ಸಧ್ಯ ಇರುವ ಜೀವನ ಶೈಲಿಗೆ ನಾವೆಲ್ಲ 60 ವರ್ಷ ಬದುಕಿದ್ರೆ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಕ್ಯಾಮಿಕಲ್‌ ಮಿಶ್ರಿತ ಆಹಾರ, ಬದಲಾಗಿರುವ ಜೀವನ ಪದ್ದತಿಗಳು ಮಾನವನ ಜೀವಿತಾವಧಿಯನ್ನ ಕಡಿತ ಮಾಡಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬಳು ಬರೊಬ್ಬರಿ 110 ವರ್ಷಗಳ ಕಾಲ ಜೀವಿಸಿ ಇಂದು ತನ್ನ ಪಯಣ ಅಂತ್ಯಗೊಳಿಸಿದ್ದಾರೆ.

- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಜ.11): ಸಧ್ಯ ಇರುವ ಜೀವನ ಶೈಲಿಗೆ ನಾವೆಲ್ಲ 60 ವರ್ಷ ಬದುಕಿದ್ರೆ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಕ್ಯಾಮಿಕಲ್‌ ಮಿಶ್ರಿತ ಆಹಾರ, ಬದಲಾಗಿರುವ ಜೀವನ ಪದ್ದತಿಗಳು ಮಾನವನ ಜೀವಿತಾವಧಿಯನ್ನ ಕಡಿತ ಮಾಡಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬಳು ಬರೊಬ್ಬರಿ 110 ವರ್ಷಗಳ ಕಾಲ ಜೀವಿಸಿ ಇಂದು ತನ್ನ ಪಯಣ ಅಂತ್ಯಗೊಳಿಸಿದ್ದಾರೆ.

110 ವರ್ಷ ಬದುಕಿದ ಅಜ್ಜಿ ಇನ್ನಿಲ್ಲ!

ವಿಜಯಪುರ ನಗರ ಇಬ್ರಾಹಿಂಪುರ ನಿವಾಸಿ ಭಾಗವ್ವ ಕೋಲ್ಹಾರ ಶತಾಯುಷಿ ಅಜ್ಜಿ ಇಂದು ತನ್ನ ಬದುಕಿನ ಪಯಣ ಮುಗಿಸಿದ್ದಾಳೆ. ಬರೊಬ್ಬರಿ 110 ವರ್ಷಗಳ ಕಾಲ ಬದುಕಿದ್ದ ಭಾಗವ್ವ ಅಜ್ಜಿ ವಯೋಸಹಜ ಕಾಯಿಲೆಗೆ ತುತ್ತಾಗಿ ಇಂದು ಕೊನೆಯುಸಿರೆಳೆದಿದ್ದಾಳೆ. ಅಜ್ಜಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಬ್ರಾಹಿಂಪುರ ಏರಿಯಾದ ಜನರು ಕಂಬನಿ ಮಿಡಿದಿದ್ದಾರೆ. ಶತಮಾನದ ವರೆಗು ಬದುಕಿ ಕಣ್ಮರೆಯಾದ ಅಜ್ಜಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ.

ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ 18 ಪವಿತ್ರ ಮೆಟ್ಟಿಲು ಏರಿದ ಶತಾಯುಷಿ ಪಾರುಕುಟ್ಟಿಯಮ್ಮ

ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಜನಿಸಿದ್ದ ಭಾಗವ್ವ!

110 ವರ್ಷಗಳ ಕಾಲ ಬದುಕಿದ್ದ ಭಾಗವ್ವ ಅಜ್ಜಿ, ಹುಟ್ಟಿದ್ದು 1913 ಜನೇವರಿ 1 ರಂದು. ಸ್ವಾತಂತ್ರ್ಯ ಸಿಗುವ ಮೊದಲೇ ಹುಟ್ಟಿ ಬಾಳಿದವಳು. ದೇಶದಲ್ಲಿ ಬ್ರಿಟಿಷರ ದಾಸ್ಯದಿಂದ ಬಿಡಿಸಿಕೊಳ್ಳಲು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಹೋರಾಟ ಪೀಕ್‌ ಲೇವಲ್‌ ನಲ್ಲಿದ್ದಾಗ ಅಜ್ಜಿಗೆ 33 ವಯಸ್ಸಿತ್ತು. ಸ್ವಾತಂತ್ರ್ಯ ಹೋರಾಟದ ತೀವ್ರತೆ, ಹೋರಾಟದ ಸಂದರ್ಭಗಳನ್ನ ಕಣ್ಣಾರೆ ಕಂಡಾಕೆ. ತನ್ನ ಮಕ್ಕಳು, ಮೊಮ್ಮಕ್ಕಳಿಗು ಬ್ರೀಟಿಷರ ಆಡಳಿತ, ಸ್ವಾತಂತ್ರ್ಯಕ್ಕಾಗಿ ನಡೆದ ಸಂಗ್ರಾಮದ ಬಗ್ಗೆ ಹೇಳುತ್ತಿದ್ದಳು ಅನ್ನೋದೆ ವಿಶೇಷ..

ಅಜ್ಜಿಯ ಮರಿ ಮೊಮ್ಮಕ್ಕಳೆ 47 ಜನ!

ಭಾಗವ್ವ ಅಜ್ಜಿಯ ಪರಿವಾರ ಬಹಳ ದೊಡ್ಡು. ಭಾಗವ್ವ ಅಜ್ಜಿಗೆ ಬರೊಬ್ಬರಿ 12 ಮಕ್ಕಳಿದ್ದರು. ಈ 12 ಮಕ್ಕಳಲ್ಲಿ 7 ಜನ ಗಂಡು ಮಕ್ಕಳು, 5 ಜನ ಹೆಣ್ಣು ಮಕ್ಕಳಿದ್ದಾರೆ. 30ಜನ ಮೊಮ್ಮಕ್ಕಳಿದ್ದಾರೆ. 17 ಜನ ಮರಿ ಮೊಮ್ಮಕ್ಕಳಿದ್ದಾರೆ. ಅಜ್ಜಿಯ ಮಕ್ಕಳೇ ಸ್ವತಃ ವಯಸ್ಸಾಗಿ ವಯೋಸಹಜವಾಗಿಯೇ ತೀರಿಕೊಂಡಿದ್ದಾರೆ ಅನ್ನೋದು ಅಚ್ಚರಿಯ ಸಂಗತಿ. ಅಜ್ಜಿ ಸಾವಿನಿಂದಾಗಿ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಲ್ಲಿ ದುಃಖ ಮಡುಗಟ್ಟಿದೆ..

ಸಾಯುವವರೆಗು ಕೋಲು ಮುಟ್ಟಲಿಲ್ಲ ಭಾಗವ್ವಜ್ಜಿ!

ಭಾಗವ್ವ ಅಜ್ಜಿಗೆ ವಯಸ್ಸು 110 ವಯಸ್ಸಾದ್ರು ಉರುಗೋಲನ್ನ ಮುಟ್ಟಿಲ್ಲ ಅನ್ನೋದು ಮತ್ತೊಂದು ಅಚ್ಚರಿಯ ವಿಚಾರ. ಈಗೆಲ್ಲ 60 ವರ್ಷ ದಾಟುತ್ತಿದ್ದಂತೆ ಕಯ್ಯಲ್ಲಿ ಆಧಾರಕ್ಕಾಗಿ ಬಡಿಗೆ ಹಿಡಿಯೋರೆ ಜಾಸ್ತಿ. ಆದ್ರೆ ಭಾಗವ್ವ ಅಜ್ಜಿ 110 ವಯಸ್ಸಿನಲ್ಲು ಅದೇಷ್ಟು ಸದೃಢಳಾಗಿದ್ದಳು ಎಂದರೆ ಒಂದೆ ಒಂದು ದಿನವು ಕೋಲನ್ನ ಮುಟ್ಟಲಿಲ್ಲ. ಬಡಿಗೆಯನ್ನ ಆಧಾರವಾಗಿ ಹಿಡಿದುಕೊಂಡಿಲ್ಲವಂತೆ. ಈ ವಿಚಾರ ತಮಗು ಅಚ್ಚರಿ ತರಿಸಿದೆ ಎಂದು ಅಜ್ಜಿ ಮೊಮ್ಮಗ ಮಂಜುನಾಥ ಕೋಲಾರ್‌ ಏಷ್ಯಾನೆಟ್‌ ಸುವರ್ಣ‌ ನ್ಯೂಸ್ ನ್ಯೂಸ್.ಕಾಮ್‌ asianet suvarna news.com ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ..

ಜಪಾನೀಯರ ಸುದೀರ್ಘ ಬದುಕಿನ ಸೂತ್ರ, ನೀವೂ ಆಯುಷ್ಯ ಹೆಚ್ಚಿಸಿಕೊಳ್ಳಿ!

ಮೃತದೇಹದ ಮೇಲೆ ಚಿನ್ನದ ಹೂವು ಹಾರಿಸಿದ ಮರಿ ಮೊಮ್ಮಕ್ಕಳು!

ಉತ್ತರ ಕರ್ನಾಟಕ ಹಾಗೂ ಹಿಂದೂ ಸಂಪ್ರದಾಯದಲ್ಲಿ ಹಿರಿಯರು ಜೀವಿತಾವಧಿಯಲ್ಲಿ ಮೊಮ್ಮಕ್ಕಳಿಂದ ಮಕ್ಕಳನ್ನ ಅಂದ್ರೆ ಮರಿ ಮೊಮ್ಮಕ್ಕಳನ್ನ ಕಂಡರೆ ಅಂತ ಹಿರಿಯರು ಸಾವನ್ನಪ್ಪಿದಾಗ ಶವದ ಮೇಲೆ ಚಿನ್ನದ ಹೂವು ಹಾರಿಸುವ ಸಂಪ್ರದಾಯವಿದೆ. ಹಾಗೇ ಭಾಗವ್ವ ಅಜ್ಜಿ ಮರಿ ಮೊಮ್ಮಕ್ಕಳನ್ನ ಕಂಡಿದ್ದು ಅಜ್ಜಿಯ ಶವದ ಮೇಲೆ ಮರಿ ಮೊಮ್ಮಕ್ಕಳು 5ಗ್ರಾಂ ಬಂಗಾರದ ಹೂವುಗಳನ್ನ ಹಾರಿಸಿ ಅಜ್ಜಿಗೆ ಬೀಳ್ಕೊಟ್ಟಿದ್ದಾರೆ.