ಭುಯ್ಯಾರ ಬ್ಯಾರೇಜ್‌ಗೆ ತಡೆಗೋಡೆಯೆ ಇಲ್ಲ; ಸುಗಮ ಸಂಚಾರಕ್ಕೆ ಸಂಚಕಾರ!
ತಾಲೂಕಿನ ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿ ಭುಯ್ಯಾರ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ನ ತಡೆಗೋಡೆಗಳು ಅಲ್ಲಲ್ಲಿ ಒಡೆದು ಕಿತ್ತು ಹೋಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
ಅಫಜಲ್ಪುರ (ಜೂ.5) ತಾಲೂಕಿನ ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿ ಭುಯ್ಯಾರ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ನ ತಡೆಗೋಡೆಗಳು ಅಲ್ಲಲ್ಲಿ ಒಡೆದು ಕಿತ್ತು ಹೋಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ಪ್ರತಿ ದಿನ ಸಾವಿರಾರು ವಾಹನಗಳು ಈ ಬ್ಯಾರೇಜ್ ಮೇಲೆ ಸಂಚರಿಸುತ್ತವೆ. ಬ್ಯಾರೇಜ್ ಮೇಲೆ ಪ್ರಯಾಣಿಸುವ ವಾಹನ ಸವಾರರು ತಮ್ಮ ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿಯಿದೆ.
ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪಕ್ಕದ ಇಂಡಿ ತಾಲೂಕಿನ ಖೇಡಗಿ ರೋಡಗಿ ಆಲಮೇಲ ಸಿಂದಗಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆಯಂದು ದೇವಿ ದರ್ಶನಕ್ಕೆ ಬರುತ್ತಾರೆ.
ಕಲಬುರಗಿ: ಸುಲಿಗೆ ಪ್ರಕರಣ, ಬಾಲಕ ಸೇರಿ ಮೂವರ ಬಂಧನ
ಮಣ್ಣೂರ ಗ್ರಾಮದಿಂದ ಇಂಡಿಗೆ ಹೋಗಲು ಅತ್ಯಂತ ಸರಳ ಕಡಿಮೆ ಸಮಯದಲ್ಲಿ ತಲುಪುವ ರಸ್ತೆ ಇದಾಗಿದ್ದು, ಅಮಾವಾಸ್ಯೆ ಹುಣ್ಣಿಮೆ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಮೇಲೆ ವಾಹನ ದಟ್ಟಣೆ ಹೆಚ್ಚಾಗಿ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ದೊಡ್ಡ ವಾಹನ ಎದುರಿಗೆ ಬಂದರೆ ಇನ್ನೊಂದು ವಾಹನ ಬ್ಯಾರೇಜ್ ಮೇಲೆ ಸಂಚರಿಸಬೇಕಾದರೆ ತುಂಬಾ ಅಪಾಯದ ಪರಿಸ್ಥಿತಿಯಿದೆ.
ಮಣ್ಣೂರದಿಂದ ಭುಯ್ಯಾರ ಬ್ಯಾರೇಜ್ ವರೆಗೆ ಇರುವ ಡಾಂಬರ್ ರಸ್ತೆ ಭಾರಿ ಗಾತ್ರದ ವಾಹನಗಳು ಕಬ್ಬಿನ ಲಾರಿ ಟ್ರ್ಯಾಕ್ಟರ್ ಗಳು ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ಮಾರ್ಗ ಮಧ್ಯದಲ್ಲಿ ಎಲ್ಲಿ ನೋಡಿದರಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ಸಂಚಾರಕ್ಕೆ ಸಂಚಕಾರ ತಂದಿದೆ.ಮಳೆಗಾಲದಲ್ಲಿ ಭೀಮಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಭುಯ್ಯಾರ ಬ್ಯಾರೇಜ್ ಹಾಗೂ ಕೊರಬೂ ಹಳ್ಳದಲ್ಲಿ ನಿರ್ಮಿಸಿರುವ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಬಂದು ಬ್ಯಾರೇಜ್ ಹಾಗೂ ಕೊರಬೂ ಹಳ್ಳದ ಸೇತುವೆ ಪ್ರವಾಹದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗುತ್ತವೆ. ಮಣ್ಣೂರದಿಂದ ಭುಯ್ಯಾರ ಮೂಲಕ ಇಂಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.
ವರುಣನ ಕೃಪೆಗಾಗಿ ಬಾನಿನತ್ತ ಸುರಪುರ ತಾಲೂಕಿನ ಅನ್ನದಾತರ ಚಿತ್ತ
ಈ ಹಿನ್ನೆಲೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದಷ್ಟುಬೇಗನೆ ಮಣ್ಣೂರ ಮತ್ತು ಭುಯ್ಯಾರ ಗ್ರಾಮದ ನಡುವೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭುಯ್ಯಾರ ಬ್ಯಾರೇಜ್‌ಗೆ ತಡೆಗೋಡೆ ನಿರ್ಮಿಸಿ ಅಪಾಯ ಆಗುವುದನ್ನು ತಪ್ಪಿಸಬೇಕು. ಮಣ್ಣೂರದಿಂದ ಭುಯ್ಯಾರಕ್ಕೆ ಹೋಗುವ ರಸ್ತೆ ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಭುಯ್ಯಾರ ಬ್ಯಾರೇಜ್ ನ ಎತ್ತರ ಹೆಚ್ಚಿಸಬೇಕು ಎಂದು ಮಣ್ಣೂರ ಬಾಬಾನಗರ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.