ನೆಲಮಂಗಲ [ಜ.21]: ಚಲಿಸುತ್ತಿದ್ದ ಕಾರಿನ ಮೇಲೆ ಒಣಗಿ ನಿಂತಿದ್ದ ಬೃಹತ್‌ ಮರ ಬಿದ್ದು, ಕಾರಿನ ಚಾಲಕನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ವಿಪರ್ಯಾಸವೆಂದರೆ ಘಟನಾ ಸ್ಥಳದ ಮುಂದೆಯೇ ಕಾರಿನಲ್ಲಿ ತೆರಳಿದ ಅಡಿಷನಲ್‌ ಎಸ್ಪಿ, ಘಟನೆ ಬಗ್ಗೆ ವಿಚಾರಿಸದೆ ಇದ್ದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರಿನ ಚಾಲಕ ರಾಜಾನುಕುಂಟೆ ನಿವಾಸಿ ಆನಂದನ ತಲೆ, ಕೈ, ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳು ಆನಂದನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಂಬಂಧಪಟ್ಟಇಲಾಖೆಯ ಅ​ಧಿಕಾರಿಗಳು ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.