* ಬಿಜೆಪಿಯವರು ರಾಷ್ಟ್ರೀಕರಣ ಮಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ತಾರೆ* ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಬಿಟ್ಟರೆ ಇನ್ನೇನೂ ಸಾಧನೆ ಮಾಡದ ಬಿಜೆಪಿ* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರುಣೆ ಮತ್ತು ಮಾನವೀಯತೆ ಇಲ್ಲ

ಹರಪನಹಳ್ಳಿ(ಜು.09): ಡಾ. ಬಿ.ಆರ್‌. ಅಂಬೇಡ್ಕರ್‌ ಮಾಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಉದ್ದೇಶ ಬಿಜೆಪಿ ಹೊಂದಿದೆ. ಕೋವಿಡ್‌ಗಿಂತ ಬಿಜೆಪಿ ಡೇಂಜರ್‌ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಆರೋಪಿಸಿದ್ದಾರೆ. 

ಗುರುವಾರ ಪಟ್ಟಣದಲ್ಲಿ ನೂತನವಾಗಿ ಆರಂಭವಾದ ಕಾಂಗ್ರೆಸ್‌ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಖಾಸಗೀಕರಣ ಮಾಡುವವರಿಗೆ ದೇಶಪ್ರೇಮಿ ಪಟ್ಟ ಮತ್ತು ರಾಷ್ಟ್ರೀಕರಣ ಮಾಡುವವರಿಗೆ ದೇಶದ್ರೋಹಿ ಪಟ್ಟಕಟ್ಟುತ್ತಾರೆ ಎಂದು ಆರೋಪಿಸಿದ್ದಾರೆ. 

ಸಿಎಂ ಯಡಿಯೂರಪ್ಪಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ..!

ಕರುಣೆ ಮತ್ತು ಮಾನವೀಯತೆ ಇಲ್ಲದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಾಗಿವೆ. ಬಿಜೆಪಿಯವರು ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಬಿಟ್ಟರೆ ಇನ್ನೇನೂ ಸಾಧನೆ ಮಾಡಿಲ್ಲ ಎಂದು ದೂರಿದ್ದಾರೆ.