ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ| ಹಲವು ಭಾಷೆಗಳಲ್ಲಿ ವಿದ್ವತ್ತು ಹೊಂದಿದ್ದ ಶರ್ಮಾ ಅವರು ಕವಿ, ನಾಟಕಕಾರರೂ ಆಗಿದ್ದರು,ಇಷ್ಟೇ ಅಲ್ಲದೆ, ಅವರನ್ನು ಕುರಿತು ನೂರಾರು ಹಾಡುಗಳು, ಗ್ರಂಥಗಳೂ ಪ್ರಕಟ|
ಹೊಸದುರ್ಗ(ನ.28): ಸದ್ಗುರು, ಬಡವರ ಬಂಧು, ಅವಧೂತ, ದೇವಮಾನವ, ಆಂಜನೇಯನ ಪ್ರತಿರೂಪ ಎಂಬೆಲ್ಲ ವಿಶೇಷಣಗಳಿಂದ ಕರೆಸಿಕೊಂಡು ನಾಲ್ಕು ದಶಕಗಳ ಕಾಲ ಈ ಭಾಗದ ಮನೆಮಾತಾಗಿದ್ದ ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿ (77) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲ ದಿನಗಳ ಹಿಂದೆ ಬೆಲಗೂರಿನ ಆಶ್ರಮದಲ್ಲಿ ಕೋವಿಡ್‌ಗೆ ತುತ್ತಾಗಿದ್ದ ಅವರು ಯಕೃತ್ತಿನ ತೊಂದರೆಯಿಂದಲೂ ಬಳಲುತ್ತಿದ್ದರು. ಹಲವು ಭಾಷೆಗಳಲ್ಲಿ ವಿದ್ವತ್ತು ಹೊಂದಿದ್ದ ಶರ್ಮಾ ಅವರು ಕವಿ, ನಾಟಕಕಾರರೂ ಆಗಿದ್ದರು. ಇಷ್ಟೇ ಅಲ್ಲದೆ, ಅವರನ್ನು ಕುರಿತು ನೂರಾರು ಹಾಡುಗಳು, ಗ್ರಂಥಗಳೂ ಪ್ರಕಟವಾಗಿವೆ.
ಕೋಟೆ ವೀಕ್ಷಣೆ ಟಿಕೆಟ್‌ನಲ್ಲಿ ಗೋಲ್ಮಾಲ್? ಸರ್ಕಾರಕ್ಕೆ ಸಿಬ್ಬಂದಿಗಳಿಂದ ವಂಚನೆ?
ಶೃಂಗೇರಿ ಜಗದ್ಗುರುಗಳ ಶಿಷ್ಯರಾಗಿದ್ದ ಶರ್ಮಾ ಅವರು ರಾಜ್ಯದ ಎಲ್ಲಾ ಜಾತಿಯ ಮಠಾಧೀಶರೊಂದಿಗೆ ಅನ್ಯೊನ್ಯ ಸಂಬಂಧ ಇರಿಸಿಕೊಂಡಿದ್ದರು. ಕೋಟಿರುದ್ರಯಾಗದ ಮೂಲಕ ಹೊಸ ದಾಖಲೆ ಬರೆದಿದ್ದಲ್ಲದೆ ಈ ಯಾಗದಲ್ಲಿ ದಲಿತ ಸಮುದಾಯದ ಸ್ವಾಮೀಜಿಯೊಬ್ಬರನ್ನು ಆಹ್ವಾನಿಸಿ ಸನ್ಮಾನ ಮಾಡಿದ್ದರು.
ಇತ್ತೀಚೆಗೆ ಬೆಲಗೂರಿನಲ್ಲಿ ಅವರು ನಿರ್ಮಿಸಿದ ರಥ ಭಾರತದಲ್ಲಿಯೇ ಅಪರೂಪವೆಂಬ ಖ್ಯಾತಿ ಪಡೆದಿದೆ. ದೇವಾಲಯಗಳ ರಥಗಳನ್ನು ಸಿದ್ಧಗೊಳಿಸುವಾಗ ದೇವರ ವಿವಿಧ ರೂಪಗಳನ್ನು, ಮಿಥುನ ಶಿಲ್ಪಗಳನ್ನು ಕೆತ್ತಿಸುವುದು ವಾಡಿಕೆ. ಆದರೆ ಬಿಂದು ಮಾಧವರು ಅದಕ್ಕೆ ತಿಲಾಂಜಲಿ ಇಟ್ಟು ರಥದಲ್ಲಿ ರಾಷ್ಟ್ರದ ವಿಜ್ಞಾನಿಗಳು, ಸಾಹಿತಿಗಳು, ವೈದ್ಯರು, ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು, ಸಿನಿಮಾ ನಟರನ್ನು ಒಳಗೊಂಡ ಅಪರೂಪದ ಶಿಲ್ಪಗಳನ್ನು ಕೆತ್ತಿಸಿ ಮಾದರಿಯಾಗಿದ್ದಾರೆ. ಶರ್ಮಾ ಅವರ ಅಂತ್ಯಕ್ರಿಯೆ ಕೋವಿಡ್ ಮಾರ್ಗಸೂಚಿಯಂತೆ ಸಂಜೆ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಲಾಯಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 28, 2020, 9:01 AM IST