Big 3 Impact: ಪರಿಷತ್ತಲ್ಲೂ ಪ್ರತಿಧ್ವನಿಸಿದ ಬಿಗ್‌ 3 ವರದಿ: ಯಾದಗಿರಿಯ ಪೋಸ್ಟ್‌ ಮಾರ್ಟಂ ಅವ್ಯವಸ್ಥೆಗೆ ಮುಕ್ತಿ

Big 3 Yadagiri Kembhavi Hospital Story: ತಾಲೂಕು ಆಸ್ಪತ್ರೆ ಇದ್ರೂ ಅಲ್ಲಿ ಶವಗಾರ ಇರಲಿಲ್ಲ. ರಸ್ತೆ ಬದಿಯಲ್ಲಿ ಮರೋಣತ್ತರ ಪರೀಕ್ಷೆ ನಡೆಸಲಾಗ್ತಿತ್ತು. ಈ ಬಗ್ಗೆ ಬಿಗ್3ಯಲ್ಲಿ ಫುಲ್ ರಾಂಗ್ ಆಗಿಯೇ ವರದಿ ಪ್ರಸಾರ ಮಾಡಲಾಗಿತ್ತು

Big 3 Impact Yadagiri kembhavi hospital temporary mortuary allotted mnj

ಯಾದಗಿರಿ (ಸೆ. 15): ಆ ಅಮಾನವೀಯ ಘಟನೆಗೆ  ಇಡೀ ಕರುನಾಡೇ ಆಕ್ರೋಶ ವ್ಯಕ್ತಪಡಿಸಿತ್ತು. ಬಿಗ್3ಯಲ್ಲಿ ಎಷ್ಟು ಸಾಧ್ಯವೋ ಅಷ್ಟು ತಾಖತ್ ಆಗಿಯೇ, ಧಮ್ ಆಗಿಯೇ ವರದಿಯನ್ನ ನಿರಂತರವಾಗಿ ಪ್ರಸಾರ ಮಾಡಿದ್ವಿ. ವರದಿ ಪ್ರಸಾರ ಆಗ್ತಿದ್ದಂತೆ ಎಲ್ರೂ ಎಚ್ಚೆತ್ತರು ಕೊನೆಗೆ ಆ ಸಮಸ್ಯೆ ಕ್ಲೀಯರ್ ಆಯ್ತು. ಇದು ಬಿಗ್3ಯ ಮೆಗಾ ಇಂಪ್ಯಾಕ್ಟ್.  ಯೆಸ್ ಯಾದಗಿರಿ (Yadagiri) ಜಿಲ್ಲೆ  ಸುರಪುರ ತಾಲೂಕಿನ ಕೆಂಭಾವಿ ತಾಲೂಕು ಆಸ್ಪತ್ರೆಯ ಎರಡ್ಮೂರು ಕಿ. ಮೀಟರ್ ದೂರದಲ್ಲಿಯೇ ನಿತ್ಯ ಒಂದು ಅಮಾನವೀಯ ಘಟನೆ ನಡೀತಿತ್ತು. ತಾಲೂಕು ಆಸ್ಪತ್ರೆ ಇದ್ರೂ ಅಲ್ಲಿ ಶವಗಾರ ಇರಲಿಲ್ಲ. ರಸ್ತೆ ಬದಿಯಲ್ಲಿ ಮರೋಣತ್ತರ ಪರೀಕ್ಷೆ ನಡೆಸಲಾಗ್ತಿತ್ತು. ಈ ಬಗ್ಗೆ ಬಿಗ್3ಯಲ್ಲಿ ಫುಲ್ ರಾಂಗ್ ಆಗಿಯೇ ವರದಿ ಪ್ರಸಾರ ಮಾಡಲಾಗಿತ್ತು

ವರದಿ ಪ್ರಸಾರ ಆಗ್ತಿದ್ದಂತೆ ಡಿಹೆಚ್ಓ, ಟಿಹೆಚ್ಓ ದೌಡು: ಈ ಅಮಾನವೀಯ ಘಟನೆ ಬಗ್ಗೆ ಅದಾಗಲೇ ಕರುನಾಡಿನ ಜನತೆ ಆಕ್ರೋಶ ಹೊರ ಹಾಕೋಕೆ ಶುರು ಮಾಡಿದ್ರು. ಸುದ್ದಿ ತಿಳಿದ ಡಿಹೆಚ್ಓ ಡಾ.ಗುರುರಾಜ ಹೀರೆಗೌಡರ್, ಟಿಹೆಚ್ಒ ಡಾ.ರಾಜಾ ವೆಂಕಟಪ್ಪ ನಾಯಕ್ ಆಸ್ಪತ್ರೆ ಕಡೇ ಮುಖ ಮಾಡಿದ್ರು. ವೈದ್ಯಾಧಿಕಾರಿಗಳು ಬರುತ್ತಿದ್ದಂತೆ  ಜನ ತರಾಟೆ ತೆಗೆದುಕೊಳ್ಳೋಕೆ ಶುರು ಹಚ್ಕೊಂಡಿದ್ರು.

ಬಿಗ್-3 ಬುಲೆಟ್‌ಗೆ ಅಧಿಕಾರಿಗಳಿಂದ ಜಾಗ ಪರಿಶೀಲನೆ: ಇನ್ನು ಜನರೊಂದಿಗೆ ಶವಾಗಾರದ ಸ್ಥಳ ಪರಿಶೀಲನೆ ಮಾಡೋಕೆ ಅಧಿಕಾರಿಗಳು ಮುಂದಾದ್ರು. ಕೆಂಭಾವಿ ಹೊರವಲಯದ ಸರ್ವೇ ನಂಬರ್ 512 ರಲ್ಲಿ ಶವಾಗಾರಕ್ಕಾಗಿ ಜಾಗ ಪರಿಶೀಲನೆ ನಡೆಸಿದ್ರು.100 ಬೈ 100 ಸೈಜ್ ನಲ್ಲಿ ಶವಾಗಾರ ನಿರ್ಮಾಣಕ್ಕೆ ಸೂಚನೆ ನೀಡಲಾಯ್ತು. ಸರ್ವೇ ನಂಬರ್ 4ರಲ್ಲಿ ಹಳೆ ಶವಾಗಾರ ಇತ್ತು ಹಳೆ ಶವಾಗಾರ ಕ್ಯಾನ್ಸಲ್ ಮಾಡಿ ಸರ್ವೇ 512 ರಲ್ಲಿ 100*100 ಶವಾಗರಕ್ಕೆ ಸೂಚನೆ ನೀಡಲಾಯ್ತು. ಆರ್.ಐ ಗೆ ಸರ್ವೇ ಕಾರ್ಯ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.

ಸುದ್ದಿ ನೋಡಿ ಸ್ಪಾಟಿಗೆ ದೌಡಾಯಿಸಿದ ಜಿಲ್ಲಾಧಿಕಾರಿ: ತಮ್ಮ ಜಿಲ್ಲೆಯಲ್ಲಿ ಈ ರೀತಿ ಘಟನೆ ನಡೆಯೋತ್ತಿರೋ ಸುದ್ದಿ ಗಮನಕ್ಕೆ ಬರ್ತಿದ್ದಂತೆ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಕೂಡ ದೌಡಾಯಿಸಿದ್ರು. ಪರಿಶೀಲನೆ ನಡೆಸಿ ಆದಷ್ಟು ಬೇಗ ಶವಗಾರ ನಿರ್ಮಾಣ ಆಗಲಿದೆ ಅನ್ನೋ ಭರವಸೆ ನೀಡಿದ್ರು.

BIG 3: ಹೆಸ್ರು ರಾಣಿ ವಿಕ್ಟೋರಿಯಾ ಶಾಲೆ, ಆದ್ರೆ ಕೊಟ್ಟಿಗೆಗಿಂತ ಕಡೆ!

ಸ್ಪಾಟಿಗೆ ಭೇಟಿಕೊಟ್ಟ  ಜಿಲ್ಲಾ ನ್ಯಾಯಾಧೀಶರು: ಇನ್ನು ಸುದ್ದಿ ತಿಳಿದ ಯಾದಗಿರಿ ಜಿಲ್ಲಾ ನ್ಯಾಯಧೀಶರಾದ ಸಾಹೀಲ್ ಅಹಮದ್ ಸಮುದಾಯ ತಾಲೂಕು ಆಸ್ಪತ್ರೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ರು. ನಂತರ ಈ ಹಿಂದೆ ರಸ್ತೆ ಬದಿಯಲ್ಲಿ ನಡೆಸುತ್ತಿದ್ದ ಪೋಸ್ಟ್ ಮಾರ್ಟಂ ಸ್ಥಳಕ್ಕೂ ಭೇಟಿ ನೀಡಿ ಮಾಹಿತಿ ಪಡೆದ್ರು. 

ಆಸ್ಪತ್ರೆಯ ಬೇರೆ ಕಟ್ಟಡ ಈಗ  ಶವಗಾರವಾಗಿ ಬದಲು: ನಿರಂತರ ವರದಿ ಪ್ರಸಾರ ಆಗೋದನ್ನ ಗಮನಿಸಿದ ಮೇಲಾಧಿಕಾರಿಗಳು ತಕ್ಷಣವೇ ಆಸ್ಪತ್ರೆಯ ಆವರಣದಲ್ಲಿ ಇದ್ದ ಯೋಗ ಕೇಂದ್ರವನ್ನ ಶವಗಾರವಾಗಿ ಮಾಡಿದ್ದಾರೆ. ಈಗಾಗಲೇ ಈ ಶವಗಾರ ಕಾರ್ಯನಿರ್ವಹಿಸುತ್ತಿದೆ.   ಒಟ್ಟಿನಲ್ಲಿ ಬಿಗ್3 ಯಾವತ್ತು ಯಾರನ್ನು ಟಾರ್ಗೆಟ್ ಮಾಡಲ್ಲ. ಸಮಸ್ಯೆಗಳೇ ಬಿಗ್3ಯ ಮೈನ್ ಟಾರ್ಗೆಟ್. ಶವಗಾರದ ಸಮಸ್ಯೆ ಬಗೆ ಹರಿಸಿದ ಎಲ್ರಿಗೂ ಬಿಗ್.. ಬಿಗ್.. ಹ್ಯಾಟ್ಸಾಫ್...

Latest Videos
Follow Us:
Download App:
  • android
  • ios