ಶನಿವಾರ ಇಲ್ಲಿನ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ನಮ್ಮ ಪಕ್ಷವೇ ಗೆಲ್ಲಲಿದೆ ಎಂದು ಇಲ್ಲಿನ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಅಡಿಕೆ ತೋಟ ಹಾಗೂ ಲಕ್ಷಾಂತರ ರು.ಗಳ ಬೆಟ್ಟಿಂಗ್‌ ವ್ಯವಹಾರ ನಡೆದಿದೆ.

 ಪಾವಗಡ (ತುಮಕೂರು) : ಶನಿವಾರ ಇಲ್ಲಿನ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ನಮ್ಮ ಪಕ್ಷವೇ ಗೆಲ್ಲಲಿದೆ ಎಂದು ಇಲ್ಲಿನ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಅಡಿಕೆ ತೋಟ ಹಾಗೂ ಲಕ್ಷಾಂತರ ರು.ಗಳ ಬೆಟ್ಟಿಂಗ್‌ ವ್ಯವಹಾರ ನಡೆದಿದೆ.

ಮೇ 13ರಂದು ತುಮಕೂರಿನ ಬಿ.ಎಚ್‌.ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಕೊಠಡಿಗಳಲ್ಲಿ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ ಕೈಗೊಂಡಿದ್ದು ಶುಕ್ರವಾರವೇ ತಾಲೂಕಿನ ಬಹುತೇಕ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಇತರೆ ಪಕ್ಷೇತರ ಅಭ್ಯರ್ಥಿ ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ಬಸ್‌ ಹಾಗೂ ಇತರೆ ಸ್ವಂತ ವಾಹನಗಳಲ್ಲಿ ತುಮಕೂರಿಗೆ ತೆರಳಿದ್ದಾರೆ. ಅಲ್ಲಿ ಕಾರ್ಯಕರ್ತರು ಉಳಿದುಕೊಳ್ಳಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಲಾಡ್ಜ್‌ಗಳಲ್ಲಿ ರೂಂ ಮತ್ತು ಊಟ, ತಿಂಡಿಗೆ ವ್ಯವಸ್ಥೆ ಕಲ್ಪಿಸಿರುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.

ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಗೆಲ್ಲುವ ನಿರೀಕ್ಷೆ ಹೊಂದಿದ ಕಾರ್ಯಕರ್ತರು ವಾದ್ಯ ಹಾಗೂ ಪುಷ್ಪಾಹಾರಗಳಿಗೆ ಆರ್ಡರ್‌ ಮಾಡಿ ಫಲಿತಾಂಶ ಹೊರಬೀಳುತ್ತಿದ್ದಂತೆ ಜಯಗಳಿಸಿದರೆ ತುಮಕೂರಿನಲ್ಲಿಯೇ ಭರ್ಜರಿ ಮೆರವಣಿಗೆಗೆ ಸಿದ್ಧತೆ ಕೈಗೊಂಡಿದ್ದಾರೆ. ಈ ಮಧ್ಯೆ ಬೆಳಗ್ಗೆಯಿಂದ ತಾಲೂಕಿನ ಬಹುತೇಕ ಕಡೆ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಅಡಿಕೆ, ವೀಳ್ಯದೆಲೆ ತೋಟ ಮತ್ತು 5ರಿಂದ 10 ಲಕ್ಷದ ವರೆಗೆ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಪಕ್ಷವೇ ಗೆಲ್ಲಿಲಿದೆ ಎಂದು ಬೆಟ್ಟಿಂಗ್‌ ವ್ಯವಹಾರಗೆ ಮುಂದಾಗಿದ್ದಾರೆ. ತಾಲೂಕಿನ ಬಿ.ಕೆ.ಹಳ್ಳಿ, ನಾಗಲಮಡಿಕೆ ಗ್ರಾಪಂ ವ್ಯಾಪ್ತಿಯಲ್ಲಿ ಮುಖಂಡರೊಬ್ಬರು ಕಾಂಗ್ರೆಸ್‌ ಗೆಲ್ಲಲಿದೆ ಎಂದು ತಮ್ಮ ಎರಡು ಎಕರೆಯ ಅಡಿಕೆ ತೋಟ ಹಾಗೂ 5 ಲಕ್ಷ ರುಗಳ ಬೆಟ್ಟಿಂಗ್‌ ಕರೆದಿದ್ದು ಜೆಡಿಎಸ್‌ ಗೆಲ್ಲಲಿದೆ ಎಂದು ಜೆಡಿಎಸ್‌ ಮುಖಂಡರೊಬ್ಬರು ಬೆಟ್ಟಿಂಗ್‌ ಸ್ವೀಕರಿಸಿ ಅವರು ಕೂಡ ತೋಟ ಹಾಗೂ 5 ಲಕ್ಷ ಹಣ ಕಟ್ಟಿರುವುದಾಗಿ ತಿಳಿದು ಬಂದಿದೆ. ಲಿಂಗದಹಳ್ಳಿ ಹಾಗೂ ಸಾಸಲಕುಂಟೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಮುಖಂಡರಿಬ್ಬರು 10 ಲಕ್ಷ ಬೆಟ್ಟಿಂಗ್‌ಗೆ ಆಹ್ವಾನಿಸಿದ್ದು, ಜೆಡಿಎಸ್‌ ಮುಖಂಡರು ಸಹ ಬೆಟ್ಟಿಂಗ್‌ಗೆ ಕಟ್ಟಿದ್ದಾರೆ. ಮರಿದಾಸನಹಳ್ಳಿ ಹಾಗೂ ವೈ.ಎನ್‌.ಹೊಸಕೋಟೆ, ವೆಂಕಟಾಪುರ ಇತರೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಸಾವಿರಾರು ರು. ಗಳ ಸಣ್ಣಪುಟ್ಟಬೆಟ್ಟಿಂಗ್‌ ವ್ಯವಹಾರ ನಡೆದಿರುವುದಾಗಿ ತಿಳಿದು ಬಂದಿದ್ದು, ಚುನಾವಣಾ ಫಲಿತಾಂಶಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಕಾಯುತ್ತಿದ್ದಾರೆ.

ಈ ಬಾರಿ ಕೈ ಸರ್ಕಾರ ಖಚಿತ

ಬೆಳಗಾವಿ (ಮೇ.13) : ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟುಬರುವುದಿಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 120ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಈ ಬಾರಿ ಕಾಂಗ್ರೆಸ್‌ ಸರ್ಕಾರ ರಚಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಾರಾಗುತ್ತಾರೆ? ಎನ್ನುವುದಕ್ಕಿಂತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ಮುಖ್ಯವಿದೆ. ಬಹುಮತ ಸಿಕ್ಕ ನಂತರ ಎಲ್ಲ ಶಾಸಕರು ಸೇರಿ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.

Karnataka assembly election: ಪಕ್ಷೇತರರ ಸೆಳೆಯಲು ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯತ್ನ...

ಗೌಡರ ಸಲಹೆ ಬೇಕು?: ಮೈತ್ರಿಗೆ ನಾವು ಸಿದ್ಧ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರುವ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದರೆ ಒಳ್ಳೆಯದು. ದೇವೇಗೌಡರದ್ದು, ಕುಮಾರಸ್ವಾಮಿ ಸಲಹೆ ಇದ್ದರೆ ಒಳ್ಳೆಯದು ಎಂದು ಹೇಳಿದ ಅವರು ಕಡೆಗೆ ಮೈತ್ರಿಗೂ ಮುಕ್ತ ಎಂಬ ಸುಳುಹು ಬಿಚ್ಚಿಟ್ಟರು.

ಅಶೋಕ್‌ ಪ್ಲಾನ್‌ ಫಲಿಸದು: ಕಡಿಮೆ ಕ್ಷೇತ್ರದಲ್ಲಿ ಗೆದ್ದರೂ ಸರ್ಕಾರ ರಚನೆ ಮಾಡುತ್ತೇವೆ ಎಂಬ ಆರ್‌.ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 75ರಿಂದ 80 ಕ್ಷೇತ್ರ ಮಾತ್ರ ಗೆಲ್ಲುತ್ತದೆ. ಅವರಿಗೆ ಸರ್ಕಾರ ಮಾಡಲು 30 ರಿಂದ 40 ಸೀಟ್‌ ಬೇಕಾಗುತ್ತದೆ. ಇನ್ನು, ಬಿಜೆಪಿ ಆಪರೇಷನ್‌ ಕಮಲ ಮಾಡುವುದು ಅವರ ಹಗಲುಗನಸಾಗಿದೆ. ಸುಮ್ಮನೆ ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ ಎಂದು ವ್ಯಂಗ್ಯವಾಡಿದರು.