ತುಮಕೂರು (ಸೆ.13): ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬರುವ ದಿನಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸೂರ್ಯ ಚಂದ್ರರಷ್ಟೆಸತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶಗೌಡ ತಿಳಿಸಿದರು.

ಶಿರಾ ವಿಧಾನಸಭಾ ಕ್ಷೇತ್ರದ ಕಳ್ಳಂಬೆಳ್ಳ ಹೋಬಳಿ ಅಂಡೆಚಿಕ್ಕನಹಳ್ಳಿ ಗ್ರಾಮದಲ್ಲಿ ಬೂತ್‌ ಸಮಿತಿ ರಚನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿ.ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ಶಿರಾ ಮತಕ್ಷೇತ್ರದಲ್ಲಿ ಉಪಚುನಾವಣೆ ಬಂದಿದೆ. ಯಾರು ಕೂಡ ಇದನ್ನು ನಿರೀಕ್ಷೆ ಮಾಡಲಿಕ್ಕೆ ಕೂಡ ಸಾಧ್ಯವಾಗಿರಲಿಲ್ಲ, ಶಿರಾ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀರಾವರಿ ಸಮಸ್ಯೆ ಬಹಳ ದೊಡ್ಡ ಮಟ್ಟದಲ್ಲಿ ಜನತೆ ಗ್ರಾಮಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹತ್ತು ಸಾವಿರ ಮನೆಗಳ ಮಂಜೂರಾತಿಗಾಗಿ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದೇನೆ. ವಸತಿ ಸಚಿವರು ಮನೆ ಮಂಜೂರು ಮಾಡಿಕೊಡುವುದಾಗಿ ಕೂಡ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮತ್ತೆ ಗರಿಗೆದರಿದ ಸಚಿವ ಸಂಪುಟ ವಿಸ್ತರಣೆ ಚರ್ಚೆ: ಸಿಎಂ ದಿಲ್ಲಿ ಭೇಟಿಗೆ ಮುಹೂರ್ತ ಫಿಕ್ಸ್ ...

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸಕಾಲಕ್ಕೆ ನೀರು ಹರಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನೀರು ಹರಿಸುವುದಾಗಿ ತಿಳಿಸಿದರು.

ಈ ಭಾಗದ ರೈತರ ಜೀವನಾಡಿ ಎಂದು ಬಣ್ಣಿಸಿರುವ ಹೇಮಾವತಿ ನೀರನ್ನು ಕಳ್ಳಂಬೆಳ್ಳ ಸಿರಾ ಮತ್ತು ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸಿ ರೈತರ ಬದುಕನ್ನು ಸುಂದರ ಮಾಡಲು ನಮ್ಮ ಪಕ್ಷ ಸದಾ ರೈತರ ಪರವಾಗಿ ಕೆಲಸ ಮಾಡಿದ ಪಕ್ಷ ಬಿಜೆಪಿ ನೀವೆಲ್ಲರೂ ಕೂಡ ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೋಲಂಬೋ ಪ್ರವಾಸ ಕಥನ: ಜಮೀರ್ ಹೇಳಿಕೆ ಬೆನ್ನಲ್ಲೇ ಎಳೆ-ಎಳೆಯಾಗಿ ಬಿಚ್ಚಿಟ್ಟ ಎಚ್‌ಡಿಕೆ ..

ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಎಸ್‌ ಆರ್‌ ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಕೆ ಮಂಜುನಾಥ್‌, ವಿಭಾಗ ಪ್ರಭಾರಿ ಲಕ್ಷ್ಮೇಶ್‌ ಬಸವರಾಜು ವೀರೇಶ್‌, ಜಿಲ್ಲಾ ಉಪಾಧ್ಯಕ್ಷ ರಮೇಶ್‌ ರಾಜೇಶ್‌ ಗೌಡ, ಸಿಂಡಿಕೇಚ್‌ ಸದಸ್ಯ ಶ್ರೀನಿವಾಸ ಮುಖಂಡ ಗುಡದಟ್ಟಿತಿಪ್ಪೇಸ್ವಾಮಿ, ಅಜ್ಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಶಿರಾ ವಿಧಾನಸಭಾ ಕ್ಷೇತ್ರದ ಕಳ್ಳಂಬೆಳ್ಳ ಹೋಬಳಿ ಅಂಡೆಚಿಕ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಬೂತ್‌ ಸಮಿತಿ ರಚನಾ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶಗೌಡ ಮಾತನಾಡಿದರು.