Asianet Suvarna News Asianet Suvarna News

ರಾಣೆಬೆನ್ನೂರಿನ ಇಸ್ಲಾಂಪುರ ಓಣಿ ಅಂಗನವಾಡಿ ಸಮಸ್ಯೆ ಪರಿಹರಿಸಿದ BIG 3

ಮಕ್ಕಳೇ ಈ ದೇಶದ ಭವಿಷ್ಯ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಅಂತ ದೊಡ್ಡ ದೊಡ್ಡ ಡೈಲಾಗ್ ಹೊಡೆಯುತ್ತಾರೆ ರಾಜಕಾರಣಿಗಳು. ಆದರೆ ಬಡವರ ಮಕ್ಕಳ ಶಿಕ್ಷಣ, ಆರೋಗ್ಯದ ಪರಿಸ್ಥಿತಿ ಮಾತ್ರ ಅಯೋಮಯ. ದುಡ್ಡಿದ್ದವರು ತಮ್ಮ ಮಕ್ಕಳನ್ನು ಹೈಕ್ಲಾಸ್ ಬೇಬಿ ಸಿಟ್ಟಿಂಗು, ಕಾನ್ವೆಂಟು ಅಂತ ಕಳಿಸ್ತಾರೆ. 

Big 3 solved haveri islampur ranebennurs anganwadi problem gvd
Author
First Published Sep 16, 2022, 9:49 PM IST

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ಸೆ.16): ಮಕ್ಕಳೇ ಈ ದೇಶದ ಭವಿಷ್ಯ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಅಂತ ದೊಡ್ಡ ದೊಡ್ಡ ಡೈಲಾಗ್ ಹೊಡೆಯುತ್ತಾರೆ ರಾಜಕಾರಣಿಗಳು. ಆದರೆ ಬಡವರ ಮಕ್ಕಳ ಶಿಕ್ಷಣ, ಆರೋಗ್ಯದ ಪರಿಸ್ಥಿತಿ ಮಾತ್ರ ಅಯೋಮಯ. ದುಡ್ಡಿದ್ದವರು ತಮ್ಮ ಮಕ್ಕಳನ್ನು ಹೈಕ್ಲಾಸ್ ಬೇಬಿ ಸಿಟ್ಟಿಂಗು, ಕಾನ್ವೆಂಟು ಅಂತ ಕಳಿಸ್ತಾರೆ. ಆದರೆ ಬಡವರ ಮಕ್ಕಳು ಮಾತ್ರ ಕೋಳಿ ಗೂಡಿನಂತ ಅಂಗನವಾಡಿಯಲ್ಲಿ ಕುಳಿತು ಒದ್ದಾಡಬೇಕು. ಮುದ್ದು ಮುಖದ ದೇವರಂತ ಮಕ್ಕಳು. ಭವ್ಯ ಭಾರತದ ಭವಿಷ್ಯ ಹೊತ್ತು ಕುಳಿತಿರೋ ನವಭಾರತದ ಕನಸಿನ ಕೂಸುಗಳು.  ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಕುಳಿತಿರೋ ದೃಶ್ಯ. 

ಆ ಕಡೆ ಈ ಕಡೆ ಹೊರಳೋಕೂ ಜಾಗ ಇಲ್ಲ. ಆರಾಮವಾಗಿ ಕೂರೋಕೆ ಆಗಲ್ಲ. ಊಟ ಮಾಡೋಕೆ ಆಗಲ್ಲ. ಅಕ್ಷರ ಕಲಿಯೋಕೂ ಆಗಲ್ಲ. ಒಂದ್ ಸಲ ನಿಮಗೂ ನೆನಪು ಬರಬಹುದು‌. ನಾವೆಲ್ಲಾ ಅಂಗನವಾಡಿಯಲ್ಲಿ ಓದಿರೋರು ಅಂತ ಬಾಲ್ಯದ ನೆನಪುಗಳು ನಿಮಗೆ ಮರುಕಳಿಸಬಹುದು. ಸರ್ಕಾರ ಲಕ್ಷಾಂತರ ಕೋಟಿ ಬಜೆಟ್ ಮಂಡಿಸುತ್ತೆ. ನಾವು ಅಷ್ಟು ಕೋಟಿ ರೂಪಾಯಿ ಕೆಲಸ ಮಾಡಿದಿವಿ. ಅಷ್ಟು ಅಭಿವೃದ್ಧಿ ಮಾಡಿದಿವಿ. ಇಷ್ಟು ಕಡೆದು ಗುಡ್ಡೆ ಹಾಕಿದಿವಿ ಅಂತ ದೊಡ್ಡ ದೊಡ್ಡದಾಗಿ ಮಾತಾಡ್ತಾನೇ ಇರ್ತಾರೆ. ಆದರೆ ಇಲ್ಲಿ ನೋಡಿ ಈ ಮಕ್ಕಳ ಒದ್ದಾಟ. ಒಂದು ಸಣ್ಣ ಕೋಣೆಯ ಈ ಅಂಗನವಾಡಿಯಲ್ಲಿ ಕೂರೋದು ಬರೋಬ್ಬರಿ 50ಕ್ಕೂ ಹೆಚ್ಚು ಮಕ್ಕಳು.

ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘಿಸುವುದರಿಂದ ಹೆಚ್ಚು ಅಪಘಾತ

ರಾಣೆಬೆನ್ನೂರಿನ ಇಸ್ಲಾಂಪುರ ವಾರ್ಡ್‌ನಲ್ಲಿರೋ ಕೊರವರ ಓಣಿಯಲ್ಲಿರೋ ಈ ಪುಟ್ಟ ಅಂಗನವಾಡಿಗೆ ಸ್ವಂತ ಸೂರೇ ಇಲ್ಲ. ರಾಜಕಾರಣಿಗಳು , ಅಧಿಕಾರಿಗಳ ಮಕ್ಕಳಿಗೆ ಬೇಬಿ ಸಿಟ್ಟಿಂಗು, ಕಾನ್ವೆಂಟ್‌ನಲ್ಲಿ ವಿಧ್ಯಾಭ್ಯಾಸ ಸಿಗುತ್ತೆ.ಆದರೆ ಬಡವರ ಮಕ್ಕಳು ಮಾಡಿದ ಪಾಪ ಏನು? ಈ ಚಿಕ್ಕ ಕೊಠಡಿಯಲ್ಲೇ ಮಕ್ಕಳಿಗೆ ಅಡುಗೆ ತಯಾರಿಸಿ ಬಡಿಸಬೇಕು. ಅಲ್ಲೇ ಪಾಠ ಮಾಡಬೇಕು‌. ಆಹಾರ ಧಾನ್ಯಗಳನ್ನೂ ಕೂಡಾ ಅಲ್ಲೇ ದಾಸ್ತಾನು ಮಾಡಿ ರಕ್ಷಿಸಿಟ್ಟುಕೊಳ್ಳಬೇಕು. ಇಲ್ಲಿ ಅಂಗನವಾಡಿಯೇ ಅಡುಗೆ ಕೋಣೆ, ಅಂಗನವಾಡಿಯೇ ದಾಸ್ತಾನು ಕೊಠಡಿ, ಅಂಗನವಾಡಿಯೇ ಬೋಧನಾ ಕೊಠಡಿ. ರಾಣೆಬೆನ್ನೂರಿನ ಇಸ್ಲಾಂಪುರ ಓಣಿಯ ಅಂಗನವಾಡಿ ಮಕ್ಕಳಿಗೆ ದಿನ ನಿತ್ಯ ಉಸಿರುಗಟ್ಟೋ ವಾತಾವರಣ ಇರುತ್ತೆ.

12 ವರ್ಷಗಳಿಂದ ಈ ಸಣ್ಣ ಕೋಳಿಗೂಡಿನಂತ ಅಂಗನವಾಡಿಯಲ್ಲೇ ಪುಟ್ಟ ಪುಟ್ಟ ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಿಸಲಾಗ್ತಿದೆ‌. 12 ವರ್ಷಗಳಿಂದ ಮಕ್ಕಳು ಒದ್ದಾಡ್ತಿದ್ರೂ ಅಂಗನವಾಡಿಗೆ ಸುಸಜ್ಜಿತ ಕಟ್ಟಡವೇ ಇಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ  ರಾಣೆಬೆನ್ನೂರು ನಗರಸಭೆಯಿಂದ ಜಾಗ ಗುರುತಿಸೋ ಕೆಲಸವೂ ಆಗಿಲ್ಲ, ಕಟ್ಟಡ ಕೂಡಾ ಕಟ್ಟೋದಾಗಿಲ್ಲ.ಕನಿಷ್ಟ ಒಂದು ಸುಸಜ್ಜಿತ ಬಾಡಿಗೆ ಕಟ್ಟಡದ ವ್ಯವಸ್ಥೆಯನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿರಲಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬಿಗ್ 3 ಟೀಂ ಅಂಗನವಾಡಿಗೆ ಕಾಲಿಟ್ಟಿತು. ಸಮಸ್ಯೆ ಕುರಿತು ವಿಸ್ತೃತ ವರದಿ ಪ್ರಸಾರವಾಗಿದ್ದೇ ತಡ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಪ್ರತಿಕ್ರಿಯಿಸಿದರು. 

ಇಸ್ಲಾಂಪುರ ಓಣಿ ಅಂಗನವಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಅಮೃತ ನಗರೋತ್ಥಾನ ಹಂತ 4 ರ ಅನುದಾನದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ರಾಣೆಬೆನ್ನೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 10 ಅಂಗನವಾಡಿಗಳ ಜೊತೆ ಇಸ್ಲಾಂಪುರ ಅಂಗನವಾಡಿ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಇಷ್ಟು ದಿನ ಜಾಗ ಗುರುತಿಸೋಕೂ ಮುಂದೆ ಬಾರದ ರಾಣೆಬೆನ್ನೂರು ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಇಂದು ಅಂಗನವಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಲ್ಲದೆ ಅಂಗನವಾಡಿ ನಿರ್ಮಾಣಕ್ಕೆ ಜಾಗ ಗುರುತಿಸಿಯೇ ಬಿಟ್ಟರು. 

Karnataka Politics: ಬಿಜೆಪಿ-ಕಾಂಗ್ರೆಸ್‌ ಸಮರ: ಅಭಿವೃದ್ಧಿ ಕಾಮಗಾರಿ ಸ್ಥಗಿತ..!

ಸ್ಲಾಂಪುರ ಅಗಸರ ಮಠದ ಹತ್ತಿರ ಉಪಯೋಗಕ್ಕೆ ಬಾರದ ಸಮುದಾಯ ಶೌಚಾಲಯ ಡೆಮಾಲಿಷ್ ಮಾಡಿ ಅಂಗನವಾಡಿ ನಿರ್ಮಾಣಗೆ ನಿರ್ಧಾರ ಮಾಡಿದರು. ಇತ್ತ ವರದಿ ಪ್ರಸಾರ ಆಗುತ್ತಲೇ ಸ್ಥಳಕ್ಕೆ ದೌಡಾಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಆಲದರ್ತಿ, ಸಿ.ಡಿ ಪಿ.ಒ ಜಯಶ್ರೀ ಪಾಟೀಲ್ ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕ ಅಂಗನವಾಡಿ ವ್ಯವಸ್ಥೆ ಮಾಡಿದ್ರು. ಮಕ್ಕಳು ಖುಷಿ ಖುಷಿಯಿಂದಲೇ ಹೊ ಎಂದು ಅಂಗನವಾಡಿಗೆ ಶಿಫ್ಟ್ ಆದರು. ಸದ್ಯ ಉಸಿರೋಗಟ್ಟೋ ವಾತಾವರಣದಲ್ಲಿದ್ದ ಮಕ್ಕಳು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

Follow Us:
Download App:
  • android
  • ios