Asianet Suvarna News Asianet Suvarna News

Bengaluru: ಕಡೆಗೂ ಸಾವು ಬದುಕಿನ ಹೋರಾಟದಲ್ಲಿ ಗೆದ್ದ ಬೈಕ್ ಸವಾರ!

ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. 

Bike Rider who was in a coma has regained consciousness at Bengaluru gvd
Author
First Published Nov 17, 2022, 12:22 PM IST

ಬೆಂಗಳೂರು (ನ.17): ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಸಂದೀಪ್‌ಗೆ ಹೆಚ್ಚಿನ ಚಿಕಿತ್ಸೆ ಮುಂದುವರಿದಿದೆ. ಸಂದೀಪ್ ವಿದ್ಯಾರಣ್ಯಪುರ ನಿವಾಸಿಯಾಗಿದ್ದರು. 

ಸಂದೀಪ್ ನವೆಂಬರ್ ಒಂದರಂದು ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದು, ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ವಾಪಸ್ ಬರುವಾಗ ಅವಘಡ ನಡೆದಿತ್ತು. ಹೆಬ್ಬಾಳದ ಖಾಸಗಿ ಅಸ್ಪತ್ರೆಯಲ್ಲಿ ಸಂದೀಪ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು, ಪ್ರಜ್ಞಾಹೀನನಾಗಿ ಕೋಮಾ ಸ್ಥಿತಿಗೆ ತಲುಪಿದ್ದರು, ವೈದ್ಯರು ನಿರಂತರ ಒಂದು ವಾರ ಚಿಕಿತ್ಸೆ ನೀಡಿ ನಿಗಾ ವಹಿಸಿದ್ದರು. ಬೈಕ್ ಸವಾರ ಜೀವನ್ಮರಣದ ಹೋರಾಟ ಜಯಿಸಿದ್ಧಾರೆ. ಬೈಕ್‌ನಿಂದ ಬಿದ್ದ ಬಗ್ಗೆ ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಂದೀಪ್ ಪತ್ನಿ ಸೀಮಾ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದರು.

Chikkamagaluru: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ

ಸ್ವಲ್ಪ ರಿಕವರಿ ಆಗುತ್ತಿದ್ದಾರೆ: ನಿನ್ನೆ (ಬುಧವಾರ) ಸಂದೀಪ್ ಸ್ವಲ್ಪ ಕಣ್ಣು ಬಿಟ್ಟಿದ್ದಾರೆ. ಇನ್ನೂ ಕೂಡ ಯಾರನ್ನು ಗುರುತು‌ ಹಿಡಿಯುತ್ತಿಲ್ಲ. ಸ್ವಲ್ಪ ರಿಕವರಿ ಆಗುತ್ತಿದ್ದಾರೆ ಎಂದು ಸಂದೀಪ್ ಪತ್ನಿ ಸೀಮಾ ಹೇಳಿದ್ದಾರೆ. ಡಾಕ್ಟರ್ ಇನ್ನೂ ರಿಕವರಿ ಆಗಲು ಹಲವು ತಿಂಗಳು ಬೇಕಾಗತ್ತೆ ಅಂತಾ ಹೇಳಿದ್ದಾರೆ. ಇದುವರೆಗೂ ಅಸ್ಪತ್ರೆಗೆ 14 ಲಕ್ಷ ಹಣ ಖರ್ಚಾಗಿದೆ. ಮಾಧ್ಯಮದಲ್ಲಿ ವರದಿ ಪ್ರಸಾರವಾದ ನಂತರ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹಲವು ತಿಂಗಳು ಚಿಕಿತ್ಸೆ ಅಗತ್ಯ ಹಿನ್ನಲೆ ಸಹಾಯದ ಅಗತ್ಯ ತುಂಬಾ ಇದೆ. ಈ  ಖಾಸಗಿ ಅಸ್ಪತ್ರೆಯಲ್ಲಿ ತುಂಬಾ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು.

ಹೈಕಮಾಂಡ್‌ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ

ಹಾಗಾಗೀ ಹಲವು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವಂತೆ ಹಲವು ಆಸ್ಪತ್ರೆಗೆ ಹೋಗಿದ್ದೆ. ಆದರೆ ಒಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ಬೆಡ್ ಇಲ್ಲ ಅಂತಾ ಹೇಳಿದ್ರು, ಈ ಎಸ್‌ಐ ಅಸ್ಪತ್ರೆಯಲ್ಲಿ ನ್ಯೂರೂ ಸರ್ಜನ್ ಇಲ್ಲ ಅಂತಾರೇ. ಇನ್ನೂ ಕೆಲವು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ವೆಂಟಿಲೇಟರ್ ಇಲ್ಲ ಅಂತಾ ಹೇಳ್ತಾರೆ. ಇದುವರೆಗೂ ಕೂಡ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಹಾಯ ಮಾಡಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ. ಇನ್ನೂ ರಸ್ತೆಯಲ್ಲಿ ‌ಹಾಗೇ ಗುಂಡಿಗಳು ಇವೇ ಅವುಗಳನ್ನು ದಯಾಮಾಡಿ ಮುಚ್ಚಿ. ನಮಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಸಂದೀಪ್ ಪತ್ನಿ ಸೀಮಾ ಮನವಿ ಮಾಡಿದರು.

Follow Us:
Download App:
  • android
  • ios