ಗಂಗಾವತಿ(ಜೂ.28): ಸೀರೆಯುಟ್ಟ ಮಹಿಳೆಯ ಫೋಟೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿಯ ಇಸ್ಲಾಂಪುರದ ನಿವಾಸಿ ನಯೀಮ್‌ ಅಹ್ಮದ್‌ ಎಂಬವನ ಮೇಲೆ ದೂರು ದಾಖಲಾಗಿದೆ. ಆತ ಎಡಿಟ್‌ ಮಾಡಿದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ. 

'ಪ್ರಧಾನಿ ಮೋದಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಸತ್ಯ ಮರೆಮಾಚುತ್ತಿದ್ದಾರೆ'

ಇದನ್ನು ನೋಡಿದ ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಮಾದಿಗ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ್ವಯ ಪೊಲೀಸರು ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.