ಗಣೇಶೋತ್ಸವಕ್ಕೆ ಭೂಗತ ಕೇಬಲ್ ಅಳವಡಿಸಿ: ಬೆಸ್ಕಾಂ ಸ್ಪಷ್ಟ ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಬೆಸ್ಕಾಂ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಗಣೇಶೋತ್ಸವಕ್ಕೆ ಭೂಗತ ಕೇಬಲ್ ಅಳವಡಿಸಿ ಎಂದು ಬೆಸ್ಕಾಂ ಸ್ಪಷ್ಟ ಸೂಚನೆ ನೀಡಿದೆ.
ಬೆಂಗಳೂರು (ಆ.30): ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಬೆಸ್ಕಾಂ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜತೆ ನಡೆದ ಸಭೆ ಬಳಿಕ ಬೆಸ್ಕಾಂ ನೂತನ ನಿಯಮಾವಳಿಗಳನ್ನು ವಿಧಿಸಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಗಣೇಶೋತ್ಸವ ಕಾರ್ಯಕ್ರಮ ಆಯೋಜಕರು, ಸಂಘಟಕರು ಸಂಬಂಧಪಟ್ಟ ಬಿಬಿಎಂಪಿ ವ್ಯಾಪ್ತಿಯಿಂದ ನಿರಾಕ್ಷೇಪಣಾ ಪತ್ರ ಪಡೆದು ಬೆಸ್ಕಾಂನ ಸಂಬಂಧಪಟ್ಟಉಪ ವಿಭಾಗದಲ್ಲಿ ಸಲ್ಲಿಸಬೇಕು. ಸಂಬಂಧಪಟ್ಟಉಪವಿಭಾಗದಲ್ಲಿ ನೀಡಲಾದ ವಿದ್ಯುತ್ ಮಂಜೂರಾತಿ ಪತ್ರದ ಅನುಸಾರ ಅಗತ್ಯ ಶುಲ್ಕವನ್ನು ಬೆಸ್ಕಾಂಗೆ ಪಾವತಿಸಿ ಸಂಪರ್ಕ ಪಡೆಯಬೇಕು. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ ಮತ್ತು ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಕಂಬದಿಂದ ನೆಲದಡಿ (ಭೂಗತ ಕೇಬಲ್ ಮೂಲಕ) ವಿದ್ಯುತ್ ತಂದು ಓವರ್ ಹೆಡ್ ಮಾರ್ಗದಲ್ಲಿ ಎಳೆದು ವಿದ್ಯುತ್ ಸಂಪರ್ಕ ಪಡೆಯಬೇಕು. ವಿದ್ಯುತ್ ಸಂಪರ್ಕ ಪಡೆಯುವ ವೇಳೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದಲೇ ಕೆಲಸ ಮಾಡಿಸಬೇಕು ಎಂದು ಸ್ಪಷ್ಟಸೂಚನೆ ನೀಡಲಾಗಿದೆ.
ಗಣಪತಿ ಪ್ರತಿಷ್ಠಾಪನೆ ಸ್ಥಳದ ಸುತ್ತ ಯಾವುದೇ ಇಎಚ್‌ಟಿ, ಎಚ್.ಟಿ., ಎಲ್‌ಟಿ ವಿದ್ಯುತ್ ಮಾರ್ಗ ಇರಬಾರದು. ಉತ್ಸವ ನಡೆಯುವ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಜನ ಭಾಗವಹಿಸುವುದಾದರೆ ಕಡ್ಡಾಯವಾಗಿ ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರ ಪಡೆಯಬೇಕು. ಬೆಂಕಿ ನಂದಿಸಲು ಅಗತ್ಯವಿರುವ ಅಗ್ನಿಶಾಮಕ ಸಾಧನ ಅಳವಡಿಸಬೇಕು.
ಗಣೇಶ ವಿಸರ್ಜನೆಗೆ 458 ಸ್ಥಳ ವ್ಯವಸ್ಥೆ ಮಾಡಿದ ಬಿಬಿಎಂಪಿ
ಬೀದಿಗಳಲ್ಲಿ ಗಣೇಶ ವಿಗ್ರಹವನ್ನು ಮೆರವಣೆಗೆ ಮಾಡುವ ರಸ್ತೆಯ ನಕ್ಷೆ ಮತ್ತು ದಿನಾಂಕವನ್ನು ಮೊದಲೇ ಕಾರ್ಯಕ್ರಮದ ಆಯೋಜಕರು ನಿಗದಿಪಡಿಸಿಕೊಂಡು, ಸಂಬಂಧಪಟ್ಟಬೆಸ್ಕಾಂ ಉಪ-ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಗಣೇಶ ಹಬ್ಬಕ್ಕೆ ಏರದ ಹೂ ಹಣ್ಣು ಬೆಲೆ! ವ್ಯಾಪಾರ ವಹಿವಾಟು ಹಿನ್ನಲೆ KR MARKET ಜಾಮ್
ಸಮಸ್ಯೆಯಾದರೆ 1912ಕ್ಕೆ ಕರೆ ಮಾಡಿ: ವಿದ್ಯುತ್ ಉಪಕರಣಗಳು ಹಾಗೂ ವಿದ್ಯುತ್ ತಂತಿಗಳಿಂದ ದೂರವಿರಬೇಕು. ಯಾವುದಾದರು ವಿದ್ಯುತ್ ತಂತಿ ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ತಿಳಿಸಲು ಸಂಘಟಕರಿಗೆ ತಿಳಿಸಲಾಗಿದೆ. ಯಾವುದೇ ವಿದ್ಯುತ್ ಉಪಕರಣಗಳನ್ನು ಒದ್ದೆ ಇರುವ ಕೈಗಳಲ್ಲಿ ಮುಟ್ಟಬಾರದು ಹಾಗೂ ಮಕ್ಕಳನ್ನು ವಿದ್ಯುತ್ ಉಪಕರಣಗಳು ಇರುವ ಜಾಗದಿಂದ ದೂರವಿರಿಸಬೇಕು. ವಿದ್ಯುತ್ ಕಂಬಗಳಿಗೆ, ಪರಿವರ್ತಕ ಕೇಂದ್ರಗಳಿಗೆ ಸಾರ್ವಜನಿಕ ಪ್ರಕಟಣೆಯ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು ಎಂದು ಗಣೇಶೋತ್ಸವ ಅಯೋಜಕರಿಗೆ ಸೂಚಿಸಲಾಗಿದೆ.
ಹಬ್ಬದ ಹಿನ್ನೆಲೆ, ಪುರಭವನ ಬಾಡಿಗೆ ದರ ಇಳಿಕೆ:
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಿಬಿಎಂಪಿ ನಗರದ ಪುಟ್ಟಣ್ಣಚೆಟ್ಟಿ ಪುರಭವನದ ಬಾಡಿಗೆ ದರ ಇಳಿಸಿದ್ದು, ವಿಶೇಷವಾಗಿ ಎಲ್ಲ ನಾಟಕ-ಪ್ರಸಂಗಗಳ ಪ್ರದರ್ಶನ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಬಾಡಿಗೆಯಲ್ಲಿ ಶೇ.50ರಷ್ಟುರಿಯಾಯಿತಿ ನೀಡಲಿದೆ.
ಸೋಮವಾರ ಈ ಕುರಿತು ಮಾಹಿತಿ ನೀಡಿರುವ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು, ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಮತ್ತು ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಉದ್ದೇಶದಿಂದ ಬಿಬಿಎಂಪಿ ಒಡೆತನದ ಟೌನ್‌ಹಾಲ್ (ಪುಟ್ಟಣ್ಣ ಚೆಟ್ಟಿಪುರಭವನ) ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ನೂತನ ದರವು ಸೆ.1ರಿಂದ ಜಾರಿಗೆ ಬರಲಿದೆ. ಬೆಂಗಳೂರಿನ ಸಾಂಸ್ಕೃತಿಕ ಹಾಗೂ ರಂಗಭೂಮಿ ಸಂಘಟನೆಗಳು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಪೂರ್ತಿ ದಿನಕ್ಕೆ (ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ) ಎಸಿಗೆ .75 ಸಾವಿರ ಹಾಗೂ ನಾನ್ ಎಸಿಗೆ .60 ಸಾವಿರ ನಿಗದಿಪಡಿಸಲಾಗಿತ್ತು. ಇದೀಗ ಪರಿಷ್ಕೃತ ದರದಂತೆ ಎಸಿಗೆ .60 ಸಾವಿರ ಮತ್ತು ನಾನ್‌ಎಸಿಗೆ .50 ಸಾವಿರ ದರ ನಿಗದಿಪಡಿಸಲಾಗಿದ್ದು, ತೆರಿಗೆ ಪ್ರತ್ಯೇಕವಾಗಿರಲಿದೆ. ಮೊದಲಾರ್ಧ ದಿನಕ್ಕೆ (ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ) ಹಾಗೂ ದ್ವಿತೀಯಾರ್ಧ ದಿನಕ್ಕೆ(ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ) ಎಸಿಗೆ .30 ಸಾವಿರ ಮತ್ತು ನಾ