ಏರ್‌ಪೋರ್ಟ್‌ಲ್ಲಿ ನಡೆಯುತ್ತಿಲ್ಲ ಸಮರ್ಪಕ ಪರೀಕ್ಷೆ : ವಿದೇಶದಿಂದ ಬಂದ ಮಹಿಳೆ ಗಂಭೀರ ಆರೋಪ

ಬೆಂಗಳೂರಿನ ಏರ್‌ಪೋರ್ಟಲ್ಲಿ ನಡೆಯುತ್ತಿರುವ ಪರೀಕ್ಷೆ ಸಮರ್ಪಕವಾಗಿ ಇಲ್ಲ ಎಂದು ಆರೋಪ ಕೇಳಿ ಬಂದಿದೆ. ಮಹಿಳೆಯೊಬ್ಬರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

Bengaluru Woman Express unhappy overs  Airport Testing Method

ಬೆಂಗಳೂರು [ಮಾ.18]:  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಸೋಂಕಿದೆಯೇ ಎಂದು ನಡೆಸಲಾಗುತ್ತಿರುವ ತಪಾಸಣೆ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಂಗಳವಾರವಷ್ಟೇ ಅಬುದಾಬಿಯಿಂದ ಬೆಂಗಳೂರಿಗೆ ಬಂದಿರುವ ನಗರದ ಚಾಮರಾಜಪೇಟೆ ನಿವಾಸಿ ಗಾಯತ್ರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಮಾಡಲಾಗುವ ಪರೀಕ್ಷೆಯನ್ನು ಗಂಭೀರವಾಗಿ ಮಾಡಬೇಕೆಂದು ಹೇಳಿದರು. ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ. ಬಳಿಕ ನರ್ಸ್‌ಗಳು ನಿಮಗೆ ಕೆಮ್ಮ, ಶೀತ ಇದೆಯೇ ಎಂದು ಪ್ರಶ್ನಿಸುತ್ತಾರೆ. ಯಾವುದೇ ಸಮಸ್ಯೆ ಇಲ್ಲ ಎಂದರೆ, ಸೆಲ್‌್ಫ ಡಿಕ್ಲೆರೇಷನ್‌ ಪಡೆದು ಆಚೆ ಕಳುಹಿಸುತ್ತಿದ್ದಾರೆ. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 2572 ಮಂದಿ ಕೊರೋನಾ ಪ್ರತ್ಯೇಕ ನಿಗಾದಲ್ಲಿ!...

ಕೊರೋನಾ ವೈರಸ್‌ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನಾರ್ಹ. ವಿದೇಶಗಳಿಂದ ಬಂದವರಲ್ಲೇ ಕೊರೋನಾ ವೈರಸ್‌ ಸೋಂಕು ಪತ್ತೆಯಾಗುತ್ತಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಗಂಭೀರವಾಗಿ ಪರೀಕ್ಷೆಗೆ ಒಳಪಡಿಸಬೇಕು. ಥರ್ಮಲ್‌ ಸ್ಕಾ್ಯನಿಂಗ್‌ ಜೊತೆಗೆ ಶೀತ, ಕೆಮ್ಮು ಪರೀಕ್ಷೆಗಳನ್ನು ಸಮರ್ಪಕವಾಗಿ ಮಾಡಬೇಕು. ಕೆಲವರು ಶೀತ, ಕೆಮ್ಮು ಇದ್ದರೂ ಇಲ್ಲ ಎಂದು ಹೇಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಟೆತಾಸ್ಕೋಪ್‌ ಬಳಕೆ ಮಾಡಿ ತಪಾಸಣೆ ನಡೆಸಬೇಕು. ಪ್ರತಿಯೊಬ್ಬರ ತಪಾಸಣೆಗೆ ಕೊಂಚ ಸಮಯ ಹಿಡಿದರೂ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಲೋಪವಿಲ್ಲ: ಆರೋಗ್ಯ ಇಲಾಖೆ

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಥರ್ಮಲ್‌ ಸ್ಕಾ್ಯನಿಂಗ್‌ (ದೇಹದ ಉಷ್ಣಾಂಶ ಪರೀಕ್ಷೆ) ಮಾಡಲಾಗುತ್ತಿದೆ. ಸ್ಕಾ್ಯನಿಂಗ್‌ ವೇಳೆ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು ಪತ್ತೆಯಾದರೆ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ನಿಗಾವಹಿಸಲಾಗುತ್ತಿದೆ. ಉಳಿದಂತೆ ಪ್ರಯಾಣಿಕರಿಂದ ಸೆಲ್‌್ಫ ಡಿಕ್ಲೆರೇಷನ್‌ ಪಡೆದು ಬಳಿಕ ನಿಲ್ದಾಣದಿಂದ ಹೊರಗೆ ಬಿಡಲಾಗುತ್ತಿದೆ. ಪರೀಕ್ಷೆಯಲ್ಲಿ ಯಾವುದೇ ಲೋಪವಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ದಿನದ 24 ತಾಸು ಸುಮಾರು 40 ಮಂದಿ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 20 ಮಂದಿ ವೈದ್ಯರು, 10 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 10 ಮಂದಿ ನರ್ಸ್‌ಗಳು ಪಾಳಿ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದೇಶಗಳಿಂದ ಪ್ರತಿ ದಿನ ಸುಮಾರು ಆರು ಸಾವಿರದಿಂದ ಏಳು ಸಾವಿರ ಮಂದಿ ಬರುತ್ತಿದ್ದಾರೆ. ಭಾರತೀಯ ವಿಮಾನ ಪ್ರಾಧಿಕಾರ ಸೂಚಿಸಿರುವ ಕೊರೋನಾ ವೈರಸ್‌ ಶಂಕಿತ 15ಕ್ಕೂ ಹೆಚ್ಚು ದೇಶಗಳಿಂದ ಬರುತ್ತಿರುವ ಸುಮಾರು 2500 ಪ್ರಯಾಣಿಕರನ್ನು ಪ್ರತಿ ದಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios