ಪಂಜಾಬ್ ಗಡಿಯಲ್ಲಿ ಉಗ್ರ ದಾಳಿ : ಬೀದರ್ ಯೋಧ ಹುತಾತ್ಮ

  • ಪಂಜಾಬ್ ಗಡಿಯಲ್ಲಿ ಮಂಗಳವಾರ ನಡೆದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿ.
  • ಬೀದರ್ ಜಿಲ್ಲೆಯ ಬಿಎಸ್ಎಫ್ ಯೋಧ ಹುತಾತ್ಮ
  • 2013ರಲ್ಲಿ ಭಾರತೀಯ ಸೇನೆ ಸೇರಿದ್ದ ಯೋಧ ಬಸವರಾಜ 
Bidar BSF Soldier martyred during gunfight with terrorists in Punjab snr

ಬೀದರ್ (ಜು.07):  ಪಂಜಾಬ್ ಗಡಿಯಲ್ಲಿ ಮಂಗಳವಾರ ನಡೆದ ಉಗ್ರರೊಂದಿಗಿನ ಗುಂಡಿನ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ.

ಬೀದರ್ ಜಿಲ್ಲೆ ಔರಾದ ತಾಲೂಕಿನ ಆಲೂರ(ಬಿ) ಗ್ರಾಮದ ಬಸವರಾಜ ಗಣಪತಿ (31) ಗುಂಡಿನ ಚಕಮಕಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ. ಮಂಗಳವಾರ ಸಂಜೆ 6ರ ಸುಮಾರಿಗೆ ಸೇನಾಧಿಕಾರಿಗಳು ಬಸವರಾಜ ಅವರ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊಪ್ಪಳ : ಸೇನೆಯಿಂದ ನಿವೃತ್ತಿ ಆಗಿ ಬಂದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ

2013ರಲ್ಲಿ ಭಾರತೀಯ ಸೇನೆ ಸೇರಿದ್ದ ಬಸವರಾಜ ಇಂದೋರ್‌ನಲ್ಲಿ ತರಬೇತಿಯನ್ನು ಪಡೆದು ನಂತರ‌ ಕಲ್ಕತ್ತಾ ಮತ್ತು ತ್ರಿಪುರಾದಲ್ಲಿ ಸೇವೆ ಸಲ್ಲಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ಪಂಜಾಬ್ ಗಡಿಗೆ ನಿಯುಕ್ತಿಗೊಂಡಿದ್ದರು.ಗ್ರಾಮಕ್ಕೆ ಪಾರ್ಥಿವ ಶರೀರ ತರುವ ಬಗ್ಗೆ ಇನ್ನೂ ಸೇನೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಯೋಧ ಬಸವರಾಜ್ ಕುಟುಂಬದ ಮೂಲಗಳು ತಿಳಿಸಿವೆ. ಹುತಾತ್ಮ ಯೋಧ ಬಸವರಾಜ ಅವರಿಗೆ ಐದು ವರ್ಷಗಳ ಹಿಂದೆ ಮಂಜುಳಾ ಅವರೊಂದಿಗೆ ಮದುವೆಯಾಗಿತ್ತು. ಇನ್ನು ಅವರ ಇಬ್ಬರು ಸಹೋದರರು‌ ಗ್ರಾಮದಲ್ಲಿ ಕೃಷಿ ಕಜಾರ್ಯಗಳನ್ನು ಮಾಡಿಕೊಂಡಿದ್ದಾರೆ.

ಚೌಹಾಣ್ ಟ್ವೀಟ್
CRPFನಲ್ಲಿ ಸೇವೆ ಸಲ್ಲಿಸುತ್ತಿದ್ದ ಔರಾದ ತಾಲೂಕಿನ ಆಲೂರ.ಬಿ ಗ್ರಾಮದ ಬಸವರಾಜ ಗಣಪತಿ ಅವರು ದೇಶದ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ, ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಜೌಹಾಣ್ ಅವರು ಟ್ವೀಟ್ ಮಾಡಿದ್ದಾರೆ. 
 

;

 

Latest Videos
Follow Us:
Download App:
  • android
  • ios