BIG 3: ಹೆಸ್ರು ರಾಣಿ ವಿಕ್ಟೋರಿಯಾ ಶಾಲೆ, ಆದ್ರೆ ಕೊಟ್ಟಿಗೆಗಿಂತ ಕಡೆ!

Big 3 Vijayapura School Story: ಈ ಶಾಲೆ ನಿರ್ಮಾಣವಾಗಿ 100 ವರ್ಷಗಳೇ ಕಳೆದು ಹೋಗಿದೆ. ಶಾಲೆಯ ಆವರಣದಲ್ಲಿರುವ LKG,UKG ಮಕ್ಕಳು ಓದುವ ಕೊಠಡಿಗಳು ಹದಗೆಟ್ಟು ಹಳ್ಳ ಹಿಡಿದಿದೆ

Big 3 Bad Condition of School in Vijayapura mnj

ವಿಜಯಪುರ (ಸೆ. 14): ಈ ಶಾಲೆಯಲ್ಲಿ ಮಕ್ಕಳನ್ನ ಓದಿಸೋಕೆ ಗಟ್ಟಿ ಗುಂಡಿಗೆ ಇರಬೇಕು. ಇಲ್ಲ ಶಿಕ್ಷಕರು ಪ್ರತೀ ಕ್ಷಣವೂ ಮಕ್ಕಳ ಮೇಲೆ ನಿಗಾ ಇಡಬೇಕು. ಚೂರು ಯಾಮಾರಿದ್ರೂ ಯಮ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡೋದಂತೂ ಪಕ್ಕಾ. ಯೆಸ್! ನಿಜಕ್ಕೂ ಈ ಶಾಲೆಯಲ್ಲಿ ಮಕ್ಕಳನ್ನ ಓದಿಸೋಕೆ ಗಟ್ಟಿ ಗುಂಡಿಗೆ ಬೇಕು. ಕಲಿಬೇಕಾದ್ರೆ ಕರೆಂಟ್‌ ಹೊಡೆಸಿಕೊಳ್ಬೇಕು. ಮಳೆಯಲ್ಲಿ ಪುಸ್ತಕ, ಬಟ್ಟೆ ತೋಯಿಸಿಕೊಂಡು ಪಾಠ ಕೇಳ್ಬೇಕು. ಅದ್ಯಾವಾಗ ನಮ್ಮ ಮಕ್ಕಳ ಮೇಲೆ ಕುಸಿದು ಬೀಳುತ್ತೋ ಅನ್ನೋ ಆತಂಕ ಪೋಷಕರದ್ದು. ದನಗಳನ್ನು ಕೂಡ ಇಂತ ಕೋಣೆಯಲ್ಲಿ ಕ ಟ್ಟೋದಕ್ಕೆ ಭಯ ಪಡುವ ಇಂತಹ ಜಾಗದಲ್ಲಿ ಏನು ಅರಿಯದ ಈ ಪುಟ್ಟ ಮಕ್ಕಳು ಭಯಯದಲ್ಲೇ ಪಾಠ ಕೇಳೋ ಸ್ಥಿತಿ ನಿರ್ಮಾಣವಾಗಿದೆ.

ಶತಮಾನ ಪೂರೈಸಿದ ಶಾಲೆ: ಅಷ್ಟಕ್ಕೂ ಈ ದೃಶ್ಯ ಕಂಡು ಬಂದದ್ದು ವಿಜಯಪುರ (Vijayapura) ನಗರದ ಗಾಂಧಿ ವೃತ್ತದ ಬಳಿ ಇರುವ ಶತಮಾನ ಪೂರೈಸಿದ ರಾಣಿ ವಿಕ್ಟೋರಿಯಾ ಸರ್ಕಾರಿ ಶಾಲೆಯಲ್ಲಿ. ಈ ಶಾಲೆ ನಿರ್ಮಾಣವಾಗಿ 100 ವರ್ಷಗಳೇ ಕಳೆದು ಹೋಗಿದೆ. ಶಾಲೆಯ ಆವರಣದಲ್ಲಿರುವ LKG,UKG ಮಕ್ಕಳು ಓದುವ ಕೊಠಡಿಗಳು (Class Rooms) ಹದಗೆಟ್ಟು ಹಳ್ಳ ಹಿಡಿದಿದೆ. ಮಳೆಯಾದ್ರೆ ಛಾವಣಿ ಸೋರೋದಕ್ಕೆ ಶುರುವಾಗುತ್ತೆ. ಇತ್ತ ಛಾಣಿಯಿಂದ ನೀರು ಕ್ಲಾಸ್‌ ರೂಂನಲ್ಲಿ ಬೀಳುತ್ತೆ. ಮಕ್ಕಳ ಬುಕ್ಸ್‌, ಬ್ಯಾಗ್ಗಳ ಮೇಲು ಮಳೆ ನೀರು ಬೀಳ್ತಿದೆ. ಮಳೆ ಬಂದ್ರೆ ಸಾಕು ಮಕ್ಕಳು ಕಣ್ಣೀರು ಹಾಕ್ತಾ ಮನೆಗೆ ಹೋಗೋಕೆ ಹಠ ಮಾಡುತ್ತವೆ.

ಇನ್ನು ನಿರಂತರ ಮಳೆಯಿಂದ ಗೋಡೆಗಳಲ್ಲಿ ನೀರು ಸೇರಿ ಬೀಳುವ ಸ್ಥಿತಿಯಲ್ಲಿದೆ. ಗೋಡೆಯ ಮೇಲಿನ ಮಣ್ಣು ಉದುರಿ ಹೋಗಿದ್ದು, ಯಾವಾಗ ಮಕ್ಕಳ ಮೇಲೆ ಬೀಳುತ್ತೋ ಆತಂಕ ಶುರುವಾಗಿದೆ. ಇಂತಹ ದುಸ್ಥಿತಿಯಲ್ಲಿರೋ ಶಾಲೆಗೆ ಮಕ್ಕಳನ್ನ ಕಳಿಸೋದಕ್ಕೆ ಭಯವಾಗ್ತಿದೆ ಎಂದು ಕಣ್ಣಿರು ಹಾಕ್ತಿದ್ದಾರೆ ಪೋಷಕರು. 

ಪೋಷಕರಿಗೆ ಆತಂಕ: ಮೊದಲೇ ಬೀಳುವ ಸ್ಥಿತಿಯಲ್ಲಿರೋ ಶಾಲೆಯಲ್ಲಿ ಹಳೆ ಕಾಲದ ವೈರಿಂಗ್‌ ವ್ಯವಸ್ಥೆಯಿದೆ. ಅಲ್ಲಲ್ಲಿ ವೈರ್‌ಗಳು ಕಟ್‌ ಆಗಿವೆ. ಮಳೆ ಬಂದ್ರೆ ಮೇಲ್ಚಾವಣಿಗೆ ಬಿದ್ದಿರೋ ರಂಧ್ರಗಳ ಮೂಲಕ ನೀರು ವೈರಿಂಗ್‌ ಇರೋ ಜಾಗದಲ್ಲಿ ಇಳಿಯುತ್ತೆ. ನೀರಲ್ಲಿ ನೆನೆದ ಗೋಡೆಗಳಲ್ಲಿ ಕರೆಂಟ್‌ ಪಾಸಾಗ್ತಿದೆಯಂತೆ. ಗೋಡೆಯನ್ನ ಮುಟ್ಟಿದ್ರೆ ಸಾಕು ಮಕ್ಕಳಿಗೆ ಜುಮ್‌ ಎನ್ನುವ ಅನುಭವ ಆತಂಕ. 

BIG 3: GIMS ಆಸ್ಪತ್ರೆ ಅಂಗಳದಲ್ಲಿ ಡ್ರೈನೇಜ್ ನೀರು: ಕೇಳುವವರಾರು ರೋಗಿಗಳ ಗೋಳು?

ಹೀಗಾಗಿ ಮಕ್ಕಳು ಗೋಡೆಯನ್ನ ಟಚ್‌ ಮಾಡೋಕ್ಕು ಹೆದರುತ್ತಿದ್ದಾರೆ. ಶಾಲೆಗೆ ಬರೋಕೆ ಭಯ ಹಿಂದೇಟು ಹಾಕ್ತಿದ್ದಾರೆ. ಮಕ್ಕಳನ್ನ ಶಾಲೆಗೆ ಕಳಿಸಿದ ಪೋಷಕರು ಕೂಡ ಗಾಬರಿಗೊಂಡಿದ್ದಾರೆ. ತಮ್ಮ ಮಕ್ಕಳ ದಯನೀಯ ಸ್ಥಿತಿ ಕಂಡು ಆಕ್ರೋಶ ಹೊರಹಾಕ್ತಿದ್ದಾರೆ. 

ಜಿಲ್ಲಾಧಿಕಾರಿಗಳಿಗೆ ಮನವಿ: ಇನ್ನೂ ಶಾಲೆಯಲ್ಲಿ ಮಕ್ಕಳು ಕುಳಿತಾಗ ಮಳೆ ಬಂದ್ರೆ ಕ್ಷಣ ಕ್ಷಣಕ್ಕೂ ಮಕ್ಕಳು, ಶಿಕ್ಷಕರಲ್ಲಿ ಆತಂಕ ಶುರುವಾಗುತ್ತೆ. ಇತ್ತ ಮನೆಯಲ್ಲಿರೋ ಪೋಷಕರಲ್ಲೂ ಭಯ ಆವರಿಸಿ ಬಿಡುತ್ತೆ. ಇಂಥ ಆತಂಕದಲ್ಲಿ ಮಕ್ಕಳು ಶಾಲೆಗಳಲ್ಲಿ ಹೇಗೆ ಕಲಿಯುತ್ತಾರೆ ಅನ್ನೋದೆ ಪ್ರಶ್ನೆಯಾಗಿದೆ. ಮಕ್ಕಳೆಲ್ಲಾ ಜಿಲ್ಲಾಧಿಕಾರಿಗಳಿಗೆ ಕೈಮುಗಿದು ಪಾರ್ಥನೆ ಮಾಡಿಕೊಳ್ತಿದ್ದಾರೆ. ದಯವಿಟ್ಟು ನಮ್ಮ ಶಾಲೆ ಸರಿ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಬೇರೆ ಕಡೆಗಳಲ್ಲಿ ಮಕ್ಕಳು ಶಾಲೆಗೆ ಹೋದ್ರೆ ಪೋಷಕರು ನಿಶ್ಚಿಂತೆಯಿಂದ ಇರ್ತಾರೆ. ಆದ್ರೆ ವಿಜಯಪುರದ ಈ ಸರ್ಕಾರಿ ಶಾಲೆಗೆ ಮಕ್ಕಳನ್ನ ಕಳುಹಿಸೋ ಪೋಷಕರು ಯಾವಾಗ ಏನಾಗುತ್ತೋ ಅನ್ನೋ ಭಯದಲ್ಲೆ ಇರಬೇಕಾಗಿದೆ. ಮಕ್ಕಳಿಗೆ ಬಂದಿರೋ ಈ ಸಂಕಷ್ಟ, ಪೋಷಕರ ಸಂಕಟವನ್ನ ದೂರ ಮಾಡುವ ಜವಾಬ್ದಾರಿ ಈಗ ಶಿಕ್ಷಣ ಇಲಾಖೆ ಮೇಲಿದೆ. 

Latest Videos
Follow Us:
Download App:
  • android
  • ios