Asianet Suvarna News Asianet Suvarna News

ಗಣೇಶ ವಿಸರ್ಜನೆಗೆ 458 ಸ್ಥಳ ವ್ಯವಸ್ಥೆ ಮಾಡಿದ ಬಿಬಿಎಂಪಿ

ಗಣೇಶ ವಿಸರ್ಜನೆಗೆ 458 ಸ್ಥಳ ವ್ಯವಸ್ಥೆ ಮಾಡಿದ ಬೆಂಗಳೂರು ಮಹಾನಗರ ಪಾಲಿಕೆ. 421 ತಾತ್ಕಾಲಿಕ ಸಂಚಾರಿ ಟ್ಯಾಂಕರ್‌. ದೊಡ್ಡ ಗಣೇಶ ವಿಸರ್ಜನೆಗೆ 37 ಕಲ್ಯಾಣಿ ನಿಗದಿ. 

BBMP  arranged 458 places for Ganesha  immersion gow
Author
First Published Aug 29, 2022, 6:31 AM IST

ಬೆಂಗಳೂರು (ಆ.29): ನಗರದ ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿ 458 ಸ್ಥಳಗಳಲ್ಲಿ ವ್ಯವಸ್ಥೆ ಮಾಡಿದೆ. ಮನೆಗಳಿಗೆ ಹತ್ತಿರದಲ್ಲಿಯೇ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಬಿಬಿಎಂಪಿ ಮಾಡುತ್ತಿದೆ. ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ 421 ತಾತ್ಕಾಲಿಕ ಸಂಚಾರಿ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನು 5 ಇಂಚಿನಿಂದ 3 ಅಡಿ ಎತ್ತರದವರೆಗಿನ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಈ ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡಬಹುದು. ದೊಡ್ಡ ಮೂರ್ತಿಗಳನ್ನು ವಿಸರ್ಜನೆ ಮಾಡಲು ಒಟ್ಟು 37 ತಾತ್ಕಾಲಿಕ ಕಲ್ಯಾಣಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಹಲಸೂರು ಕೆರೆಯಲ್ಲಿ ಕಲ್ಯಾಣ ನಿರ್ಮಾಣ ಮಾಡಲಾಗಿದೆ. 107 ಮೊಬೈಲ್‌ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ ಸ್ಯಾಂಕಿ ಕೆರೆ ಕಲ್ಯಾಣಿ ಹಾಗೂ 48 ಮೊಬೈಲ್‌ ಟ್ಯಾಂಕರ್‌ ವ್ಯವಸ್ಥೆ, ದಕ್ಷಿಣ ವಲಯದ ಯಡಿಯೂರು ಕೆರೆ ಹಾಗೂ ಎಸಿಐ ಲೇಔಟ್‌ನಲ್ಲಿಯಲ್ಲಿ ಕಲ್ಯಾಣಿ, 51 ಟ್ಯಾಂಕರ್‌, ದಾಸರಹಳ್ಳಿ ವಲಯದ ಚೊಕ್ಕಸಂದ್ರ ಕೆರೆದಲ್ಲಿ ಕಲ್ಯಾಣಿ ಹಾಗೂ 18 ಮೊಬೈಲ್‌ ಟ್ಯಾಂಕರ್‌.

ಬೊಮ್ಮನಹಳ್ಳಿ ವಲಯದಲ್ಲಿ ಕೂಡ್ಲು ದೊಡ್ಡಕೆರೆ, ಸಿಂಗಸಂದ್ರ ಕೆರೆ, ಅರಕೆರೆ ಕೆರೆಯಲ್ಲಿ ಕಲ್ಯಾಣಿ ಹಾಗೂ 59 ಮೊಬೈಲ್‌ ಟ್ಯಾಂಕರ್‌, ಮಹದೇವಪುರ ವಲಯದಲ್ಲಿ ಬಿ.ನಾರಾಯಣಪುರ ಕೆರೆ, ವಿಭೂತಿಪುರ, ಚೆಲ್ಕೆರೆ, ಕಲ್ಕೆರೆ, ಮೇಡಹಳ್ಳಿ, ಕಾಡುಗೋಡಿ ಕಾಶಿ ವಿಶ್ವನಾಥ ದೇವಸ್ಥಾನ, ವಾಗ್ದೇವಿ ವಿಲಾಸ್‌ ರಸ್ತೆ, ಕೈಕೊಂಡ್ರಹಳ್ಳಿ ಕೆರೆ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ ಹಾಗೂ 21 ಮೊಬೈಲ್‌ ಟ್ಯಾಂಕರ್‌, ರಾಜರಾಜೇಶ್ವರಿ ನಗರ ವಲಯದ ಮಾದವಾರ, ಹೇರೋಹಳ್ಳಿ, ಉಲ್ಲಾಳ, ದುಬಾಸಿಪಾಳ್ಯ, ಗಾಂಧಿನಗರ, ಕೋಣಸಂದ್ರಕೆರೆ, ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ ಕಲ್ಯಾಣಿ ಹಾಗೂ 113 ಮೊಬೈಲ್‌ ಟ್ಯಾಂಕರ್‌, ಯಲಹಂಕ ವಲಯದ ಹೆಬ್ಬಾಳ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ, ಕೋಗಿಲು, ಜಕ್ಕೂರು, ರಾಚೇನಹಳ್ಳಿ ಕೆರೆ, ಸಹಕಾರನಗರ ಗಣಪತಿ ದೇವಸ್ಥಾನ, ದೊಡ್ಡಬೊಮ್ಮಸಂದ್ರ ಕೆರೆ, ಬಿಇಎಲ್‌ ಲೇಔಟ್‌ನ ರಾಘವೇಂದ್ರ ಸ್ವಾಮಿ ಮಠ, ಸಿಂಗಾಪುರ ಕೆರೆಯಕಲ್ಯಾಣಿ ಹಾಗೂ 4 ಮೊಬೈಲ್‌ ಟ್ಯಾಂಕರ್‌ ವ್ಯವಸ್ಥೆಯನ್ನು ಪಾಲಿಕೆ ಮಾಡಿದೆ.

ಗಣೇಶೋತ್ಸವಕ್ಕೆ ಬೆಸ್ಕಾಂ ಅನುಮತಿ ಕಡ್ಡಾಯ: ತಾಲೂಕು ಉಪವಿಭಾಗದ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಸಾರ್ವಜನಿಕರಿಗೆ ಹಾಗೂ ಆಯೋಜಕರಿಗೆ ಬೆವಿಕಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಕೆಲವು ನಿದೇರ್ಶನಗಳನ್ನು ಪಾಲಿಸುವಂತೆ ಬೆಸ್ಕಾಂ ತಿಳಿಸಿದೆ.

ಅಪಾಯಕಾರಿ ಕೆರೆಗಳ ಸಮೀಕ್ಷೆಗೆ ಸಿಎಂ ಬೊಮ್ಮಾಯಿ ಆದೇಶ

ಆಯೋಜಕರು ಗಣೇಶೋತ್ಸವ ಪೆಂಡಾಲ್‌ ನಿರ್ಮಿಸುವ ಸ್ಥಳದ ಸ್ಥಳೀಯ ಪಪಂನಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳಬೇಕು, ನಂತರ ಸದರಿ ಜಾಗಕ್ಕೆ ಸಂಬಂಧಪಟ್ಟಬೆವಿಕಂ ಶಾಖಾ ಕಚೇರಿಯಿಂದ ಶಾಖಾಧಿಕಾರಿಗಳು ತೆರಳಿ ಜಾಗವನ್ನು ಪರಿಶೀಲಿಸಿ ಇಎಚ್‌.ಟಿ/ಎಚ್‌.ಟಿ ಕ್ರಾಸಿಂಗ್‌ ಮತ್ತು ಸುರಕ್ಷತೆಯನ್ನು ಪರೀಶೀಲಿಸಿ, ಈ ಕಚೇರಿಗೆ ವರದಿ ನೀಡಬೇಕು, ಅರ್ಜಿಯ ಜೊತೆ ಸ್ಥಳೀಯ ಬೆವಿಕಂ ಶಾಖಾಧಿಕಾರಿ ವರದಿ ಹಾಗೂ ನೊಂದಾಯಿತ ವಿದ್ಯುತ್‌ ಗುತ್ತಿಗೆದಾರರಿಂದ ವೈರಿಂಗ್‌ ಸುರಕ್ಷತೆ ಬಗ್ಗೆ ಸಮಾಪನಾ ವರದಿಯನ್ನು ಪಡೆದು ಕಚೇರಿಗೆ ಸಲ್ಲಿಸಬೇಕು.

ECO FRIENDLY GANESHA; ಏಕಕಾಲದಲ್ಲಿ 3308 ಗಣೇಶ ತಯಾರಿಸಿ ಗಿನ್ನೆಸ್‌ ರೆಕಾರ್ಡ್‌

100 ಜನಕ್ಕಿಂತ ಹೆಚ್ಚು ಜನ ಸೇರುವ ಸಂದರ್ಭ ಬಂದಲ್ಲಿ ಕಡ್ಡಾಯವಾಗಿ ವಿದ್ಯುತ್‌ ಪರಿವೀಕ್ಷಕರಿಂದ ಅನುಮತಿ ಪತ್ರವನ್ನು ಪಡೆದು ಅನುಮತಿ ನೀಡಲಾಗುವುದು, ಇದಕ್ಕೆ ಆಯೋಜಕರು ಕಡ್ಡಾಯವಾಗಿ ಮುಚ್ಚಳಿಕೆ ಪತ್ರವನ್ನು ಬರೆದುಕೊಡುವುದು. ಅನಧೀಕೃತ ವಿದ್ಯುತ್‌ ಬಳಕೆಗೆ ಅವಕಾಶವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ವಿದ್ಯುತ್‌ ಕಳ್ಳತನದ ಮೊಕದ್ದಮೆಯನ್ನು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ವಿ.) ಬಿ.ಜಿ.ಅರಸರಾಜು ತಿಳಿಸಿದ್ದಾರೆ.

Follow Us:
Download App:
  • android
  • ios