ಬೀದರ್‌[ಜೂ.08]: ಅಮೆರಿಕದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ತಂದೆ, ಮಗು ಸಾವಿಗೀಡಾಗಿದ್ದು, ತಾಯಿ ಸ್ಥಿತಿ ಗಂಭೀರವಾಗಿದೆ.

ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದ ಮುಖೇಶ ಶಿವಾಜಿವಾರ ದೇಶಮುಖ (27) ಹಾಗೂ ಅವರ 2 ವರ್ಷದ ಮಗು ದಿವಿಜಾ ಸಾವಿಗೀಡಾದವರು. ಮುಖೇಶ್‌ ಪತ್ನಿ ಮೋನಿಕಾ ದೇಶಮುಖ(22) ಗಂಭೀರ ಗಾಯಗೊಂಡಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ದಂಪತಿಗಳು ಕಾರಿನಲ್ಲಿ ಹೋಗುತ್ತಿರುವಾಗ ಅಮೆರಿಕಾದ ಕೋಲಂಬಸ್‌ ಕೌಂಟಿ ಪ್ರದೇಶದ ಉತ್ತರ ಕೆರೊಲಿನಾ ಹೈವೇಯಲ್ಲಿ ಗ್ಯಾಸ್‌ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಕಾರು ನಜ್ಜುಗುಜ್ಜಾಗಿದ್ದು, ಗಾಯಾಳು ಮೋನಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.