ಬೆಂಗಳೂರು(ಜ. 28) ಬೆಂಗಳೂರು ಬಿಎಂಟಿಸಿ ನಿರ್ವಾಹಕರು ಯುಪಿಎಸ್‌ಸಿ ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಗೆ ಟ್ವಿಸ್ಟ್ ಸಿಕ್ಕಿದೆ.

ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಆಗಿ  ಕಾರ್ಯನಿರ್ವಹಿಸುತ್ತಿರುವ ಮಧು ತಮ್ಮ ರೋಲ್ ನಂಬರ್ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ.  ಹಾಗಾಗಿ ಮಧು  ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿಲ್ಲ ಎನ್ನುವುದು ಜೀವಾಳ.

ಬಸ್ ಓಡಿಸಿದ ಎಂಡಿ ಶಿಖಾ; ವಿಡಿಯೋ

ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ಮಿರರ್ ಸಂಪಾದಕ ರವಿ ಜೋಶಿ ' ಕಂಡಕ್ಟರ್ ನಾನು ಐಎಎಸ್ ಅಂತಿಮ ಸಂದರ್ಶನಕ್ಕೆ ಆಯ್ಕೆಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿರುವುದು ಸುಳ್ಳು ಎಂಬುದು ಗೊತ್ತಾಗಿದೆ. ಆತ ನೀಡಿರುವ ರೋಲ್ ನಂಬರ್ ಆತನದ್ದಲ್ಲ. ಆತ ಬಿಎಂಟಿಸಿ ಮತ್ತು ನಮಗೆ ಯಾಕೆ ಸುಳ್ಳು ಹೇಳಿದ ಎಂದು ನಮಗೆ ಅರ್ಥವಾಗುತ್ತಿಲ್ಲ.. ನಮ್ಮ ಎಲ್ಲಾ ಓದುಗರ ಬಳಿ ನಾವು ಕ್ಷಮೆ ಕೋರುತ್ತೇವೆ.  ಒಬ್ಬ ನಿರ್ವಾಹಕ ಐಎಎಸ್ ಪಾಸ್ ಮಾಡಿದ್ದಾನೆ ಎಂದರೆ ಹೆಮ್ಮೆಯ ಸುದ್ದಿಯಾಗಿತ್ತು, ಆದರೆ ಪರಿಸ್ಥಿತಿ ಹಾಗಿಲ್ಲ' ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ನಿರ್ವಾಹಕ ಯಾವ ಕಾರಣಕ್ಕೆ ಹೀಗೆ ಮಾಡಿದರು ಎಂಬುದು ಮಾಖತ್ರ ಇನ್ನು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಒಟ್ಟಿನಲ್ಲಿ ಹೆಮ್ಮೆ ಪಡುವಂತೆ ಮೂಡಿದ್ದ ಸುದ್ದಿ ಈಗ ಹೀಗೇಕೆ ಮಾಡಿದ ಎಂದು ಪ್ರಶ್ನೆ ಮಾಡುವಂತೆ ಮಾಡಿದೆ.