Asianet Suvarna News Asianet Suvarna News

ಬೀದರ್ ಮತ್ತು ಚಿಕ್ಕಮಗಳೂರು ಕಾಡುತ್ತಿರುವ ಭೀಕರ ಬರ, ಹನಿ ನೀರಿಗೂ ತಾತ್ವಾರ

ಬರ ಭೀಕರ,, ಹೌದು ಬೇಸಿಗೆಯ ಕಾವು ಏರುತ್ತಿದ್ದಂತೆ ಹನಿ ನೀರಿಗೂ ಪರದಾಟ ನಡೆಸಲೇಬೇಕಿದೆ. ಮೂವರು ಸಚಿವರನ್ನು ಹೊಂದಿರುವ ಬೀದರ್ ಜಿಲ್ಲೆಯ ಜಲಕ್ಷಾಮ ನೋಡಿದರೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ.

Bidar and Chikkamagaluru Drought situation Severe
Author
Bengaluru, First Published May 1, 2019, 9:45 PM IST

ಬೀದರ್/ಚಿಕ್ಕಮಗಳೂರು[ಮೇ. 01] ಚುನಾವಣೆ ಭರಾಟೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಹಿತವನ್ನು ಮರೆತೇ ಹೋಗಿದ್ದಾರೆ. ಮತ ಕೇಳುವವರಿಗೆ ನೀರಿನ ಸಮಸ್ಯೆ ಮಾತ್ರ ಗೊತ್ತೆ ಆಗಿಲ್ಲ. ರಾಜ್ಯ ಸರಕಾರ ಬೀದರ್ ಜಿಲ್ಲೆಯನ್ನು ಬರ ಪೀಡಿತ ಎಂದು ಹೇಳಿದ್ದನ್ನು ಬಿಟ್ಟರೆ ಇನ್ನೇನನ್ನೂ ಮಾಡಿಲ್ಲ.

ರಣ ಬಿಸಿಲಿಗೆ ಜಲ ಮೂಲ ಮಾಯವಾಗಿದೆ. 42 ಡಿಗ್ರಿ ಬಿಸಿಲು ಒಂದು ಕಡೆ ಸುಡುತ್ತಿದ್ದರೆ  ಜನರಿಗೆ ದಿನ ದೂಡುವುದೇ ದೊಡ್ಡ ಕಾಯಕವಾಗಿದೆ. ಮಲೆನಾಡು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯ ಸ್ಥಿತಿಯೂ ಭಿನ್ನವಾಗಿಲ್ಲ. ನಲ್ಲಿ ಮುಂದೆ ಸಾಲು ಹಚ್ಚಿ ನೀರಿಗಾಗಿ ಪರಿತಪಿಸುವ ಜನರ ನೋವು ಮಾತ್ರ ಎಂದು ಮಾಯವಾಗುವುದೋ!

"

 

"

Follow Us:
Download App:
  • android
  • ios