ಬೆಂಗಳೂರು [ಡಿ.08]:  ನಾನು ಶಾಸಕನಾದ ಬಳಿಕ ಯಾರಿಗೆ ಸಮಸ್ಯೆಯಾಗಿದೆ ಎಂಬುದು ಬಹಿರಂಗ ಹೇಳಬಹುದು, ಇದಕ್ಕಾಗಿ ಯಾವುದೇ ಮಾಧ್ಯಮದಲ್ಲಿಯೂ ಬಹಿರಂಗವಾಗಿ ಚರ್ಚೆಗೆ ಸಿದ್ಧ ಎಂದು ಮಹಾಲಕ್ಷ್ಮೀ ಲೇಔಟ್‌ನ ಜೆಡಿಎಸ್‌ ಅಭ್ಯರ್ಥಿ ಗಿರೀಶ್‌ ಕೆ.ನಾಶಿ ಅವರಿಗೆ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಸವಾಲು ಹಾಕಿದ್ದಾರೆ.

ಮಹಾಲಕ್ಷ್ಮೀ ಕ್ಷೇತ್ರದ ರಾಕ್ಷಸರನ್ನು ಮಟ್ಟಹಾಕಲು ಕೊಲ್ಲೂರು ಮುಕಾಂಬಿಕೆ ದೇವಸ್ಥಾನಕ್ಕೆ ಹೋಗಿದ್ದೆ ಎಂದು ಗಿರೀಶ್‌ ಕೆ.ನಾಶಿ ಹೇಳಿಕೆಗೆ ನಗರದಲ್ಲಿ ಶನಿವಾರ ತಿರುಗೇಟು ನೀಡಿದ ಅವರು, ಜೆಡಿಎಸ್‌ ಅಭ್ಯರ್ಥಿ ಭ್ರಮೆಯಲ್ಲಿದ್ದಾರೆ. ಯಾವುದೋ ಲೋಕದಿಂದ ಹುಟ್ಟಿಬಂದಿರಬೇಕು. ಶಾಸಕನಾದ ಬಳಿಕ ಯಾರಿಗೆ ಸಮಸ್ಯೆಯಾಗಿದೆ ಎಂಬುದನ್ನು ಹೇಳಲಿ. ಬೇಕಾದರೆ ಯಾವುದೇ ಮಾಧ್ಯಮದಲ್ಲಿಯೂ ಬಹಿರಂಗವಾಗಿ ಚರ್ಚೆಗೆ ಸಿದ್ಧ ಎಂದು ಕಿಡಿಕಾರಿದರು.

ಕೋಪ ಮರೆತು BSY ನಿವಾಸಕ್ಕೆ ಬಂದ ಸೊಗುಡು ಶಿವಣ್ಣಗೆ ಮುಜುಗರ: ಏನಾಯ್ತಪ್ಪ..?.

ಎಲ್ಲಿಂದಲೋ ಬಂದು ಇಲ್ಲಿ 10 ಮನೆಯಲ್ಲಿ ಸರಿಯಾಗಿ ಮತ ಕೇಳಿಲ್ಲ. ಯಾವುದೇ ದಾಖಲೆ ಇಲ್ಲದೆ ಮಾತನಾಡಿ, ಓಡಿ ಹೋಗುವುದು ಅಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಅಭಿವೃದ್ಧಿಪರ ಕೆಲಸಗಳು ನನ್ನ ಕೈ ಹಿಡಿಯಲಿವೆ. ಬಿಜೆಪಿ ವರ್ಚಸ್ಸು ಸಹ ಇದಕ್ಕೆ ಸಾಥ್‌ ನೀಡಲಿದೆ. ಮಹಾಲಕ್ಷ್ಮೀ ಲೇಔಟ್‌ನ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಜೆಡಿಎಸ್‌ ಜಯಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.