ್ತೆಯಲ್ಲಿ ಕೆ.ಕಾಮರಾಜ್‌ ನಾಡಾರ್‌ ಕೂಡ ಚುನಾವಣೆಯಲ್ಲಿ ಸೋಲನುಭವಿಸಿದ್ದು ಬಿತ್ತರಗೊಂಡಿತ್ತು. ಆಗ ನಾವು ಅಂತಹ ದೊಡ್ಡ ವ್ಯಕ್ತಿಯೇ ಸೋತಿದ್ದಾರೆ. ನಮ್ಮದೇನು ಮಹಾ ಎಂದು ಸಮಾಧಾನಪಟ್ಟುಕೊಂಡಿದ್ದೆವು. ಆದರೆ, ಸಭ್ಯತೆಯ ವ್ಯಾಪ್ತಿಯನ್ನು ಮೀರಿ ಎದುರಾಳಿಯನ್ನು ಟೀಕಿಸುವ ಮಟ್ಟಕ್ಕೆ ನಾವು ಇಳಿಯುತ್ತಿರಲಿಲ್ಲ. ಒಮ್ಮೆ ಕೆ.ವಿ.ಶಂಕರಗೌಡ ಕೂಡ ನನ್ನ ಎದುರಾಳಿಯಾಗಿದ್ದರು. ಪ್ರಚಾರದ ದಿನಗಳಲ್ಲಿ ಒಂದು ದಿನವೂ ಅವರ ವಿರುದ್ಧ ಲಘುವಾಗಿ ಮಾತನಾಡಿಲ್ಲ. ಏಕೆಂದರೆ, ಶಂಕರಗೌಡರು ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಅನನ್ಯವಾದುದು ಎಂಬ ಸೂಕ್ಷ್ಮತೆ ನಮ್ಮಲ್ಲಿತ್ತು ಎಂದರು.

ಆನಂತರದಲ್ಲಿ ಜಿಲ್ಲೆಯ ಜನರು ನನ್ನನ್ನು ಸಂಸತ್ತಿಗೆ ಕಳುಹಿಸಿದರು. ಅಲ್ಲಿ ಕೆ.ಕಾಮರಾಜ್‌ ಅವರ ರಾಜಕೀಯ ಕಾರ್ಯವೈಖರಿಯನ್ನು ಹತ್ತಿರದಿಂದ ಕಾಣುವಂತಾಯಿತು. ಇಂತಹ ಅವಕಾಶ ಕೊಟ್ಟಿದ್ದಕ್ಕಾಗಿ ಜಿಲ್ಲೆಯ ಜನರನ್ನು ಮನಃತುಂಬಿ ಅಭಿನಂದಿಸುತ್ತೇನೆ ಎಂದರು.

Follow Us:
Download App:
  • android
  • ios