ಕೋಮು ಸೌಹಾರ್ಧತೆ ನೆಪವೊಡ್ಡಿ ಭಟ್ಕಳದ ಹಿಂದೂ ಕಾರ್ಯಕರ್ತನ ಗಡಿಪಾರು ಮಾಡಿದ ಸರ್ಕಾರ!
ಕೋಮು ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಭಟ್ಕಳದ ಹನುಮಾನ್ ನಗರದ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ (ಏ.02): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಭಟ್ಕಳದ ಹನುಮಾನ್ ನಗರದ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಭಟ್ಕಳ ತೆಂಗಿನ ಗುಂಡಿಯ ಧ್ವಜ ಗಲಾಟೆ ಪ್ರಕರಣ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತ ಭಟ್ಕಳದ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಗಡಿಪಾರಿಗೆ ಆದೇಶ ಮಾಡಲಾಗಿದೆ. ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವುದನ್ನು ತಡೆಯುವ ನಿಟ್ಟಿನಲ್ಲಿ ಗಡಿಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಶಿಫಾರಸ್ಸಿನ ಮೇಲೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದಿದ್ದಾರೆ.
Lok Sabha Election 2024: ಅನಂತ್‌ಗೆ ಟಿಕೆಟ್ ತಪ್ಪಿದ ಬಳಿಕ ಬರಿದಾದ ಕಾಂಗ್ರೆಸ್ ಬತ್ತಳಿಕೆ..!
ಇನ್ನು ತೆಂಗಿನಗುಂಡಿ ಧ್ವಜ ಪ್ರಕರಣದಡಿಯಲ್ಲಿ 2017ರಲ್ಲಿ ಪುರಸಭೆಯ ಅಂಗಡಿ ತೆರವು ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ ಮಾಡಲಾಗಿತ್ತು. ಈ ಪ್ರತಿಭಟನೆ ಸಂದರ್ಭ ಗಲಾಟೆ ನಡೆದಿದ್ದು 5 ಕ್ರಿಮಿನಲ್ ಪ್ರಕರಣಗಳು ಇವರ ವಿರುದ್ಧ ದಾಖಲಾಗಿತ್ತು. 3 ಪ್ರಕರಣಗಳು ಖುಲಾಸೆಗೊಂಡಿದ್ದು, 2 ಪ್ರಕರಣ ತನಿಖೆ ಹಂತದಲ್ಲಿದೆ. ಚುನಾವಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡೋ ದೃಷ್ಠಿಯಿಂದ ಗಡಿಪಾರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.