ಧಾರವಾಡ(ಫೆ.24): ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬಕ್ಕೆ ಅಭಿಮಾನಿಗಳು ಹಾಗೂ ಕುಸ್ತಿ ಪಟುಗಳಿಂದ ಎಲ್ಲಿಲ್ಲದ ಪ್ರೋತ್ಸಾಹ ಹಾಗೂ ಬೆಂಬಲ ದೊರೆಯುತ್ತಿದ್ದು, 2ನೇ ದಿನ ಭಾನುವಾರ ಬೆಳಗ್ಗೆಯಿಂದಲೇ ವಿವಿಧ ರೌಂಡ್‌ ರಾಬಿನ್‌ ಹಾಗೂ ನಾಕೌಟ್‌ ಹಂತಗಳ ಕುಸ್ತಿ ಆಟಗಳು ನಡೆದವು.86 ಕೆಜಿ ಪುರುಷರ ಹಿರಿಯರ ವಿಭಾಗದಲ್ಲಿ ಬೆಳಗಾವಿಯ ಮೀರ್‌ ಆರ್‌.ಬಿ. ಹಾಗೂ ಮಲ್ಲಿಕಾರ್ಜುನ ಎಸ್‌. ಕಡ್ಡಿ ಅವರ ನಡುವೆ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮೀರ್‌ ಆರ್‌.ಬಿ. ವಿಜೇತರಾದರು. 3ನೇ ಸುತ್ತಿನಲ್ಲಿ ರಾಮನಗರದ ದಿಲೀಪಕುಮಾರ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು. ಬಾಗಲಕೋಟೆಯ ಸಂತೋಷ ಜಾಧವ ವಿರುದ್ಧ ಆನಂದ ನುಚ್ಚಿನ್‌ 2ನೇ ಸುತ್ತಿನ ಪಂದ್ಯದಲ್ಲಿ ವಿಜೇತರಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು.

ಬೆಳಗಾವಿಯ ಕೃಷ್ಣ ಕುರವಿನಕೊಪ್ಪ ಅವರು ಮೈಸೂರಿನ ನಿಖಿಲ್‌ ಕುಮಾರ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು. ಬೆಳಗಾವಿಯ ರೋಹಿತ್‌ ಪಾಟೀಲ ಅವರನ್ನು ಪರಾಭವಗೊಳಿಸಿದ ದಾವಣಗೆರೆಯ ಪಂಕಜ್‌ ಕುಮಾರ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು. ಧಾರವಾಡದ ಮಂಜುನಾಥ ರೊಟ್ಟಿ ಅವರನ್ನು ಪರಾಭವಗೊಳಿಸಿದ ಧಾರವಾಡದ ಮಡಿವಾಳಪ್ಪ ಎಸ್‌.ಡಿ. ಅವರು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದರು. ದಾವಣಗೆರೆಯ ಪರಶುರಾಮ ಅವರನ್ನು ಪರಾಭವಗೊಳಿಸಿದ ಬೆಳಗಾವಿಯ ಪರಶುರಾಮ ಮಗದುಮ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು.

ಬೆಳಗಾವಿಯ ದರ್ಶನ ಪಾಟೀಲ ಅವರನ್ನು ಪರಾಭವಗೊಳಿಸಿದ ಬೆಳಗಾವಿಯ ರಾಜಶೇಖರ ಎಂ.ಪಿ. ಅವರು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದರು. ಧಾರವಾಡದ ನಾಗಯ್ಯ ಹಿರೇಮಠ ಅವರನ್ನು ಪರಾಭವಗೊಳಿಸಿದ ಬೆಳಗಾವಿಯ ಹನುಮಂತ ವಾಲೀಕರ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು, 17 ವರ್ಷದೊಳಗಿನ ಬಾಲಕರ 48 ಕೆಜಿ ವಿಭಾಗದ ಪ್ರಾಥಮಿಕ ಸ್ಪರ್ಧೆಗಳಲ್ಲಿ ದಾವಣಗೆರೆಯ ಬಸವರಾಜ ಸಂತಿ, ಬೆಳಗಾವಿಯ ಸಿದ್ಧಾಂತ ಕಾಮ್ಕರ ಅವರ ವಿರುದ್ಧ ಜಯಗಳಿಸಿದರು. ಬೆಳಗಾವಿಯ ಲಗನಣ್ಣ ವಿರುದ್ಧ ಬಾಗಲಕೋಟೆಯ ಬಸವರಾಜ ಎಂ. ಜಯಗಳಿಸಿದರು. ಉತ್ತರ ಕನ್ನಡದ ರೋಹನ್‌ ಎಂ.ಡಿ. ಅವರು ಬೆಳಗಾವಿಯ ಋುಷಿಕೇಶ ಅವರನ್ನು ಮಣಿಸಿದರು. ಬೆಳಗಾವಿಯ ಸಚಿನ್‌ ಎಸ್‌.ಆರ್‌. ಅವರನ್ನು ರಾಜು ಫಡಕೆ ಸೋಲಿಸಿದರು. ಬಾಲಗಕೊಟೆಯ ಬಾಬು ನಿಂಬಾಳ ಧಾರವಾಡದ ಮನೋಜ ಕುಂದಗೋಳ ಅವರನ್ನು ಸೋಲಿಸಿದರು. ಮಲ್ಲಿಕಾರ್ಜುನ ತೋಳಮಟ್ಟಿಸುಹಾಗ ಜೆ.ಡಿ. ವಿರುದ್ಧ ಗೆದ್ದರು.

17 ವರ್ಷದೊಳಗಿನ ಬಾಲಕರ 45 ಕೆಜಿ ವಿಭಾಗದ ರೌಂಡ್‌ ರಾಬಿನ್‌ ಪ್ರಾಥಮಿಕ ಸ್ಪರ್ಧೆಗಳಲ್ಲಿ ಬೆಳಗಾವಿಯ ಓಂಕಾರ ಮಾರುತಿ ಅವರನ್ನು ಗದಗಿನ ಮಂಜುನಾಥ ನೋಕಾಪುರ ಸೋಲಿಸಿದರು. ಧಾರವಾಡದ ಮಂಜುನಾಥ ಕಳವಿ ವಿರುದ್ಧ ಬಾಗಲಕೋಟೆಯ ಆದಮ್‌ ಸಾಬ್‌ ಗಲಗಲಿ ವಿಜಯಿಯಾದರು. ಪರಮಾನಂದ ಲಕ್ಕಾಪುರ ಅವರು ಕಾರ್ತಿಕ ರಾಜಶೇಖರ ಅವರನ್ನು ಮಣಿಸಿದರು. ಧಾರವಾಡದ ಪ್ರವೀಣ ಬಡಕುದರಿ ಅವರು ಜಯಕುಮಾರ ಬಾಡಗಿ ವಿರುದ್ಧ ಸೋಲುಂಡರು. ಈಶ್ವರ ಮದರಕಂಡಿ ವಿರುದ್ಧ ಲಿಂಗರಾಜ ರಾಜಾಮನಿ ಜಯಗಳಿಸಿದರು. ಭರತೇಶ ಸಿರಹಟ್ಟಿವಿರುದ್ಧ ಶ್ರೀನಿವಾಸ ಅಣೋಜಿ ಜಯಗಳಿಸಿದರು.

ಬೆಳಗಾವಿಯ ತೌಫಿಕ್‌ ಮೆಹಬೂಬ ಲೋದಿ ಅವರು ಬಾಗಲಕೋಟೆಯ ಶಿವಾನಂದ ಕಿಸ್ತಿ ವಿರುದ್ಧ ಜಯಗಳಿಸಿದರು. ರುದ್ರಪ್ಪ ಬೈರಪ್ಪನವರ ಅವರು ಬಾಗಲಕೋಟೆಯ ಶಿವಾನಂದ ಕಿಸ್ತಿ ಅವರನ್ನು ಮಣಿಸಿದರು. ಮನೋಜ ನವಲೂರ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸೂರಜ್‌ ಸುರೇಶ ಸೋಲಿಸಿದರು.

ಬಾಗಲಕೋಟೆಯ ಪ್ರಶಾಂತ ಚಲವಾದಿ ಅವರು ಬೆಳಗಾವಿಯ ರಾಘವೇಂದ್ರ ನಾಯಕ ಅವರನ್ನು ಮಣಿಸಿದರು. ಆದಗೊಂಡ ದರಪ್ಪಾ ಬೀಳಗಿ ಅವರನ್ನು ಹರಿ ಕಾಶಿಲಕರ ಸೋಲಿಸಿದರು. ಬಾಗಲಕೋಟೆಯ ಹನುಮಂತ ಸಂತಿ ಅವರನ್ನು ಬೆಳಗಾವಿಯ ಸಚಿನ ಪಾಟೀಲ್‌ ಸೋಲಿಸಿದರು. ಬಾಗಲಕೋಟೆಯ ರವಿ ಪ್ರಕಾಶ ಶಿಕ್ಕಲಗಾರ ಅವರನ್ನು ಮಂಜುನಾಥ ಕಟ್ಟಿಮನಿ ಸೋಲಿಸಿದರು.

ಕುಸ್ತಿ ವೀಕ್ಷಣೆ:

ಕುಸ್ತಿ ಹಬ್ಬವನ್ನು ಕಣ್ತುಂಬಿಕೊಳ್ಳಲು ಬರೀ ಧಾರವಾಡ ಅಲ್ಲದೇ ಸುತ್ತಲಿನ ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿಯಿಂದಲೂ ಜನರು ಆಗಮಿಸುತ್ತಿದ್ದಾರೆ. ಕುಸ್ತಿ ಆಟದ ವಿವರಣೆಯನ್ನು ಕನ್ನಡದಲ್ಲಿಯೇ ನೀಡುತ್ತಿದ್ದು, ಸುಮಾರು ಒಂದು ಕಿಮೀ ದೂರದ ವರೆಗೂ ಆಟದ ರೋಚಕತೆಯನ್ನು ತಿಳಿದುಕೊಳ್ಳಬಹುದು.