ಬಲೆಗೆ ಬಿದ್ದ ಬೃಹತ್ ತಿಮಿಂಗಿಲ ಮರಳಿ ಸಮುದ್ರಕ್ಕೆ
- ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ 1200 ಕೆಜಿ ತೂಕದ ಬೃಹತ್ ತಿಮಿಂಗಿಲ ಬಲೆಗೆ
- ಬೃಹತ್ ತಿಮಿಂಗಿಲ ದೊರೆತಿದ್ದು, ಅದನ್ನು ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಮಂಗಳೂರು (ಅ.27): ಆಳ ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ತೆರಳಿದ್ದ ಮೀನುಗಾರರಿಗೆ 1200 ಕೆಜಿ ತೂಕದ ಬೃಹತ್ ತಿಮಿಂಗಿಲ (Whale) ದೊರೆತಿದ್ದು, ಅದನ್ನು ಮರಳಿ ಸಮುದ್ರಕ್ಕೆ(Sea) ಬಿಟ್ಟಿದ್ದಾರೆ.
ಸಾಗರ್ ಹೆಸರಿನ ಬೋಟ್ (Boat) 10 ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ಕಡಲಿಗೆ ಇಳಿದಿತ್ತು. ಮೂರು ದಿನಗಳ ಹಿಂದೆ ಸಮುದ್ರ ದಡದಿಂದ 50 ನಾಟಿಕಲ್ ಮೈಲು (Mile) ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಭಾರೀ ತಿಮಿಂಗಿಲ ಬಲೆಗೆ ಬಿದ್ದಿತ್ತು. ಅಲ್ಲೇ ಅದನ್ನು ಕಡಲಿಗೆ ಮರಳಿ ಬಿಟ್ಟಿದ್ದು, ಮೀನುಗಾರರು(Fishermen) ದಡಕ್ಕೆ ಬಂದ ಬಳಿಕ ವಿಷಯ ಬಹಿರಂಗಗೊಂಡಿದೆ.
ಸತ್ತ ತಿಮಿಂಗಿಲದೊಳಗಿತ್ತು ಕೋಟಿಗಟ್ಟಲೇ ನಿಧಿ
ಬಲೆ ಮೇಲೆತ್ತುವಾಗ ಭಾರೀ ಭಾರ ಇದ್ದುದರಿಂದ ಯಥೇಚ್ಛ ಮೀನು ಸಿಕ್ಕಿರಬಹುದು ಎಂಬ ಹುಮ್ಮಸ್ಸಿನಲ್ಲಿ ಬೋಟ್‌ನ ಮೀನುಗಾರರಿದ್ದರು. ಮೇಲೆತ್ತಿದಾಗಲೇ ಅದು ತಿಮಿಂಗಿಲ ಎಂದು ಗೊತ್ತಾದದ್ದು. ತಿಮಿಂಗಿಲಗಳು ಅಳಿವಿನಂಚಿನ ಪ್ರಬೇಧವಾಗಿದ್ದರಿಂದ ಅವುಗಳನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಬಲೆಯನ್ನೇ ಕತ್ತರಿಸಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ತಿಮಿಂಗಿಲವನ್ನು ಸಮುದ್ರದಿಂದ ಎತ್ತುವಾಗ ಬೋಟ್‌ನ (boat) ಏರಿಕಂಬವೇ ತುಂಡಾಗಿತ್ತು. ಮೇಲಾಗಿ ಬಲೆಯನ್ನು ತುಂಡರಿಸಿದ್ದರಿಂದ ಸುಮಾರು 1.50 ಲಕ್ಷ ರು. ನಷ್ಟವಾಗಿದೆ.
ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ
ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಪಾಂಡೇಶ್ವರ (Pandeshwara) ಪೊಲೀಸ್ ಠಾಣೆಯಲ್ಲಿ (Police station) ಪ್ರಕರಣ ದಾಖಲಾಗಿದೆ.
ಮೂಲತಃ ತಮಿಳ್ನಾಡಿನ (Tamilnad) ವೆಲ್ ಮುರುಗನ್ (24) ನಾಪತ್ತೆಯಾದ ಮೀನುಗಾರ. ಕಳೆದ 4 ತಿಂಗಳಿನಿಂದ ಅವರು ಅಲ್ ಕೌಸರ್ ಎಂಬ ಬೋಟ್‌ನಲ್ಲಿ ದುಡಿಯುತ್ತಿದ್ದು, ಅ.24ರಂದು ರಾತ್ರಿ 10.30ಕ್ಕೆ 10 ಮಂದಿಯೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ರಾತ್ರಿ 11.15ಕ್ಕೆ ಬೋಟ್‌ನಲ್ಲಿ ವೆಲ್ ಮುರುಗನ್ ಏಕಾಏಕಿ ಕಾಣೆಯಾಗಿದ್ದು, ತಕ್ಷಣ ಸಮುದ್ರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ದೂರು ನೀಡಲಾಗಿದೆ.
17 ಕೋಟಿ ಅಂಬರ್ ಗ್ರೀಸ್
ಮಲ್ಲೇಶ್ವರದ ಪೊಲೀಸರು (Bengaluru Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು ತಿಮಿಂಗಲದ ವಾಂತಿ ಅಂಬರ್ ಗ್ರೀಸ್ (Ambergris)ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪುನೀತ್ ಕುಮಾರ್ , ಮಧುಕುಮಾರ್ , ನಂದೀಶ್, ಯೋಗೇಶ್ , ಹಾಗೂ ಗೋಪಾಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 17 ಕೋಟಿ ರೂ. ಬೆಲೆಬಾಳುವ ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಐವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಪ್ರಸನ್ನ ಅಲಿಯಾಸ್ ರ್ಯಾಬಿಟ್ ಎಸ್ಕೇಪ್ ಆಗಿದ್ದಾನೆ.
ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!
ಇತ್ತೀಚೆಗೆ ಡ್ರಗ್ಸ್(ಧರುಗಸ) ಜತೆ ಈ ಅಂಬರ್ ಗ್ರೀಸ್ ಮಾರಾಟದ ಪ್ರಕರಣಗಳು ಒಂದಾದ ಮೇಲೆ ಒಂದು ದಾಖಲಾಗುತ್ತಿದೆ. ಪೊಲೀಸರ ಗಾಳಕ್ಕೆ ಆರೋಪಿಗಳು ಸೆರೆ ಸಿಕ್ಕುತ್ತಿದ್ದಾರೆ.ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 1.7 ಕೋಟಿ ರೂ. ಮೌಲ್ಯವಿದೆ ಎನ್ನುವುದು ಲೆಕ್ಕಾಚಾರ.