ಬೈಕ್‌-ಟ್ರಕ್ ಮಧ್ಯೆ ಡಿಕ್ಕಿ| ಇಬ್ಬರು ಬೈಕ್ ಸವಾರರ ಸಾವು| ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಬೂದಿಹಾಳ ಕ್ರಾಸ್ ಬಳಿ ನಡೆದ ಘಟನೆ| ಮೃತರಿ ಸಂಶಿ ಗ್ರಾಮದವರು ಎಂದು ತಿಳಿದು ಬಂದಿದೆ|

ಹುಬ್ಬಳ್ಳಿ(ಡಿ.30): ಬೈಕ್‌-ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಬೂದಿಹಾಳ ಕ್ರಾಸ್ ಬಳಿ ಇಂದು(ಸೋಮವಾರ) ನಡೆದಿದೆ.

ಮೃತರನ್ನು ಕಿರಣ ಮುದಿಯಪ್ಪ ಬೆಡಿಗೇರ್, ಅಭೀಷಕ್ ಪಡತೇರ ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಸಂಶಿ ಗ್ರಾಮದವರು ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತ ಮುದಿಯಪ್ಪ ಬೆಡಿಗೇರ್, ಅಭೀಷಕ್ ಪಡತೇರ ಲಕ್ಷ್ಮೇಶ್ವರ ಮಾರ್ಗದಿಂದ ಸಂಶಿಗೆ ಬರುತ್ತಿದ್ದ ವೇಳೆ ಟ್ರಕ್‌ಗೆ ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಗುಡಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.