ಆರೋಗ್ಯ ಹದಗೆಟ್ಟಿರುವ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. 93 ವರ್ಷದ ಅಜಾತ ಶತ್ರು ಅಟಲ್ ಆರೋಗ್ಯ ಸುಧಾರಿಸಿ, ಅವರ ಆಯುಷ್ಯ ಹೆಚ್ಚಲೆಂದು ಪ್ರಾರ್ಥಿಸಿ, ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರು ಬೇಗ ಗುಣಮುಖವಾಗಲೆಂದು ಪ್ರಾರ್ಥಿಸಿ, ತಮ್ಮ ಆಯುಷ್ಯವನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ಧಾರೆ ಎರೆದಿದ್ದಾರೆ.
ಮಂಡ್ಯದ ವಿವಿಧ ದೇವಾಲಯಗಳಲ್ಲಿ ವಾಜಪೇಯಿ ಹೆಸರಲ್ಲಿ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದು, ಇಲ್ಲಿನ ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಆಯಸ್ಸು ವೃದ್ಧಿಸಲೆಂದು ಪ್ರಾರ್ಥಿಸಿದ್ದಾರೆ.
ಕವಿರತ್ನ ಕಾಳಿದಾಸನಿಗೆ ಬೋಜರಾಜ ತನ್ನ ಆಯುಷ್ಯವನ್ನು ಧಾರೆ ಎರೆದಂತೆ, ವಾಜಪೇಯಿಗೆ ತಮ್ಮ ಆಯುಷ್ಯವನ್ನು ಕಾರ್ಯಕರ್ತರು ಧಾರೆ ಎರೆದಿದ್ದಾರೆ.
