ಹುಬ್ಬಳ್ಳಿ(ಜು.02): ಸೀಲ್‌ಡೌನ್‌ ಆಗಿದ್ದರೂ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಬುಧವಾರ ರಾತ್ರಿ ಕೆಲವರು ಮನೆಯಿಂದ ಹೊರಗಡೆ ಬಂದು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.

ಗ್ರಾಮದಲ್ಲಿ 40ಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌ ಬಂದರೂ ಎಚ್ಚೆತ್ತುಕ್ಕೊಳ್ಳದೆ ಕರ್ಫ್ಯೂ ಜಾರಿ ಇದ್ದರೂ ಜನ್ಮದಿನ ಆಚರಣೆ ಮಾಡಿರುವ ಕುರಿತು ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಕೊರೋನಾ ಸ್ಫೋಟ: 35 ಕೋವಿಡ್‌ ಪಾಸಿಟಿವ್‌ ಕೇಸ್‌

ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಏನು ಮಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ತೋಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಜನ್ಮದಿನ ಆಚರಿಸಲಾದರೂ ಯಾವುದೇ ಕ್ರಮ ಕೈಗೊಳ್ಳದ ನವಲಗುಂದ ಪೊಲೀಸರ ಬಗೆಗೂ ಬೇಸರ ವ್ಯಕ್ತವಾಗಿದೆ.