ರಾಮ​ನ​ಗ​ರ ಕ್ಷೇತ್ರ​ದ​ಲ್ಲೀಗ ಗುದ್ದಲಿಪೂಜೆಗೆ ಪೈಪೋಟಿ: ಒಂದೇ ಕಾಮ​ಗಾ​ರಿಗೆ 3 ಬಾರಿ ಭೂಮಿಪೂಜೆ!

ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ನಡುವೆ ರಾಜ​ಕೀಯ ಗುದ್ದಾಟ ಜೋರಾ​ಗಿದ್ದು, ಇದೀಗ ಒಂದೇ ಕಾಮ​ಗಾ​ರಿಗಳಿಗೆ ಮೂರು ಬಾರಿ ಭೂಮಿ ಪೂಜೆ ನೆರ​ವೇ​ರುತ್ತಿ​ದೆ. 

Bhumi Pooja 3 Times for the Same Work at Ramanagara Constituency gvd

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜ.28): ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ನಡುವೆ ರಾಜ​ಕೀಯ ಗುದ್ದಾಟ ಜೋರಾ​ಗಿದ್ದು, ಇದೀಗ ಒಂದೇ ಕಾಮ​ಗಾ​ರಿಗಳಿಗೆ ಮೂರು ಬಾರಿ ಭೂಮಿ ಪೂಜೆ ನೆರ​ವೇ​ರುತ್ತಿ​ದೆ. ಇಲ್ಲಿ​ವ​ರೆಗೆ ಸದ್ದಿ​ಲ್ಲದೇ ನಡೆ​ಯು​ತ್ತಿದ್ದ ಅಭಿ​ವೃದ್ಧಿ ಕಾಮಗಾ​ರಿ​ಗಳ ಭೂಮಿಪೂಜೆ ಕಾರ್ಯವು ವಿಧಾ​ನ​ಸಭಾ ಚುನಾ​ವಣೆ ಸನಿ​ಹ​ದ​ಲ್ಲಿ​ರುವ ಕಾರಣ ಪ್ರತಿಷ್ಠೆಯ ವಿಷ​ಯ​ವಾಗಿ ಮಾರ್ಪ​ಟ್ಟಿದೆ. ಹೀಗಾಗಿ ಮೂರು ಪಕ್ಷ​ಗಳ ಚುನಾಯಿತ ಪ್ರತಿ​ನಿ​ಧಿ​ಗಳು ಪೈಪೋ​ಟಿಗೆ ಬಿದ್ದ​ವ​ರಂತೆ ಒಂದೇ ಕಾಮ​ಗಾ​ರಿಗೆ ಮೂರು ಮೂರು ಬಾರಿ ಗುದ್ದ​ಲಿಪೂಜೆ ಮಾಡು​ತ್ತಿ​ದ್ದಾ​ರೆ. ಭೂಮಿ ಪೂಜೆ ಮೂಲಕ ಚುನಾ​ವಣಾ ಪೂರ್ವ​ದ​ಲ್ಲಿ ಶಕ್ತಿ ಪ್ರದ​ರ್ಶ​ನದ ಜೊತೆಗೆ ಅಭಿ​ವೃದ್ಧಿ ಹೆಸ​ರಿ​ನಲ್ಲಿ ಮತ ಸೆಳೆ​ಯಲು ಮುಂದಾ​ಗು​ತ್ತಿ​ದ್ದಾ​ರೆ. ರಾಮ​ನ​ಗರ ನಗ​ರ​ಸಭಾ ವ್ಯಾಪ್ತಿಯ ವಾರ್ಡು​ಗ​ಳಲ್ಲಿ ಒಂದೇ ಕಾಮ​ಗಾ​ರಿಗೆ ಎರಡು - ಮೂರು ಬಾರಿ ಜನ​ಪ್ರ​ತಿ​ನಿ​ಧಿ​ಗ​ಳಿಂದ ಭೂಮಿ ಪೂಜೆ ನೆರ​ವೇ​ರು​ತ್ತಿ​ದೆ.

ಸಚಿ​ವ​ರಿಂದ ಶಂಕು​ಸ್ಥಾ​ಪ​ನೆ: ಕಳೆದ ಡಿಸೆಂಬರ್‌ 16ರಂದು ಬಿಡದಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಕ್ರೀಡಾಂಗಣದ (ತಿಮ್ಮಪ್ಪನ ಕಟ್ಟೆ) ಮೈದಾನದಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯ​ಣ​ ಹಾಗೂ ಪೌರಾ​ಡ​ಳಿತ ಸಚಿವ ಎಂಟಿ​ಬಿ ನಾ​ಗ​ರಾಜು 125 ಕೋಟಿ ರುಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮ​ಗಾ​ರಿ​ಗ​ಳಿಗೆ ಶಂಕುಸ್ಥಾಪನೆ ನೆರ​ವೇ​ರಿ​ಸಿ​ದ್ದರು. ರಾಮ​ನ​ಗರ ನಗ​ರ​ಸಭೆ ವ್ಯಾಪ್ತಿಯ ನಗರೋತ್ಥಾನ ಸೇರಿದಂತೆ ಜಿಲ್ಲೆಯ 6 ಸ್ಥಳೀಯ ಸಂಸ್ತೆ​ಗಳ ವ್ಯಾಪ್ತಿ​ಯಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ಜೊತೆಗೆ ಹಲವು ಇಲಾ​ಖೆ​ಗಳಿಂದ ಅನು​ಷ್ಠಾ​ನ​ಗೊ​ಳ್ಳ​ಲಿ​ರುವ ವಿವಿಧ ಕಾಮ​ಗಾ​ರಿ​ಗ​ಳಿಗೆ ಚಾಲನೆ ನೀಡಿದ್ದರು. ಈ ಕಾರ್ಯ​ಕ್ರ​ಮ​ಕ್ಕೆ ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ ಅವ​ರನ್ನು ಹೊರತು ಪಡಿಸಿ ಶಾಸ​ಕ​ರಾದ ಕುಮಾ​ರ​ಸ್ವಾಮಿ, ಡಿ.ಕೆ.​ಶಿ​ವ​ಕು​ಮಾರ್‌, ಅನಿತಾ ಕುಮಾ​ರ​ಸ್ವಾಮಿ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಅವ​ರೆಲ್ಲರು ಗೈರಾ​ಗಿ​ದ್ದ​ರು.

ನಿವೃತ್ತ ಸರ್ಕಾರಿ ನೌಕರರೇ ಇವರ ಟಾರ್ಗೆಟ್: ಪಂಚವಟಿ ಮಲ್ಟಿಸ್ಟೇಟ್ ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ ವಂಚನೆ

ಶಾಸ​ಕಿ​ಯಿಂದ ಭೂಮಿಪೂಜೆ: ಜಿಲ್ಲಾ ಸಚಿ​ವರು ಶಂಕು​ಸ್ಥಾ​ಪನೆ ನೆರ​ವೇ​ರಿ​ಸಿದ್ದ ಕಾಮ​ಗಾ​ರಿ​ಗ​ಳಿಗೆ ಡಿಸೆಂಬರ್‌ 19ರಂದು ರಾಮ​ನಗರ ನಗ​ರ​ಸಭೆ ವ್ಯಾಪ್ತಿಯ ವಿವಿಧ ವಾರ್ಡ್‌​ಗ​ಳಲ್ಲಿ ಜೆಡಿ​ಎಸ್‌ ಶಾಸಕಿ ಅನಿತಾಕುಮಾ​ರ​ಸ್ವಾಮಿ​ ಮತ್ತೆ ಭೂಮಿಪೂಜೆ ನೆರ​ವೇ​ರಿ​ಸಿ​ದರು. ಸ್ಥಳೀಯ ​ಚು​ನಾ​ಯಿತ ಪ್ರತಿ​ನಿ​ಧಿ​ಗ​ಳಿಗೆ ಆಹ್ವಾನ ನೀಡದೆ ಏಕಾ​ಏಕಿ ಕಾರ್ಯ​ಕ್ರಮ ಆಯೋ​ಜನೆ ಮಾಡಿದ ಶಾಸ​ಕರ ವಿರುದ್ಧ ನಗ​ರ​ಸಭೆ ಕಾಂಗ್ರೆಸ್‌ ಸದ​ಸ್ಯರು ಪ್ರತಿ​ಭ​ಟ​ನೆಗೂ ಸನ್ನ​ದ್ಧ​ರಾ​ಗಿ​ದ್ದರು.

ಮಳೆಯಿಂದಾಗಿ ನಗರ ವ್ಯಾಪ್ತಿಯ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿತ್ತು. ಸೇತುವೆಗಳು ಕೊಚ್ಚಿ ಹೋಗಿದ್ದವು. ಇಂತಹ ಸಂಕಷ್ಟಪರಿ​ಸ್ಥಿ​ತಿ​ಯಲ್ಲಿ ಕಾಂಗ್ರೆಸ್‌ ಮುಖಂಡರು ಜೀವದ ಹಂಗು ತೊರೆದು ಜನರ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಆದರೆ, ಕಾಮಗಾರಿಗೆ ಪೂಜೆ ನೆರ​ವೇ​ರಿ​ಸುವ ವೇಳೆ ಸ್ಥಳೀಯ ಸದಸ್ಯರನ್ನು ಆಹ್ವಾನಿಸಿಲ್ಲ ಏಕೆಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದ ಕಾಂಗ್ರೆಸ್‌ ಸದ​ಸ್ಯರ, ನಗ​ರದ ಅಭಿವೃದ್ಧಿಗಾಗಿ ನಾವು ಕೈಜೋ​ಡಿ​ಸು​ತ್ತೇವೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಶಾಸಕರ ಮೇಲಿದೆ ಎಂದು ಹೇಳಿ​ದ್ದರು.

ಕಾಂಗ್ರೆಸ್‌ ಸದ​ಸ್ಯ​ರಿಂದ ಗುದ್ದಲಿಪೂಜೆ: ಈಗ ಸಚಿ​ವರು ಹಾಗೂ ಶಾಸ​ಕ​ರಿಂದ ಚಾಲನೆ ದೊರೆ​ತಿ​ರುವ ಕಾಮ​ಗಾ​ರಿ​ಗ​ಳಿಗೆ ನಗ​ರ​ಸಭೆ ಕಾಂಗ್ರೆಸ್‌ ಸದ​ಸ್ಯರು ವಾರ್ಡ್‌ವಾರು ಗುದ್ದಲಿಪೂಜೆ ಮುಂದು​ವ​ರೆ​ಸಿ​ದ್ದಾರೆ. ಕಳೆದ ಎರಡು ವಾರ​ಗ​ಳಿಂದ 5 ಮತ್ತು 6ನೇ ವಾರ್ಡಿ​ನಲ್ಲಿ ನಗ​ರ​ಸಭೆ ಅಧ್ಯ​ಕ್ಷರು ಮತ್ತು ಸದ​ಸ್ಯರು ಪಕ್ಷದ ಮುಖಂಡರೊಂದಿಗೆ ಸೇರಿ ಕಾಮ​ಗಾ​ರಿ​ಗ​ಳಿಗೆ ಮತ್ತೆ ಪೂಜೆ ಮುಗಿ​ಸಿ​ದ್ದಾ​ರೆ. ವಿಧಾ​ನ​ಸಭಾ ಚುನಾ​ವಣೆ ಸನಿ​ಹ​ದ​ಲ್ಲಿ​ರುವ ಕಾರಣ ಮತ ಬ್ಯಾಂಕ್‌ ಅನ್ನು ಗಟ್ಟಿಮಾಡಿ​ಕೊ​​ಳ್ಳಲು ಜೆಡಿ​ಎಸ್‌ ಶಾಸಕರು ಹಾಗೂ ನಗ​ರ​ಸಭೆ ಕಾಂಗ್ರೆಸ್‌ ಸದ​ಸ್ಯರು ಜಿದ್ದಿಗೆ ಬಿದ್ದ​ವ​ರಂತೆ ಕಂಡು ಬರು​ತ್ತಿ​ದೆ.

ಪ್ರಧಾನಿ ಮೋದಿ ಜನಪರ ಬದ್ಧತೆಯ ನಾಯಕ: ಶಾಸಕ ಮಹೇಶ್‌

ಬಿಡದಿಯಲ್ಲಿ ನಡೆದ ಸರ್ಕಾರಿ ಕಾರ್ಯ​ಕ್ರ​ಮ​ದಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯ​ಣ​ರ​ವರು ಅಭಿ​ವೃದ್ಧಿ ಕಾಮ​ಗಾ​ರಿಗೆ ಶಂಕು​ಸ್ಥಾಪನೆ ನೆರ​ವೇ​ರಿ​ಸಿ​ದ್ದರು. ಆ ಕಾರ್ಯ​ಕ್ರ​ಮ​ದಲ್ಲಿ ಪಾಲ್ಗೊ​ಳ್ಳಲು ಸಾಧ್ಯ​ವಾ​ಗಿ​ರ​ಲಿಲ್ಲ. ಶಾಸ​ಕರು ಸ್ಥಳೀ​ಯ ಸದ​ಸ್ಯ​ರನ್ನು ಆಹ್ವಾ​ನಿ​ಸದೆ ಕಾಮ​ಗಾ​ರಿಗೆ ಚಾಲನೆ ನೀಡಿ ಹೋಗಿ​ದ್ದಾರೆ. ಹಾಗಾಗಿ ವಾರ್ಡ್‌ಗಳಲ್ಲಿ ಪೂಜೆ ಮಾಡುತ್ತಿದ್ದೇವೆ.
-ಕೆ.ಶೇಷಾದ್ರಿ, ಸದ​ಸ್ಯರು, ನಗ​ರ​ಸಭೆ, ರಾಮ​ನ​ಗರ.

Latest Videos
Follow Us:
Download App:
  • android
  • ios