Asianet Suvarna News Asianet Suvarna News

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ಕ್ರಮ

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಅಧೀಕ್ಷಕರ ನೇಮಕ| ಮೂರು ಪರೀಕ್ಷಾ ಕೇಂದ್ರಗಳನ್ನು ಸೇರಿಸಿ ಒಬ್ಬ ನೋಡಲ್‌ ಅಧಿಕಾರಿ ನೇಮಕ| ಪರೀಕ್ಷಾ ಕೇಂದ್ರದ ಅಧೀಕ್ಷಕರು ಪ್ರತಿದಿನ ಪರೀಕ್ಷಾ ನಡೆಯುವ 2 ತಾಸು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಯಾನಿಟೈಸ್‌ ಮಾಡಿಸುತ್ತಾರೆ|

BEO Umadevi Sonnada Talks Over SSLC Examination in Koppal
Author
Bengaluru, First Published Jul 1, 2020, 7:46 AM IST

ಮುನಿರಾಬಾದ್‌(ಜು. 01): ಕೊಪ್ಪಳ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಬಿಇಒ ಉಮಾದೇವಿ ಸೊನ್ನದ ಹೇಳಿದ್ದಾರೆ. 

ಮುನಿರಾಬಾದ್‌ನ ವಿಜಯನಗರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಒಟು 21 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿದ್ದು 6,887 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಎಸ್‌-ಸ್ಯಾನಿಟೇಜರ್‌, ಎಂ-ಮಾಸ್ಕ್‌, ಎಸ್‌- ಸೋಷಿಯಲ್‌ ಡಿಸ್ಟೆನ್ಸ್‌ (ಸಾಮಾಜಿಕ ಅಂತರ) ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕುಷ್ಟಗಿ: ರಜೆಗೆ ಗ್ರಾಮಕ್ಕೆ ಬಂದ ಯೋಧನಿಗೂ ವಕ್ಕರಿಸಿತು ಕೊರೋನಾ...!

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಮೂರು ಪರೀಕ್ಷಾ ಕೇಂದ್ರಗಳನ್ನು ಸೇರಿಸಿ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಅಧೀಕ್ಷಕರು ಪ್ರತಿದಿನ ಪರೀಕ್ಷಾ ನಡೆಯುವ 2 ತಾಸು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಯಾನಿಟೈಸ್‌ ಮಾಡಿಸುತ್ತಾರೆ ಎಂದರು. 

ಪ್ರತಿ ಪರೀಕ್ಷಾ ಕೇಂದ್ರವು ನಾಲ್ವರು ಹೆಚ್ಚುವರಿ ಶಿಕ್ಷಕರನ್ನು ಮೀಸಲಿಡಲಾಗಿದ್ದು ಒಂದು ವೇಳೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಅಥವಾ ಶಿಕ್ಷಕರಿಯರಿಗೆ ಸೋಂಕು ತಗುಲಿದರೆ ಈ ಹೆಚ್ಚುವರಿ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.
 

Follow Us:
Download App:
  • android
  • ios