ಮೈಸೂರು(ಡಿ.07): ರಾಜ್ಯದಲ್ಲಿ ಡಿ.05ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಇದೀಗ ಎಲ್ಲರೂ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಅಭ್ಯರ್ಥಿಗಳು ಟೆಂಪಲ್‌ ರನ್‌ನಲ್ಲಿ ಬ್ಯುಸಿ ಇದ್ದರೆ, ಬೆಂಬಲಿಗರು ಗುಪ್ತವಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಹುಣಸೂರು ಉಪಚುನಾವಣೆಯ ಬಗ್ಗೆ ಬಿಜೆಪಿ ಪಾಳಯದಲ್ಲಿ ಗೆಲುವಿನ ಲೆಕ್ಕಾಚಾರ ನಡೆದಿದೆ. ಸ್ಥಳೀಯ ಬಿಜೆಪಿ ನಾಯಕರು ಪಡೆದ ಎಕ್ಸಿಟ್ ಪೋಲ್ ಪ್ರಕಾರ ವಿಶ್ವನಾಥ್‌ಗೆ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ.

200ರ ಗಡಿ ದಾಡಿದ ಈರುಳ್ಳಿ ದರ: ತಗೊಳೋದಾ ಸುಮ್ನೆ ನೋಡೋದಾ?...

ಅಡಗೂರು ಎಚ್.ವಿಶ್ವನಾಥ್​ಗೆ ನಿರಾಯಾಸ ಗೆಲುವು ಸಿಗುತ್ತದೆ ಎಂದು ಎಕ್ಸಿಟ್ ಪೋಲ್ ಸೂಚಿಸುತ್ತಿರುವುದಾಗಿ ಬಿಜೆಪಿ ನಾಯಕರು ತಿಳಿಸುತ್ತಿದ್ದಾರೆ. ಮತ ಎಣಿಕೆಗೂ ಮುನ್ನವೇ ಫಲಿತಾಂಶ ಪ್ರಕಟವಾಗಿದ್ದು, ಜಾತಿ ಸಮೀಕರಣದ ಲೆಕ್ಕಾಚಾರ ಹೊರಬಿದ್ದಿದೆ.

ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಗೆಲುವಿನ ವಿಶ್ವಾಸ ಕಂಡು ಬಂದಿದ್ದು, ವಿಶ್ವನಾಥ್ 10,421 ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರಮುಖ 20 ಜಾತಿಗಳ ಮತಗಳನ್ನು ಲೆಕ್ಕ ಹಾಕಿದ್ದಾರೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಹಳ್ಳಿಹಕ್ಕಿ, ಗೆಲುವಿಗಾಗಿ ಸಾಯಿಬಾಬನ ಮೊರೆ

ಒಕ್ಕಲಿಗ, ಕುರುಬ, ಬ್ರಾಹ್ಮಣ, ಲಿಂಗಾಯತ, ಈಡಿಗ, ಮುಸ್ಲಿಂ, ಎಸ್ಸಿ, ಎಸ್ಟಿ, ಕ್ರಿಶ್ಚಿಯನ್, ಗಾಣಿಗ, ಮರಾಠ ಸೇರಿದಂತೆ ಹಲವು ಜಾತಿಗಳ ಮತಗಳ ಲೆಕ್ಕಾಚಾರ ಮಾಡಲಾಗಿದೆ.

ಕಾಂಗ್ರೆಸ್ ನಾಯಕರು ಬಿಜೆಪಿ ಲೆಕ್ಕಾಚಾರಕ್ಕೆ ತದ್ವಿರುದ್ಧ ಮಾಹಿತಿ ಸಂಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕರ ಲೆಕ್ಕಾಚಾರದ ಪ್ರಕಾರ 15,000 ಮತಗಳ ಅಂತರದಲ್ಲಿ ಎಚ್.ಪಿ.ಮಂಜುನಾಥ್ ಗೆಲ್ಲುವ ನಿರೀಕ್ಷೆ ವ್ಯಕ್ತವಾಗಿದೆ. ಬಿಜೆಪಿ ಲೆಕ್ಕಾಚಾರದ ಸಾರಾಂಶ ಒಟ್ಟು ಮತಗಳು 2,26,004, ಚಲಾವಣೆಯಾದ ಮತಗಳು 1,80,809. ಬಿಜೆಪಿ- 75,645, ಕಾಂಗ್ರೆಸ್ - 65,224 , ಜೆಡಿಎಸ್- 35,000, ಬಿಎಸ್ಪಿ, ಎಸ್​ಡಿಪಿಐ, ಪಕ್ಷೇತರ- 5,000.